Karnataka Times
Trending Stories, Viral News, Gossips & Everything in Kannada

Fixed Deposit: ಈ ಬ್ಯಾಂಕ್ ನಲ್ಲಿ 10 ಲಕ್ಷ ಎಫ್ ಡಿ ಇಟ್ಟರೆ 20 ಲಕ್ಷ ಪಡೆಯಬಹುದು, ಎಷ್ಟು ವರ್ಷಗಳಲ್ಲಿ ಗೊತ್ತಾ?

advertisement

ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಹೆಚ್ಚು ವಿಶ್ವಾಸವನ್ನು ಗಳಿಸಿಕೊಂಡಿರುವ ಬ್ಯಾಂಕ್ ಅಂದ್ರೆ ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಇದು ಸರ್ಕಾರದಿಂದ ಬೆಂಬಲಿತವಾಗಿರುವ ಬ್ಯಾಂಕ್ ಆಗಿದ್ದು, ಇಲ್ಲಿ ನೀವು ಹೂಡಿಕೆ ಮಾಡಿದರೆ ಸುರಕ್ಷಿತ ರಿಟರ್ನ್ ಪಡೆಯಬಹುದು.

ಎಸ್ ಬಿ ಐ (SBI) ಇಲ್ಲಿಯವರೆಗೆ ಸಾಕಷ್ಟು ಬೇರೆಬೇರೆ ರೀತಿಯ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲೂ ನಿಶ್ಚಿತ ಠೇವಣಿ (Fixed Deposit) ಯೋಜನೆಯ ಮೇಲೆ ಅತಿ ಉತ್ತಮ ಬಡ್ಡಿ ದರವನ್ನು ಕೂಡ ನೀಡಲಾಗುತ್ತಿದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಎಸ್‌ಬಿಐ ಎಫ್ ಡಿ ಠೇವಣಿಯ ಮೇಲೆ ಹೆಚ್ಚಿನ ಲಾಭ ಸಿಗುವಂತೆ ಯೋಜನೆ ರೂಪಿಸಿದೆ.

Image Source: Business today

ಎಸ್ ಬಿ ಐ ಎಫ್ ಡಿ (SBI Fixed Deposit) ಹೂಡಿಕೆ!

  • ನೀವು ನಿಮ್ಮ ಬಳಿ ಇರುವ ಹಣವನ್ನು ಒಂದೇ ಬಾರಿಗೆ ಠೇವಣಿ ಮಾಡಿ ಅತಿ ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಮಾಡಿಕೊಳ್ಳಬೇಕು ಎಂದು ಬಯಸಿದರೆ ಎಸ್ ಬಿ ಐ ನಿಶ್ಚಿತ ಠೇವಣಿ ಯೋಜನೆಯನ್ನು ಆಯ್ದುಕೊಳ್ಳಬಹುದು.
  • ಏಳು ದಿನಗಳಿಂದ 10 ವರ್ಷಗಳ ವರೆಗಿನ ಠೇವಣಿ ಮಾಡುವ ಸೌಲಭ್ಯ ಲಭ್ಯವಿದ್ದು ಸಾಮಾನ್ಯರಿಗಿಂತ ಹಿರಿಯ ನಾಗರಿಕರಿಗೆ 1% ನಷ್ಟು ಹೆಚ್ಚಿನ ಬಡ್ಡಿದರ ನೀಡಲಾಗುವುದು. ಎಸ್ ಬಿ ಐ ನಲ್ಲಿ ಡಿಸೆಂಬರ್ 27 2023 ಕ್ಕೆ ಬಡ್ಡಿದರ ಪರಿಷ್ಕರಿಸಲಾಗಿದ್ದು, ಎರಡು ಕೋಟಿಗಿಂತ ಕಡಿಮೆ ಠೇವಣಿ ಮಾಡಿದರೆ ಸಾಮಾನ್ಯ ಗ್ರಾಹಕರಿಗೆ 10 ವರ್ಷಗಳ ಠೇವಣಿಯ ಮೇಲೆ 6.5% ಬಡ್ಡಿ ಹಾಗೂ ಹಿರಿಯ ನಾಗರಿಕರಿಗೆ ಇದೆ ಅವಧಿಗೆ 7.5% ನಷ್ಟು ಬಡ್ಡಿ ಒದಗಿಸಲಾಗುವುದು.

