Karnataka Times
Trending Stories, Viral News, Gossips & Everything in Kannada

Agricultural Land: ಕೃಷಿ ಭೂಮಿ ಖರೀದಿ ಮಾಡುವಾಗ ಈ 8 ದಾಖಲೆಗಳನ್ನು ನೋಡಲೇಬೇಕು! ಹೊಸ ರೂಲ್ಸ್

advertisement

ಇತ್ತೀಚಿನ ದಿನದಲ್ಲಿ ಭೂಮಿ ಖರೀದಿಗೆ ಅವಕಾಶವೇ ಕಡಿಮೆ, ಅದರಲ್ಲಿಯೂ ಮನೆ ಕಟ್ಟಬೇಕು, ತೋಟ ಮಾಡಬೇಕು ಎಂದುಕೊಂಡವರು ಕಡಿಮೆ ಹಣಕ್ಕೆ ಭೂಮಿ ಖರೀದಿ ಮಾಡಲು ಮುಂದಾಗುತ್ತಾರೆ. ಕಡಿಮೆ ಹಣಕ್ಕೆ ಭೂಮಿ ಸಿಗುತ್ತದೆ ಎಂದು ಕ್ರಯಮಾಡಿ ಬಳಿಕ ಆ ಜಮೀನಿನ ವ್ಯಾಜ್ಯಗಳಿರುವುದು ತಡವಾಗಿ ತಿಳಿದು ಬರಲಿದೆ. ಬಳಿಕ ಏನು ಮಾಡಲಾಗದ ಪರಿಸ್ಥಿತಿಗೆ ಮುಂದಾಗುತ್ತಾರೆ. ಹಾಗಾಗಿ ನೀವು ಕೃಷಿ ಭೂಮಿ (Agricultural Land) ಖರೀದಿ ಮಾಡುವ ಮುನ್ನ ಈ ವಿಚಾರ ಗಮನಿಸಿ.

ಈ ದಾಖಲೆಗಳನ್ನು ನೋಡಿ:

ಭೂಮಿ ಖರೀದಿ ಮಾಡುವ ಮುನ್ನ ಕೆಲವೊಂದು ಅಗತ್ಯ ಮಾಹಿತಿ ಓದಿ ತಿಳಿಯಬೇಕು.

ಆಕಾರ್ ಬಂದ್:

ಜಮೀನಿನ ಅಂತಿಮ ವಿಸ್ತೀರ್ಣ ಇರುವ ದಾಖಲೆ ಪತ್ರವನ್ನು ಆಕಾರ್ ಬಂದ್ ಎಂದು ಕರೆಯಲಾಗುತ್ತದೆ. ಪಹಣಿ ಹಾಗೂ ಆಕಾರ್ ಬಂದ್ ಗೆ ವ್ಯತ್ಯಾಸಗಳು ಇವೆ. ಹಾಗಾಗಿ ಜಮೀನು ಖರೀದಿದಾರರು ಆಕಾರ್ ಬಂದ್ ಅನ್ನು ಸರಿಯಾಗಿ ಪರಿಶೀಲನೆ ಮಾಡಿ ನೋಡಬೇಕು. ಕೆಲವು ಪಹಣಿಗಳೆ ಸರಿ ಇರದು ಹಾಗಾಗಿ ಬೋಗಸ್ ಪಹಣಿ ಸಹ ಇರುತ್ತದೆ ಈ ಬಗ್ಗೆ ಪರಿಶೀಲಿಸಿಕೊಳ್ಳಿ.

ಸರ್ವೇ ಸ್ಕೆಚ್ (Survey Sketch):

ಜಮೀನಿಗೆ ಸಂಬಂಧಿಸಿದ ಸಂಪೂರ್ಣ ವಿವರ ಇರುವುದು ಈ ಸರ್ವೇ ಸ್ಕೆಚ್ ಆಗಿದೆ. ಸರ್ವೇ ಸ್ಕೆಚ್ ನಲ್ಲಿ ಚಿತ್ರ ಸಹಿತ ಅಂಕಿ ಸಂಖ್ಯೆ, ಕಾಲು ದಾರಿ ಬಂಡಿ ದಾರಿ ಇರಲಿದೆ ಹಾಗಾಗಿ ಈ ಬಗ್ಗೆ ಪರಿಶೀಲನೆ ಮಾಡಿಕೊಳ್ಳಿ. ವಾಸ್ತವವಾಗಿ ಒಂದೊಮ್ಮೆ ಅಳತೆ ಮಾಡುವುದು ತುಂಬಾ ಒಳ್ಳೆಯದು.

