Karnataka Times
Trending Stories, Viral News, Gossips & Everything in Kannada

Agricultural Land: ಎಕರೆಗಟ್ಟಲೆ ಜಮೀನು ಇದ್ದವರಿಗೆ ಹೊಸ ರೂಲ್ಸ್! ಎಲ್ಲಾ ರೈತರಿಗೆ ಅನ್ವಯ

advertisement

ಆಧಾರ್ ಕಾರ್ಡ್ ಇಂದು ದೇಶಿಯ ಗುರುತಿನ ಚೀಟಿಯಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿದ್ದು ಪ್ರತಿಯೊಂದು ಸರಕಾರಿ ಕೆಲಸ ಕಾರ್ಯಕ್ಕೂ ಆಧಾರ್ ಸಲ್ಲಿಕೆಯನ್ನು ಕಡ್ಡಾಯ ಮಾಡಲಾಗುತ್ತಿದೆ. ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವುದು ಹಾಗೂ KYC ಸಲ್ಲಿಕೆಗೂ ಆಧಾರ್ ಲಿಂಕ್ ಇದ್ದೇ ಇರುತ್ತದೆ. ಆಧಾರ್ ಕಾರ್ಡ್ (Aadhaar Card) ನಲ್ಲಿ ಬ್ಯಾಂಕ್ , ಸರಕಾರಿ ಸೌಲಭ್ಯ, ಫಲಾನುಭವಿಗಳಾಗಲು,ಯೋಜನೆ ಮಾನ್ಯತೆಗೆ ಇನ್ನಿತರ ಕೆಲಸ ಕಾರ್ಯಕ್ಕೆ ಆಧಾರ್ ಲಿಂಕ್ ಕಡ್ಡಾಯ ಮಾಡಲಾಗುತ್ತಿದ್ದು ಇದೀಗ ಆಸ್ತಿ ಸಂಬಂಧಿತ ಜಮೀನಿನ ಪಹಣಿಗೂ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಮಾಡಲಾಗಿದೆ.

ಕಂದಾಯ ಸಚಿವರಿಂದ ಆದೇಶ:

 

 

ಕರ್ನಾಟಕ ರಾಜ್ಯದಲ್ಲಿ ಜಮೀನುಗಳಿಗೆ (Agricultural Land) ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಕಡ್ಡಾಯ ಮಾಡಲಾಗುತ್ತಿದೆ. ನಿಮ್ಮ ಆಧಾರ್ ಕಾರ್ಡ್ ಜಮೀನಿನ ಪಹಣಿಯೊಂದಿಗೆ ಲಿಂಕ್ ಹೊಂದಲೇ ಬೇಕು ಇಲ್ಲವಾದರೆ ಸರಕಾರಿ ಯೋಜನೆಗಳು ಸಿಗಲಾರದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda) ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ರಾಜ್ಯದ ಎಲ್ಲ ರೈತರಿಗೆ ಅಧಿಕೃತವಾಗಿ ಆದೇಶ ಪ್ರಕಟಿಸಿದ್ದಾರೆ. ನಿಮ್ಮ ಆಧಾರ್ ಕಾರ್ಡ್ (Aadhaar Card) ಜಮೀನಿನ ಪಹಣಿ (Land Pahani) ಯೊಂದಿಗೆ ಲಿಂಕ್ ಆಗದೇ ಹೋದರೆ ಸರಕಾರದಿಂದ ದೊರೆಯಲಾಗದು ಎಂದು ತಿಳಿಸಲಾಗಿದೆ.

