Karnataka Times
Trending Stories, Viral News, Gossips & Everything in Kannada

Krishi Bhagya: ಬೆಳ್ಳಂಬೆಳಗ್ಗೆ ಇನ್ನೊಂದು ಹೊಸ ಭಾಗ್ಯ ಕರುಣಿಸಿದ ಕಾಂಗ್ರೆಸ್! ಸಂತಸದಲ್ಲಿ ಅನ್ನದಾತ

advertisement

ಇಂದು ರೈತರ ಅಭಿವೃದ್ಧಿ ಗಾಗಿ ಸರಕಾರ ಹಲವು ರೀತಿಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.‌ ಕೃಷಿಯಲ್ಲಿ ಅಭಿವೃದ್ಧಿ ಯಾಗಬೇಕು, ರೈತಾಪಿ ವರ್ಗದವರನ್ನು ಬೆಂಬಲಿಸಬೇಕು ಎಂದು ಸರಕಾರದಿಂದ ಸೌಲಭ್ಯ ಗಳನ್ನು ಕೂಡ ನೀಡುತ್ತಾ ಬಂದಿದೆ. ಇದೀಗ ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಗುಡ್ ನ್ಯೂಸ್ ಅನ್ನು ನೀಡಿದ್ದು, 24 ಜಿಲ್ಲೆಗಳಲ್ಲಿ‌ 106 ತಾಲೂಕುಗಳಲ್ಲಿ ಪ್ಯಾಕೇಜ್‌ ಮಾದರಿಯಲ್ಲಿ ಕೃಷಿ ಭಾಗ್ಯ (Krishi Bhagya) ಯೋಜನೆಯನ್ನು‌ ಜಾರಿಗೆ ತರಲು ಮುಂದಾಗಿದೆ.

ಏನು ಈ ಯೋಜನೆ

ಈ ಯೋಜನೆಯ ಮೂಲಕ ನೀರಿನ‌ ಸಂರಕ್ಷಣೆ ಮಾಡಿ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವುದೇ ಇದರ ಉದ್ದೇಶ ವಾಗಿದೆ. ಹೌದು ಮಳೆ ನೀರಿನ ಸಂಗ್ರಹಣೆಯನ್ನು ಮಾಡುವ ಮೂಲಕ ನೀರನ್ನು ಶೇಖರಣೆ ಮಾಡಿ ಮಳೆ ನೀರನ್ನು ವ್ಯರ್ಥ ಮಾಡದೇ ಕೃಷಿಗೆ ಬಳಸಿಕೊಳ್ಳುವುದೇ ಈ ಯೋಜನೆಯ ಗುರಿಯಾಗಿದೆ. ಈ ಯೋಜನೆಯ ಮೂಲಕ ರೈತರಿಗೆ ಬದು, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ತಂತಿ ಬೇಲಿ, ಸೋಲಾರ್ ಪಂಪ್ ಸೆಟ್ ಮತ್ತು ಸೂಕ್ಷ್ಮ ನೀರಾವರಿ ಘಟಕಗಳನ್ನು ಸ್ಥಾಪನೆ ಮಾಡಲು ಸಹಾಯಧನವನ್ನು ಅರ್ಹ ರೈತರಿಗೆ ನೀಡಲಾಗುತ್ತದೆ.

Image Source: Districtsinfo

advertisement

ಯಾರಿಗೆ Krishi Bhagya ಯೋಜನೆಯ ಸೌಲಭ್ಯ ನೀಡಲಾಗುತ್ತದೆ?

ಈ ಯೋಜನೆಯನ್ನು ಖಾಸಗಿ ಭೂಮಿಯನ್ನು ಹೊಂದಿರುವ ಸಾಮಾನ್ಯ ವರ್ಗದ ರೈತರಿಗೆ ನೀಡಲಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ವರ್ಗದ ರೈತರಿಗೆ ಅಧಿಕ ಸಹಾಯಧನ (Subsidy) ಈ ಯೋಜನೆಯ ಮೂಲಕ ವಿತರಣೆ ಮಾಡಲಾಗುತ್ತದೆ. ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುದಾದ್ರೆ ಅವಶ್ಯಕ ದಾಖಲಾತಿಗಳೊಂದಿಗೆ ರೈತ ಸಂಪರ್ಕ ಕೇಂದ್ರ ಕಚೇರಿಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ

Image Source: Krishi Jagran Kannada

Krishi Bhagya ಯೋಜನೆಗೆ ಈ ದಾಖಲೆಗಳು ಬೇಕು:

  • FID ದಾಖಲೆ
  • ಆಧಾರ್‌ ಕಾರ್ಡ್
  • ಪಹಣಿ ದಾಖಲೆ
  • ಜಾತಿ ಪ್ರಮಾಣ ಪತ್ರ
  • ಬ್ಯಾಂಕ್‌ ಪಾಸ್‌ ಬುಕ್
  • ಪೋಟೋ ಇತ್ಯಾದಿ

advertisement

Leave A Reply

Your email address will not be published.