Karnataka Times
Trending Stories, Viral News, Gossips & Everything in Kannada

Ration Card: ಇಂತವರಿಗೆ ಇನ್ಮುಂದೆ ರೇಷನ್ ಕಾರ್ಡ್ ಸೌಲಭ್ಯ ಸಿಗೋದಿಲ್ಲ! ಬಹುತೇಕ ಖಚಿತ ಆದೇಶ

advertisement

ಇಂದು ಪ್ರತಿಯೊಬ್ಬರಿಗೂ ಅತೀ ಮುಖ್ಯವಾದ ದಾಖಲೆ ಎಂದರೆ ಅದು ರೇಷನ್ ಕಾರ್ಡ್, ಸರಕಾರದಿಂದ ಸಿಗುವ ಯಾವುದೇ ಸೌಲಭ್ಯ ಪಡೆಯಬೇಕಿದ್ರೂ ಈ ರೇಷನ್ ಕಾರ್ಡ್ (Ration Card) ಎಂಬುದು ಅಗತ್ಯ ವಾಗಿ ಬೇಕಾಗಿದೆ. ಈ ಕಾರ್ಡ್ ಮೂರು ವಿಧಗಳಾಗಿ ವಿಂಗಡಣೆ ಮಾಡಿದ್ದು ಅಂತ್ಯೋದಯ, ಬಿಪಿಎಲ್ , ಮತ್ತು ಎಪಿಎಲ್ ಕಾರ್ಡ್ ಗಳಾಗಿ ವಿಂಗಡಣೆ ಮಾಡಿದೆ.‌ ಇವುಗಳನ್ನು ಪಡೆಯಬೇಕಾದ್ರೆ ಆಹಾರ ಇಲಾಖೆಯು ಕೆಲವೊಂದು ಷರತ್ತುಗಳನ್ನು ಗಳನ್ನು‌ ಕೂಡ ವಿಧಿಸಿದೆ. ಆ ಷರತ್ತುಗಳ ಅನ್ವಯವಾಗಿ ಕಾರ್ಡ್ ವಿಂಗಡಣೆ ಮಾಡಲಾಗುತ್ತದೆ.

ಇಂಥವರ Ration Card ರದ್ದು ಆಗಲಿದೆ:

ಪಡಿತರ ಚೀಟಿ ಹೊಂದಿರುವ ಕಾರ್ಡ್ ದಾರರು ತಮ್ಮ ಪಡಿತರ ಸಾಮಗ್ರಿಗಳನ್ನು ಖರೀದಿಸಲು ಆಸಕ್ತಿ ತೋರುತ್ತಿಲ್ಲ. ಬದಲಾಗಿ ಸರ್ಕಾರದ ವಿವಿಧ ಯೋಜನೆ ಗಳ ಸೌಲಭ್ಯ ಕ್ಕಾಗಿ ಮಾತ್ರ ರೇಷನ್ ಕಾರ್ಡ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ ಆರು ತಿಂಗಳವರೆಗೆ ಪಡಿತರ ಸಾಮಗ್ರಿಗಳನ್ನು ಪಡೆಯದೇ ಇರುವ ಗ್ರಾಹಕರ‌‌ ಪಡಿತರ ಚೀಟಿಯನ್ನು ರದ್ದುಗೊಳಿಸುವ ಬಗ್ಗೆ ಸರಕಾರ ಕ್ರಮ ಕೈಗೊಂಡಿದೆ.

Image Source: DNA India

ಅನರ್ಹವಾದ Ration Card ರದ್ದು:

advertisement

  • ಅದೇ ರೀತಿ ಬಿಪಿಎಲ್ ಕಾರ್ಡ್ ಪಡೆಯಲು‌‌ ಅನರ್ಹವಾದ ಫಲಾನುಭವಿಗಳ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ. ಹೌದು ಗ್ರಾಮೀಣ ಪ್ರದೇಶದಲ್ಲಿ‌ 12,000 ರೂಪಾಯಿಗಿಂತಲೂ ಹೆಚ್ಚಿನ ಆದಾಯ ಹೊಂದಿರುವವರು, ಆದಾಯ ತೆರಿಗೆ ಪಾವತಿದಾರರು, ‌ ಹೀಗೆ ಸರಕಾರದ ನಿಯಮಾನುಸಾರ ‌ಕಾರ್ಡ್ ಗಳನ್ನು ಪರಿಶೀಲಿಸಿ ಅನರ್ಹ ಜನರ ಬಿಪಿಎಲ್ ಕಾರ್ಡು (BPL Card)ಗಳನ್ನು ರದ್ದು ಮಾಡಲಾಗುತ್ತಿದೆ.
  • ಇನ್ನೂ ವೈಟ್ ಬೋರ್ಡ್ ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ‌ಇಲ್ಲ.‌ ಯಲ್ಲೋ ಬೋರ್ಡ್ (Yellow Board) ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಇರಲಿದೆ
  • ಈಗಾಗಲೇ ‌ಮೃತರ ಹೆಸರಲ್ಲಿದ್ದ ಪಡಿತರ ಫಲಾನುಭವಿಗಳ ಹೆಸರು ಡಿಲೀಟ್ ಮಾಡಿದ್ದು ಆಹಾರ ಇಲಾಖೆಯು ಈ ಬಗ್ಗೆಯು ಗಮನ ಹರಿಸಿದೆ.

ನೀವು ಅರ್ಹರಿಲ್ಲದೆ ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದರೆ ತಕ್ಷಣವೇ ಪಂಚಾಯತ್ ತಹಸಿಲ್ದಾರ್ ಕಚೇರಿ ಭೇಟಿ ಮಾಡುವ ಮೂಲಕ ಕಾರ್ಡ್ ಬದಲಾವಣೆಗೆ ಕ್ರಮ ಕೈಗೊಳ್ಳಿ.

Image Source: Carz4sale

ಅಕ್ಕಿಯ ಬದಲಾಗಿ ಹಣ ಜಮೆ

ಹೆಚ್ಚಿನ ಪಡಿತರ ಚೀಟಿದಾರರು ಇಂದು ಅನ್ನಭಾಗ್ಯದ ಹಣಕ್ಕಾಗಿ ರೇಷನ್ ಕಾರ್ಡ್ ಸೌಲಭ್ಯ ವನ್ನು ದುರುಪಯೋಗ ‌ಮಾಡುತ್ತಿದ್ದಾರೆ.‌ ಈ ಬಗ್ಗೆಯು ಸರಕಾರ ಗಮನ ಹರಿಸಿದ್ದು ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗುವ ಸಾಧ್ಯತೆ‌ ಇದೆ.

advertisement

Leave A Reply

Your email address will not be published.