Karnataka Times
Trending Stories, Viral News, Gossips & Everything in Kannada

Post Office: ಮನೆಯಲ್ಲೇ ಕೂತು ತಿಂಗಳಿಗೆ 9 ಸಾವಿರ ರೂ ಬಡ್ಡಿ ಪಡೆಯುವ ಪೋಸ್ಟ್ ಆಫೀಸ್ ನ ಹೊಸ ಯೋಜನೆ!

advertisement

ಪ್ರತಿಯೊಬ್ಬರಿಗೂ ಕೂಡ ಹೂಡಿಕೆಯ ಮೇಲೆ ಅಧಿಕ ಲಾಭ ಪಡೆಯಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹಾಗಿದ್ದರೂ ತಮ್ಮ ಹೂಡಿಕೆ ಹೆಚ್ಚು ಸುರಕ್ಷಿತವಾಗಿ ಇರಬೇಕು ಯಾವುದೇ ವಿಧವಾಗಿ ಮೋಸ ನಡೆಯಬಾರದು ಎಂದು ನಿರೀಕ್ಷೆ ಮಾಡುವವರು ಇದ್ದಾರೆ. ಹೀಗೆ ಅಂದುಕೊಂಡವರಿಗೆ ಅಂಚೆ ಇಲಾಖೆಯ (Post Office) ಈ ಒಂದು ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಉತ್ತಮ ಲಾಭ ತಂದು ಕೊಡುವ ಜೊತೆಗೆ ನಿಮ್ಮ ಹಣವೂ ಕೂಡ ಹೆಚ್ಚು ಸುರಕ್ಷಿತವಾಗಿ ಇರಲಿದೆ. ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ಯಾವುದು ಈ Post Office ಸ್ಕೀಂ?

ಮ್ಯೂಚುವಲ್ ಫಂಡ್ (Mutual Fund), ಸ್ಟಾಕ್ ಮಾರ್ಕೆಟ್ (Stock Market) ಎಲ್ಲವೂ ಅಧಿಕ ಲಾಭ ನೀಡಿದ್ದರೂ ಅದರಲ್ಲಿ ಮಾಡುವ ಹೂಡಿಕೆ ಬಹಳ ಅಪಾಯಕಾರಿ ಆಗಿರುತ್ತದೆ. ಆದರೆ ಅದರ ಹೊರತಾಗಿ ಅಂಚೆ ಇಲಾಖೆಯ (Post Office) ಮೂಲಕ ನೀವು ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು. ಈ ನಿಟ್ಟಿನಲ್ಲಿ ಅಂಚೆ ಇಲಾಖೆಯ ತಿಂಗಳ ಆದಾಯ ಸ್ಕೀಂ ಅಂದರೆ (Monthly Income Scheme) ತುಂಬಾ ಪ್ರಾಮುಖ್ಯತೆ ಪಡೆದಿದೆ. ಪ್ರತಿ ತಿಂಗಳು ನಿಶ್ಚಿತ ಆದಾಯ ಸಿಗುವ ಜೊತೆಗೆ ನಿಮ್ಮ ಹೂಡಿಕೆ ಹಣಕ್ಕೂ ಇಲ್ಲಿ ಖಾತರಿ ಇರಲಿದೆ.

Post Office Scheme ಸ್ವರೂಪ ಹೇಗಿದೆ?

 

Image Source: Jagran English

 

advertisement

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (Post Office Monthly Income Scheme) ಎನ್ನಬಹುದು. ಇದರ ಪ್ರಸ್ತುತ ಬಡ್ಡಿದರ ಕಾಣುವುದಾದರೆ 7.40% ಆಗಿದೆ. ಕನಿಷ್ಠ 1000 ದಿಂದ 9ಲಕ್ಷದ ವರೆಗೆ ಹೂಡಿಕೆ ಮಾಡಬಹುದು. ಜಂಟಿಯಾಗಿ ಹೂಡಿಕೆ ಮಾಡುವುದಾದರೆ 15ಲಕ್ಷದ ವರೆಗೆ ಹೂಡಿಕೆ ಮಾಡಬಹುದು. ಇದರಲ್ಲಿ ತೆರಿಗೆ ವಿನಾಯಿತಿ ಇರಲಾರದು. ಒಟ್ಟು 5 ವರ್ಷದ ಹೂಡಿಕೆ ಇದಾಗಿದೆ. ಕೇಂದ್ರ ಸರಕಾರವೇ ಇದಕ್ಕೆ ರಕ್ಷಕನಂತಿದ್ದು ಅಂಚೆ ಕಚೇರಿಯಲ್ಲಿ ಈ ಸಂಬಂಧಿತ ಹೂಡಿಕೆ ಮಾಡಬಹುದು.