ಹತ್ತು ವರ್ಷಗಳಲ್ಲಿ 10 ಲಕ್ಷ ರೂಪಾಯಿ ಆಗುತ್ತೆ, ಡಬಲ್!

ಎಸ್ ಬಿ ಐ (SBI) ನಲ್ಲಿ ನೀವು 10 ಲಕ್ಷಗಳನ್ನು ನಿಶ್ಚಿತ ಠೇವಣಿ ಆಗಿ ಹೂಡಿಕೆ ಮಾಡಿದರೆ ಅದನ್ನು 20 ಲಕ್ಷ ರೂಪಾಯಿ ಆಗಿ ಹಿಂಪಡೆಯಬಹುದು.

advertisement

ಸಾಮಾನ್ಯ ಗ್ರಾಹಕರ Fixed Deposit:

  • ಠೇವಣಿ ಮಾಡುವ ಮೊತ್ತ – 10 ಲಕ್ಷ ರೂಪಾಯಿಗಳು
  • ಠೇವಣಿಯ ಅವಧಿ + ಹತ್ತು ವರ್ಷಗಳು
  • ಬಡ್ಡಿದರ ವರ್ಷಕ್ಕೆ + 6.5%
  • ಬಡ್ಡಿ ಹಣ – 9,05,558 ರೂ.
  • ಒಟ್ಟು ಆದಾಯ – 19,05,558 ರೂಪಾಯಿಗಳು.

ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ – ವರ್ಷಕ್ಕೆ 7.5%

ಇದೇ ಹೂಡಿಕೆಗೆ ಸಿಗುವ ಬಡ್ಡಿ ಆದಾಯ – 11, 02,349 ರೂಪಾಯಿಗಳು.
ಗಳಿಸಬಹುದಾದ ಒಟ್ಟು ಆದಾಯ – 21,02,349 ರೂಪಾಯಿಗಳು.

Image Source: Quora

ಬಡ್ಡಿ ಆದಾಯದ ಮೇಲೆ ತೆರಿಗೆ!

ಎಸ್ ಬಿ ಐ ನಲ್ಲಿ ಅವಧಿ ಠೇವಣಿ ಮಾಡಿದರೆ ಅದನ್ನು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಐದು ವರ್ಷಗಳ ತೆರಿಗೆ ಉಳಿತಾಯ ಮಾಡಲು ಅವಕಾಶವಿದೆ. ಎಫ್ ಡಿ ಉಳಿತಾಯಕ್ಕೆ, ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ರಿಯಾಯಿತಿ ಪಡೆಯಬಹುದು. ಐದು ವರ್ಷಗಳ ವರೆಗೆ ತೆರಿಗೆ ಉಳಿತಾಯವನ್ನು ಎಫ್ ಡಿ ಹೂಡಿಕೆಯಿಂದ ಪಡೆಯಬಹುದು.

ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೂ ಎಫ್ ಡಿ (Fixed Deposit) ಇಂದ ಪಡೆದ ಬಡ್ಡಿ ಮೇಲೆ ನಿಮಗೆ ತೆರಿಗೆ ವಿಧಿಸಲಾಗುತ್ತದೆ ಅಂದರೆ ಎಫ್ ಡಿ ಹೂಡಿಕೆಯಿಂದ ಸಿಗುವ ಬಡ್ಡಿಯನ್ನು ನಿಮ್ಮ ಆದಾಯದ ಮೂಲ ಎಂದು ಪರಿಗಣಿಸಲಾಗುತ್ತದೆ ಹಾಗೂ ತೆರಿಗೆ ಸ್ಲಾಬ್ ಆಧಾರದ ಮೇಲೆ ತೆರಿಗೆ ಮೊತ್ತ ನಿಗದಿಪಡಿಸಲಾಗುತ್ತದೆ.

advertisement

Leave A Reply

Your email address will not be published.