Karnataka Times
Trending Stories, Viral News, Gossips & Everything in Kannada

RBI: ಮಧ್ಯಾಹ್ನದ ಬಳಿಕ ಬ್ಯಾಂಕ್ ಗೆ ಹೋಗುವವರಿಗೆ RBI ನಿಂದ ಹೊಸ ಸೂಚನೆ!

advertisement

ಇತ್ತೀಚಿನ ದಿನದಲ್ಲಿ ಹಣಕಾಸಿನ ಸಂಗ್ರಹ, ವಿನಿಮಯ, ಹೂಡಿಕೆ ಮಾಡುವ ಪ್ರಮಾಣ ಎಲ್ಲವೂ ಅಧಿಕವಾಗುತ್ತಿದೆ.ಅಷ್ಟು ಮಾತ್ರವಲ್ಲದೇ ಸರಕಾರ ಸೌಲಭ್ಯ ಕೂಡ ಈಗ ಬ್ಯಾಂಕ್ ವ್ಯವಹಾರಗಳ ಮೇಲೆ ಅವಲಂಬಿಸಿದೆ. ನೂತನ ಯೋಜನೆ ಹಣ ವಿನಿಯೋಗ , ಸ್ಕಾಲರ್ ಶಿಪ್, ಪಿಂಚಣಿ ಹೀಗೆ ಪ್ರತಿಯೊಂದು ವ್ಯವಸ್ಥೆ ಕೂಡ ಬ್ಯಾಂಕ್ ನಿಂದಲೇ ಬರುತ್ತಿದೆ. RBI ಅಧೀನದಲ್ಲಿರುವ ಬ್ಯಾಂಕ್ ಗಳು ಸರಕಾರದ ಕಾರ್ಯಚಟುವಟಿಕೆಯನ್ನು ಜನರಿಗೆ ತಲುಪುವಂತೆ ಮಾಡುತ್ತಿದೆ ಹೀಗಾಗಿ ಬ್ಯಾಂಕ್ ವಹಿವಾಟು ಈ ಹಿಂದಿಗಿಂತ ಅಧಿಕ ಆಗಿದೆ ಎಂದು ಹೇಳಬಹುದು.

ಬ್ಯಾಂಕಿನ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ನೀತಿ ನಿರ್ಬಂಧ ಬಂದಿರುವುದನ್ನು ಕಾಣಬಹುದು. ಬ್ಯಾಂಕ್ ಸಿಬ್ಬಂದಿಗೆ ಕೆಲಸದ ಹೊರೆ ತಗ್ಗಿಸಬೇಕು ಎಂಬ ಕಾರಣಕ್ಕೆ ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ರಜೆ ಹಾಗೂ ಎಲ್ಲ ಭಾನುವಾರ, ಸರಕಾರಿ ರಜೆಗಳಿಗೂ (Government Holidays) ರಜೆ ಎಂದು ಅನೇಕ ವಿಧಧ ಸವಲತ್ತು ಈಗಾಗಲೇ ನೀಡಲಾಗಿದೆ. ಈಗಾಗಲೇ ಎಲ್ಲ ಶನಿವಾರವು ಬ್ಯಾಂಕ್ ಸಿಬಂದಿಗೆ ರಜೆ ನೀಡಬೇಕು ಎಂದು ಹೇಳಲಾಗುತ್ತಿದ್ದು ಈ ನಿಯಮ ಜಾರಿಗೆ ಬರುತ್ತಾ ಎಂದು ಕಾದು ನೋಡಬೇಕಿದೆ.

ಗ್ರಾಹಕರಿಗೆ ತೊಂದರೆ:

 

Image Source: Mint

 

