Karnataka Times
Trending Stories, Viral News, Gossips & Everything in Kannada

RBI: ಧಿಡೀರ್ ಈ 2 ಬ್ಯಾಂಕುಗಳ ಮೇಲೆ ಕ್ರಮ ಕೈಗೊಂಡ ರಿಸರ್ವ್ ಬ್ಯಾಂಕ್!

advertisement

ಈಗಾಗಲೇ ಬ್ಯಾಂಕ್ ಗಳಲ್ಲಿ ಹಲವಾರು ತೊಂದರೆ ಗಳು ಕಂಡು ಬರುತ್ತಿದ್ದು ಅನೇಕ ದೂರುಗಳು ಸಹ ಕೇಳಿ ಬರುತ್ತಿವೆ. ಹೆಚ್ಚಿನ ಜನರು‌ ಬ್ಯಾಂಕ್ ಸುರಕ್ಷಿತ ಎಂದು ಹಣ ಇಟ್ಟರೂ ಇಂದು ನಂಬಿಕೆ ಕಳೆದು ಕೊಳ್ಳುವಂತಾಗಿದೆ. ಇದಕ್ಕಾಗಿ ಅರ್ ಬಿ ಐ ಕೂಡ ಗ್ರಾಹಕರ ಸುರಕ್ಷತೆಗಾಗಿ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ.ಅದೇ ರೀತಿ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಅರ್ ಬಿ ಐ (RBI) ದಂಡ ಕೂಡ ವಿಧಿಸಲಿದೆ.

ಪೇಟಿಎಂ ಗೆ ನಿರ್ಬಂಧ

ಪೇಟಿಎಮ್ (Paytm) ಬ್ಯಾಂಕ್ ನಲ್ಲಿ‌ ಸಾವಿರಾರು ಖಾತೆಗಳನ್ನು ಸರಿಯಾದ ಗುರುತಿನ ಆಧಾರ ಇಲ್ಲದೇ ಇಲ್ಲದೆ ತೆರೆಯಲಾಗಿದ್ದು, ಸೈಬರ್ ಸೆಕ್ಯೂರಿಟಿ ಫ್ರೇಮ್​ವರ್ಕ್ ನಿಯಮಗಳ ಉಲ್ಲಂಘನೆಯಾಗಿದೆ. ಇನ್ನೂ ಕೆವೈಸಿ (KYC)  ಅಕ್ರಮ ಕಾರಣ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್  (Paytm Paymnets Bank) ಸೇವೆಗಳಿಗೆ ಅರ್ ಬಿ ಐ ನಿರ್ಬಂಧ ವಿಧಿಸಿದೆ. ಆರ್​ಬಿ ಈ ಬಗ್ಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಎಚ್ಚರಿಸುತ್ತಲೇ ಬಂದಿದ್ದರೂ ನಿಮಯ ಅನುಸರಿಸದೇ ಇರುವ ಕಾರಣ ಬ್ಯಾಂಕ್ ಅನ್ನು ನಿರ್ಬಂಧಿಸಿದೆ. ಪೇಟಿಎಮ್ ಮಾರ್ಚ್ 15 ರಿಂದ ಅಂದರೆ ಇಂದಿನಿಂದ ನಿರ್ಬಂಧಿಸಲ್ಪಡುತ್ತವೆ. ಆದರೆ, ಜನರು ಗ್ರಾಹಕರು ಹಣಕಾಸು ಸಂದರ್ಭದಲ್ಲಿ ಬಳಕೆ ಮಾಡುವ ಪೇಟಿಎಂ ಯುಪಿಐ (UPI) ಸೇವೆ ಮುಂದುವರಿಯಲಿದೆ ಎಂದು ಅರ್ ಬಿ ಐ ಸ್ಪಷ್ಟನೆ ನೀಡಿದೆ.

