Karnataka Times
Trending Stories, Viral News, Gossips & Everything in Kannada

Free Electricity: ಮೋದಿಯ ಗ್ಯಾರಂಟಿ 300 ಯೂನಿಟ್ ವಿದ್ಯುತ್ ಪಡೆಯಲು ಕೂಡಲೇ ಈ ಕೆಲಸ ಮಾಡಿ!

advertisement

ಈಗಾಗಲೇ ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಮೂಲಕ‌ ಗೃಹಜ್ಯೋತಿ ಯೋಜನೆ (Gruha Jyothi Yojana) ಯನ್ನು ಆರಂಭಿಸಿ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡುತ್ತಿದೆ. ರಾಜ್ಯದ ಹೆಚ್ಚಿನ ಜನತೆ ಈ ಯೋಜನೆಯ ಮೂಲಕ ಜಿರೋ ವಿದ್ಯುತ್ ಬಿಲ್ ಅನ್ನು ಪಡೆಯುತ್ತಿದ್ದಾರೆ. ಇದೀಗ ಕೇಂದ್ರ ಸರಕಾರವು ಉಚಿತ ವಿದ್ಯುತ್ (Free Electricity) ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಹೌದು ಉಚಿತ ವಿದ್ಯುತ್ ಒದಗಿಸಲು ಮನೆಯ ಮೇಲ್ಛಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು‌ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ (PM Surya Ghar Yojana)ಯನ್ನು ಜಾರಿಗೆ ತಂದಿದೆ.

ಸೌರ ಘಟಕ ಸ್ಥಾಪಿಸಲು ಸಬ್ಸಿಡಿ:

ಫಲಾನುಭವಿಗಳಿಗೆ ತಮ್ಮ ಮನೆಯ ಮೆಲ್ಛಾವಣಿಯ ಮೇಲೆ ಸರ್ಕಾರದ ಸಬ್ಸಿಡಿ ಸಹಾಯದಿಂದ ಸೌರ ಘಟಕ ಸ್ಥಾಪಿಸಬಹುದಾದ ಅವಕಾಶವನ್ನು ಈ ಯೋಜನೆ ನೀಡಿದೆ. ಮನೆಗಳಿಗೆ ಸೋಲಾರ್ ದೀಪಗಳನ್ನು ಒದಗಿಸಲು 75 ಸಾವಿರ ಕೋಟಿ ವೆಚ್ಚ ಖರ್ಚು ಮಾಡಲಿದ್ದು, ಈ ಯೋಜನೆ ಮೂಲಕ 300 ಯೂನಿಟ್ ಉಚಿತ ವಿದ್ಯುತ್ (Free Electricity) ಅನ್ನು ಫಲಾನುಭವಿಗಳು ಪಡೆಯಬಹುದು. ಅದೇ ರೀತಿ‌ ಬ್ಯಾಂಕ್​ನಿಂದಲೂ ಕಡಿಮೆ ಬಡ್ಡಿದರದಲ್ಲಿ ಸಾಲದ ವ್ಯವಸ್ಥೆ ಸಿಗಲಿದೆ.

ಎಷ್ಟು ಸಬ್ಸಿಡಿ ಮೊತ್ತ:

 

Image Source: Vox

 

advertisement

ಈ ಯೋಜನೆಯಿಂದ ನೀವು ತಿಂಗಳಿಗೆ 150 ಯೂನಿಟ್ ಒಳಗಡೆ ವಿದ್ಯುತ್ ಉಪಯೋಗ ಮಾಡಿದ್ರೆ ನಿಮಗೆ ಸರ್ಕಾರ 1 ರಿಂದ 2 kw ಕಿಲೋ ವ್ಯಾಟ್ ಸೋಲಾರ್ ರೂಫ್ ಟಾಕ್ ನೀಡಲಿದ್ದು, ನಿಮಗೆ 30,000 ದಿಂದ ಹಿಡಿದು 60,0000 ಸಾವಿರದವರೆಗೆ ಸಬ್ಸಿಡಿ ಮೊತ್ತ ದೊರೆಯಲಿದೆ.

ತಿಂಗಳಿಗೆ 150 ರಿಂದ 300 ಯೂನಿಟ್ ವರೆಗೆ ವಿದ್ಯುತ್ ಬಳಕೆ ಮಾಡಿದ್ರೆ 2-3 ಕಿಲೋ ವ್ಯಾಟ್ ಸೋಲಾರ್ ರೂಪ್ ಟಾಪ್ ಸಿಗಲಿದ್ದು, 60,000 ದಿಂದ 78,000 ಸಬ್ಸಿಡಿ ಸಿಗಲಿದೆ. 300 ಯೂನಿಟ್ ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ರೆ 3 ರ ಮೇಲೆ ಸೋಲಾರ್ ರೂಪ್ ಟಾಪ್ ನೀಡಲಿದ್ದು ಸಬ್ಸಿಡಿ ಮೊತ್ತ 78,000 ದೊರೆಯಲಿದೆ.

ಅರ್ಜಿ ಸಲ್ಲಿಸಿ:

 

Image Source: Times of India

 

ಪಿಎಂ ಸೂರ್ಯ ಘರ್ ಯೋಜನೆ (PM Surya Ghar Scheme) ಗೆ ಅರ್ಜಿ ಸಲ್ಲಿಕೆ ಮಾಡುದಾದ್ರೆ ಮೊದಲಿಗೆ pmsuryaghar.gov.in ಇಲ್ಲಿ ನೊಂದಣೆ ಮಾಡಬೇಕು. ಈ ವೆಬ್ ಲಿಂಕ್ ಗೆ‌ ಕ್ಲಿಕ್ ಮಾಡಿ. ನಿಮ್ಮ ರಾಜ್ಯ, ಎಸ್ಕಾಂ ಕಂಪನಿ ಆಯ್ಕೆ ಮಾಡಬೇಕು. ನಂತರ ವಿದ್ಯುತ್ ಬಿಲ್​ನ ಕನ್ಸೂಮರ್ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ಹಾಕಿ ಲಾಗಿನ್ ಆಗಿರಿ. ಲಾಗಿನ್ ಆದ ಬಳಿಕ ರೂಫ್​ಟಾಪ್ ಸೋಲಾರ್ ಅಪ್ಲಿಕೇಶನ್ ಫಾರ್ಮ್ ಗೆ ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ‌ ಅರ್ಜಿ ಸಲ್ಲಿಕೆ ಮಾಡಿ.

advertisement

Leave A Reply

Your email address will not be published.