ಬ್ಯಾಂಕ್ ನ ಜನಸಂದಣಿಯ ಕಮ್ಮಿ ಮಾಡಲು ಅನೇಕ ತಾಂತ್ರಿಕ ಅಂಶ ಕಂಡುಕೊಳ್ಳಲಾಗಿದೆ. ಡಿಜಿಟಲ್ ಪೇಮೆಂಟ್ ಸಿಸ್ಟಂ (Digital Payment System) ಅನ್ನು ಕೂಡ ಅಭಿವೃದ್ಧಿ ಮಾಡಲಾಗಿದೆ ಈ ನಡುವೆ ಎರಡನೇ ನಾಲ್ಕನೇ ಶನಿವಾರ ರಜೆ ಹಾಗೂ ಸರಕಾರಿ ರಜೆ (Government Holiday) ಅವಧಿಯಲ್ಲಿ ಬ್ಯಾಂಕ್ ರಜೆ ಇರುವುದು ಬ್ಯಾಂಕ್ ಗ್ರಾಹಕರಿಗೆ ತೊಂದರೆ ಉಂಟು ಮಾಡುತ್ತಿದೆ ಇದರ ಜೊತೆಗೆ ಸೋಮವಾರ ಬ್ಯಾಂಕ್ ಗೇ ಭೇಟಿ ನೀಡುವವರು ಕ್ಯೂನಲ್ಲೇ ನಿಂತು ಕಾಯಬೇಕಾಗುತ್ತದೆ. ಮಧ್ಯಾಹ್ನದ ನಂತರ ಜನ ಸರಣಿ ಕಡಿಮೆ ಆಗಬಹುದು ಎಂದು ನೋಡಿದರೆ ಊಟದ ಸಮಯ ಎಂದು ಬ್ಯಾಂಕ್ ಕ್ಲೋಸ್ ಅವರ್ ಕೂಡ ಇರುತ್ತದೆ.

advertisement

ಬ್ಯಾಂಕಿನ ಸಿಬ್ಬಂದಿಗೆ ಲಂಚ್ ಅವರ್ ಇದ್ಯಾ?

ಬ್ಯಾಂಕಿನ ವಹಿವಾಟುಗಳು ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಲೇ ಇದೆ. ಬ್ಯಾಂಕಿಗೆ ಭೇಟಿ ನೀಡುವ ಗ್ರಾಹಕರು ಮಧ್ಯಾಹ್ನದ ಹೊತ್ತು ಬಂದರೆ ಈಗ ಊಟದ ಸಮಯ 2 ಗಂಟೆ ಬಿಟ್ಟು ಬನ್ನಿ ಎಂದು ಹೇಳಿ ಕಳುಹಿಸುತ್ತಾರೆ. ಹೀಗಾಗಿ ಮಧ್ಯಾಹ್ನಕ್ಕೆ ಎಲ್ಲ ಕೆಲಸ ಬಿಟ್ಟು ಬ್ಯಾಂಕ್ ಗೆ ಬಂದರೂ ಪ್ರಯೋಜನ ಇರಲಾರದು ಅಸಲಿಗೆ ಈ ಲಂಚ್ ಅವರ್ ಅಂದರೆ ಬ್ಯಾಂಕ್ ಸಿಬಂದಿಗೆ ಊಟದ ಸಮಯ ಎಂಬುದು ಇರುತ್ತಾ ಎಂಬುದೇ ಎಲ್ಲರಿಗೂ ಅನುಮಾನ ಮೂಡಿಸುತ್ತದೆ.

RBI ನೂತನ ನಿಯಮ?

 

Image Source: Mint

 

ಇತ್ತೀಚಿನ ದಿನದಲ್ಲಿ ಮಧ್ಯಹ್ನಕ್ಕೆ ಬ್ಯಾಂಕ್ ಗೆ ಭೇಟಿ ನೀಡಲೆಂದು ಬಂದು ಬಳಿಕ ಇಲ್ಲಿ ಊಟದ ಸಮಯ ಎಂದು ಬ್ಯಾಂಕ್ ಸಿಬಂದಿ ಅದನ್ನೇ ಕಾರಣ ಮಾಡಿ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಮನಗಂಡ RBI ಈ ಬಗ್ಗೆ ಸ್ಪಷ್ಟನೆ ನೀಡಿದೆ. ಯಾವುದೇ ಬ್ಯಾಂಕ್ ಸಿಬ್ಬಂದಿಗೆ ಊಟದ ಸಮಯ ಇರದು ಅವರು ಊಟ ಮಾಡುವ ಅವಧಿಗೆ ಅವರ ಕೆಲಸ ನಿರ್ವಹಣೆಗೆ ಬೇರೊಬ್ಬರನ್ನು ನೇಮಕ ಮಾಡಿ ಹೋಗಬೇಕು ಎಂಬ ನಿಯಮ ಇದೆ ಎಂದು RBI ಸ್ಪಷ್ಟೀಕರಣ ನೀಡಿದೆ.

advertisement

Leave A Reply

Your email address will not be published.