Image Source: India Today

advertisement

ಈ ಬ್ಯಾಂಕ್ ಗಳ ಮೇಲೆ RBI ದಂಡ:

ಇದೀಗ ಅರ್ ಬಿ ಐ ಎರಡು ಬ್ಯಾಂಕ್ ಗಳ ವಿರುದ್ಧ ವಾಗಿ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದೆ.‌ ಹೌದು ಕೆಲವೊಂದು ನಿಯಂತ್ರಕ ಷರತ್ತುಗಳನ್ನು ಪಾಲನೇ ಮಾಡದ ಕಾರಣ ಬ್ಯಾಂಕ್ ಆಫ್ ಇಂಡಿಯಾಕ್ಕೆ (Bank Of India)  1.4 ಕೋಟಿ ರೂ.ಗಳ ದಂಡ ವಿಧಿಸಿದೆ. ಬ್ಯಾಂಕ್ ನಲ್ಲಿ ಗ್ರಾಹಕ ಸೇವೆ, ಬಡ್ಡಿದರ ಮತ್ತು ಕ್ರೆಡಿಟ್ ಮಾಹಿತಿಗಳ ಪಾಲನೆ ಮಾಡದಿದ್ದಕ್ಕಾಗಿ ಮತ್ತು ಕೆಲವೊಂದು ನಿಬಂಧನೆಗಳನ್ನು ಪಾಲಿಸದೇ ಇರುವುದಕ್ಕೆ ಬ್ಯಾಂಕ್ ಆಫ್ ಇಂಡಿಯಾಕ್ಕೆ ದಂಡವನ್ನು ಅರ್ ಬಿ ಐ ವಿಧಿಸಿದೆ

Image Source: Equitypandit
  • ಅದೇ ರೀತಿ ಅರ್ ಬಿ ಐ‌ ನೀಡಿದ ಕೆಲವು ಸೂಚನೆಗಳನ್ನು ಪಾಲಿಸದ ಖಾಸಗಿ ವಲಯದ ಬಂಧನ್ ಬ್ಯಾಂಕ್  (Bandhan Bank) ಗೆ ಕೂಡ ರಿಸರ್ವ್ ಬ್ಯಾಂಕ್ 29.55 ಲಕ್ಷ ರೂ.ಗಳ ದಂಡವನ್ನು ವಿಧಿಸಿದ್ದು ಕಟ್ಟು ನಿಟ್ಟಿನ ‌ಕ್ರಮವನ್ನು ವಿಧಿಸಿದೆ.
  • ಇನ್ನೂ ಕೆವೈಸಿ ನಿರ್ದೇಶನಗಳ‌ ನಿಬಂಧನೆಗಳನ್ನ ಪಾಲಿಸದೇ ಇರುವ ಕಾರಣ ಇಂಡೋಸ್ಟಾರ್ ಕ್ಯಾಪಿಟಲ್ ಫೈನಾನ್ಸ್ ಲಿಮಿಟೆಡ್ ಬ್ಯಾಂಕ್ (Indostar Finance Limited Bank) ಗೆ 13.60 ಲಕ್ಷ ರೂ.ಗಳ ದಂಡವನ್ನು ಅರ್ ಬಿ ಐ ವಿಧಿಸಿದೆ.

ಈ ಬ್ಯಾಂಕ್‌ಗಳಿಗೆ ದಂಡ ವಿಧಿಸಿದ್ದಲ್ಲದೆ ನಿಯಮಗಳನ್ನು ಅನುಸರಿಸಲು ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ಕೂಡ ನೀಡಿದೆ. ಹಾಗಾಗಿ ಅರ್ ಬಿ‌ಐ ನೀಡಿದ ಮಾರ್ಗ ಸೂಚಿಯಂತೆ ಬ್ಯಾಂಕ್ ಗಳು ನಿಯಮ‌ ಪಾಲನೆ ಮಾಡಬೇಕಿದೆ.

advertisement

Leave A Reply

Your email address will not be published.