ಬ್ಯಾಂಕ್ ಖಾತೆಗೆ ಬರಲಿದೆ:

 

Image Source: Marathi News

 

ನಿಮ್ಮ ಹೂಡಿಕೆ ಮೇಲೆ ಸಿಗುವ ಲಾಭ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ. ನಾಮಿನಿ‌ ಮಾಡಲು ಕೂಡ ಅವಕಾಶ ಇದ್ದು ಉಳಿತಾಯ ಖಾತೆಗೆ ಹಣ ಜಮೆ ಆಗಲಿದೆ. ವಯಸ್ಕರೆಲ್ಲರೂ ಈ ಸ್ಕೀಂ ತೆರೆಯಬಹುದು. ಅವಧಿ ವಿಸ್ತರಣೆ ಮಾಡಲು ಅವಕಾಶ ಇದೆ. ಆದರೆ NRI ಗಳಿಗೆ ಅವಧಿ ವಿಸ್ತರಣೆ ಮಾಡಲು ಅವಕಾಶ ಇಲ್ಲ. ಅಂಚೆ ಕಚೇರಿಯಲ್ಲಿ ಖಾತೆ ತೆರೆದ ಬಳಿಕ ಈ ತಿಂಗಳ ಆದಾಯದ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಯ ಜೊತೆಗೆ ಸಲ್ಲಿಕೆ ಮಾಡಬೇಕು.

ಹಣ ವಾಪಾಸ್ಸು ಪಡೆಯಬಹುದೆ?

ಅವಧಿಗೆ ಮುನ್ನ ಹಣ ತೆಗೆಯಲು ಅವಕಾಶ ಇದೆ. ಒಂದು ವರ್ಷಕ್ಕಿಂತ ಮೊದಲು ತೆಗೆದರೆ ಶೂನ್ಯ ದರ ಇರಲಿದೆ. 1-3 ವರ್ಷಕ್ಕೆ ಹಣ ವಾಪಾಸ್ಸು ಪಡೆದರೆ ಅಸಲು ಮೊತ್ತ ವಾಪಾಸ್ಸು ನೀಡುವ ಜೊತೆಗೆ 2% ದಂಡ ವಿಧಿಸಲಾಗುವುದು. ಇದರಲ್ಲಿ 15 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ 9,250ರೂಪಾಯಿ ಬಡ್ಡಿ ಮೊತ್ತ ಸಿಗಲಿದೆ. ಆಗ 5 ವರ್ಷಕ್ಕೆ 5 ಲಕ್ಷಕ್ಕೂ ಅಧಿಕ ಹಣ ನಿಮಗೆ ಸಿಗಲಿದೆ. 12 ಲಕ್ಷ ಹಣ ಹೂಡಿಕೆ ಮಾಡಿದರೆ 7,400 ತಿಂಗಳಿಗೆ ಸಿಗಲಿದೆ. 5ವರ್ಷಕ್ಕೆ 4,44,000 ಮೊತ್ತ ವಾಗಲಿದೆ. ಹಾಗಾಗಿ ಹೆಚ್ಚು ಸುರಕ್ಷತೆ ಮತ್ತು ಅಧಿಕ ಲಾಭ ಪಡೆಯುವ ನೆಲೆಯಲ್ಲಿ ಈ ಯೋಜನೆ ಬಹಳ ಸಹಕಾರಿ ಆಗಿದೆ.

advertisement

Leave A Reply

Your email address will not be published.