ಈ ಯೋಜನೆ ಹಣ ಸಿಗೊಲ್ಲ:

advertisement

ಆಧಾರ್ ಕಾರ್ಡ್ (Aadhaar Card) ಹಾಗೂ ಪಹಣಿ (Pahani) ಪತ್ರ ಲಿಂಕ್ ಮಾಡದೇ ಇದ್ದರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Yojana) ಹಣ, ಗಂಗಾ ಕಲ್ಯಾಣ ಯೋಜನೆ, ಕೃಷಿ ಹೊಂಡ, ನೀರಿನ ವ್ಯವಸ್ಥೆಗೆ, ಪಂಪ್ ಸೆಟ್ (Pump Set) ಹಾಗೂ ಸೋಲಾರ್ ವಿದ್ಯುತ್ ಗೆ ಸರಕಾರದಿಂದ ನೀಡಲಾಗುವ ಹಣ ನಿಮಗೆ ಸಿಗಲಾರದು. ಹಾಗಾಗಿ ಸರಕಾರದಿಂದ ಸಿಗುವ ಸೌಲಭ್ಯ ಪಡೆಯಲು ಕೂಡಲೇ ಆಧಾರ್ ಕಾರ್ಡ್ ಹಾಗೂ ಜಮೀನಿನ ಪಹಣಿ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ಹೀಗೆ ಮಾಡಿ:

ರಾಜ್ಯದಲ್ಲಿ ಪಹಣಿ ಹೊಂದಿರುವ ರೈತರು ಎಲ್ಲ ಸರಕಾರಿ ಸೌಲಭ್ಯ ಪಡೆಯಬೇಕಾದರೆ ಕೆಲವು ನಿರ್ದಿಷ್ಟ ಕ್ರಮ ಅನುಸರಿಸಬೇಕು. ರಾಜ್ಯದಲ್ಲಿ ರೈತರು 70% ಇದೆ ಎಂದು ವರದಿಯಾಗಿದೆ. ಆದರೆ ಕೇಂದ್ರ ಸರಕಾರದ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 44% ಮಾತ್ರವೇ ಸಣ್ಣ ರೈತರು ಇದ್ದಾರೆ. ಹಾಗಾಗಿ ಕೇಂದ್ರದಿಂದ ಲಭ್ಯವಾಗುವ ಬರಪರಿಹಾರ ಮೊತ್ತದಿಂದ ಸಾಕಷ್ಟು ರೈತರು ವಂಚಿತರಾಗುತ್ತಿದ್ದಾರೆ. ಹಾಗಾಗಿ ರೈತರಿಗೆ ತಮ್ಮ RTC ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. RTC ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಬಗ್ಗೆ ಅಂಕಿ ಅಂಶಗಳು ಲಭ್ಯವಾಗಲಿದೆ.

ಪ್ರತ್ಯೇಕ ಆ್ಯಪ್ ಬಿಡುಗಡೆ:

ರಾಜ್ಯದಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ಮುಗಿದಿದೆ. 33% ನಷ್ಟು ರೈತರ ಒಟ್ಟು ವಿಸ್ತೀರ್ಣ ಇದುವರೆಗೆ ನಮೂದು ಮಾಡಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ರೈತರಿಗೆ ಸೌಲಭ್ಯ ವಂಚನೆ ಆಗುವಂತೆ ಮಾಡಲಿದೆ. ಹಾಗಾಗಿ ರೈತರಿಗೆ ಪಹಣಿಯಲ್ಲಿ ಮಾಹಿತಿ ಪ್ರಕಾರ ಎಷ್ಟು ಜಮೀನು ಇದೆ ಎಂಬ ಮಾಹಿತಿ ಸಿಗಲಿದ್ದು ಗ್ರಾಮಲೆಕ್ಕಾಧಿಕಾರಿಗೂ ಈ ಮಾಹಿತಿ ಸಿಗಲಿದೆ. ಹಾಗಾಗಿ ಸರಕಾರಿ ಪ್ರಯೋಜನವನ್ನು ರೈತರು ಪಡೆಯಲು RTCಜೊತೆ ಆಧಾರ್ ಲಿಂಕ್ ಮಾಡಿಸಲೆ ಬೇಕಿದ್ದು ಇದಕ್ಕಾಗಿ ಪ್ರತ್ಯೇಕ ಆ್ಯಪ್ ಅನ್ನು ಬಿಡುಗಡೆ ಮಾಡಲು ಮುಂದಾಗಿದ್ದಾಗಿ ಕಂದಾಯ ಸಚಿವರು ಹೇಳಿಕೆ ನೀಡಿದ್ದಾರೆ.

advertisement

Leave A Reply

Your email address will not be published.