ಪಹಣಿ ಪತ್ರ (Pahani letter):

 

Image Source: LegalRaasta.com

 

ನಿಮ್ಮ ಪಹಣಿ (Pahani) ಪತ್ರ ಸರಿಯಾಗಿ ಇದೆ ಅಥವಾ ಇಲ್ಲ ಎಂಬುದನ್ನು ಪರಿಶೀಲನೆ ಮಾಡಿರಿ. ಖರೀದಿ ಮಾಡುವ ಪಹಣಿ ಮೇಲಿನ ಸಾಗುವಳಿದಾರರ ಹೆಸರನ್ನು ಪರಿಶೀಲನೆ ಮಾಡಬೇಕು. ವಾಸ್ತವ ಎಷ್ಟು ಜನ ಹಕ್ಕು ದಾರರು ಇದ್ದಾರೆ ಎಂಬುದು ಸಹ ಇದರ ಮೂಲಕ ತಿಳಿಯಲಿದೆ.

advertisement

ಫಾರಂ 10 (Form 10):

 

Image Source: Scribd

 

ಜಮೀನಿನಲ್ಲಿ ಪೂರ್ಣ ಸರ್ವೇ ನಂಬರ್ ನಲ್ಲಿ ಹಿಸ್ಸಾ ಜಮೀನು ಇರಲಿದೆ.ಸರಳವಾಗಿ ರಿಜಿಸ್ಟರ್ ಮಾಡಲು ಈ ಕ್ರಮ ಬಹಳ ಸಹಕಾರಿ ಆಗಲಿದೆ.

ಖರೀದಿ ಪತ್ರ (Purchase Deed):

ಇದನ್ನು ಸೇಲ್ ಡೀಡ್ ಎಂದು ಕರೆಯಲಾಗುತ್ತದೆ. ಈ ಹಿಂದೆ ಜಮೀನನ್ನು ಯಾರು ಖರೀದಿ ಮಾಡಿದ್ದಾರೆ, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬ ಇತ್ಯಾದಿ ವಿವರಣೆ ಇಲ್ಲಿ ಇರಲಿದ್ದು ಇದನ್ನು ಪರಿಶೀಲಿಸಿ.

ಮ್ಯೂಟೇಶನ್ ರಿಪೋರ್ಟ್ (Mutation Report): 

ಜಮೀನು ಖರೀದಿ ಮಾಡಿದ್ದಾಗಿನಿಂದ ಇಲ್ಲಿವರೆಗೆ ಯಾರು ಯಾರು ಖರೀದಿ ಮಾಡಿದ್ದಾರೆ ಅಂದರೆ ದಾನ , ಕ್ರಯ ಇತ್ಯಾದಿ ಮಾಹಿತಿ ತಿಳಿಯಲು ಇದು ಅವಶ್ಯಕವಾಗಿದೆ. ನೆಮ್ಮದಿ ಕೇಂದ್ರದಲ್ಲಿ ಈ ಮ್ಯೂಟೇಶನ್ ರಿಪೋರ್ಟ್ ಸಿಗಲಿದೆ.

NTC:

No Tanancy Certificate ಉಳುವವನೆ ಭೂಮಿಯ ಒಡೆಯ ಎಂಬ ಕಾನೂನಿನ ಅನುಸಾರ ಭೂಮಿ ಪಡೆದಿದ್ದರೆ ಈ NTC ಅಡಿಯಲ್ಲಿ ಚೆಕ್ ಮಾಡಬಹುದು.

ಇತರೆ ದಾಖಲೆಗಳು:

ಇವೆಲ್ಲದರ ಹೊರತಾಗಿಯೂ ಸಾಗುವಳಿ ಚೀಟಿ, Encomberence Certificate ಇದರಿಂದಾಗಿ ಜಮೀನಿನ ಮೇಲೆ ಯಾವುದಾದರೂ ಸಾಲ ಸೂಲ ಮಾಡಿದ್ದರೆ ಆ ವಿವರಣೆ ನಿಖರವಾಗಿ ತಿಳಿದು ಬರಲಿದೆ. PTCL ಕೂಡ ಅಗತ್ಯವಾಗಿ ನೀವು ಚೆಕ್ ಮಾಡಿಕೊಳ್ಳಲೇ ಬೇಕಿದೆ.

advertisement

Leave A Reply

Your email address will not be published.