Karnataka Times
Trending Stories, Viral News, Gossips & Everything in Kannada

Gruha Lakshmi Money: ಗೃಹಲಕ್ಷ್ಮಿ ಹಣ ಬಂದಿಲ್ಲ‌ ಎಂದರೆ ಕೂಡಲೇ ಈ 2 ಕೆಲಸ ಮಾಡಿ! ಮುಗಿಬಿದ್ದ ಜನ!

advertisement

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಹೆಚ್ಚಿನ ಮಹೀಳೆಯರು ಸದುಪಯೋಗ ಪಡೆದು ಕೊಂಡಿದ್ದಾರೆ. ಆದರೆ ಕೆಲವು ಮಹೀಳೆಯರು ನೊಂದಣಿ ಮಾಡಿದ್ರು ನಮ್ಮ ಹಣ ಜಮೆ ಯಾಗಿಲ್ಲ ಎನ್ನುವ ದೂರುಗಳೇ ಹೆಚ್ಚಾಗಿ ಕೇಳಿಬರುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣ ತಾಂತ್ರಿಕ ಸಮಸ್ಯೆ ಎಂದು ಸರಕಾರ ಸ್ಪಷ್ಟನೆ ಕೂಡ ನೀಡಿದೆ. ಇದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪರಿಹಾರ ಒದಗಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ವಿಶೇಷ ಶಿಬಿರ ಆಯೋಜಿಸುವ ಮೂಲಕ‌ ಪರಿಹಾರ ಕೂಡ ನೀಡಿದೆ.

ಈ ಸಮಸ್ಯೆ ಯಾಗಿದೆ:

 

 

ಕೆಲವು ಮಹೀಳೆಯರಿಗೆ ಹಣ ಜಮೆ ಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಆಧಾರ್ ಜೋಡಣೆ ಯಾಗದಿರುವುದು , ಇ-ಕೆವೈಸಿ ಅಪ್ಡೆಟ್, ಹೆಸರು ಬದಲಾವಣೆ, ವಿಳಾಸ ದಾಖಲೆ ಸರಿ ಇಲ್ಲ ಇತ್ಯಾದಿ ಸಮಸ್ಯೆಗಳಿಂದಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯಡಿ ರಾಜ್ಯದ ಹಲವು ಮಹಿಳೆಯರಿಗೆ ಈ ಹಣ ಜಮೆ ಯಾಗಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Money) ಸುಮಾರು 8.2 ಲಕ್ಷ ಮಹಿಳೆಯರ ಖಾತೆಗೆ ಬಂದಿಲ್ಲ ಎನ್ನಲಾಗಿದೆ.ಇದಕ್ಕಾಗಿ ಮಾಹಿತಿ ಸರಿಪಡಿಸಲು ಕೆಲವೊಂದು ಸಿಬಂದಿಗಳ ನೇಮಕ, ಜೊತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಮನೆ ಮನೆಗೆ ತೆರಳಿ ಹಣ ಬಾರದೇ ಇದ್ದವರ ಸಮಸ್ಯೆ ಪರಿಹರಿಸಲಿದ್ದಾರೆ.

advertisement

ಈ ಕ್ರಮ ಕೈಗೊಂಡಿದೆ:

ಅದೇ ರೀತಿ ಹಣ (Gruha Lakshmi Money) ಜಮೆ ಯಾಗದೇ ಇರುವ ಮಹೀಳೆಯರಿಗೆ ಸರಕಾರ ಹೊಸ ಕ್ರಮ ಕೈಗೊಂಡಿದ್ದು ಮೊದಲಿಗೆ NPCI Mapping ಕಡ್ಡಾಯ ಮಾಡಿದೆ.‌ ಅದೇ ರೀತಿ ಒಂದು ವೇಳೆ ದಾಖಲೆ ಸರಿ ಇಲ್ಲದೆ ಗೃಹಲಕ್ಷ್ಮಿ ಹಣ ಬಾರದೇ ಇದ್ದಲ್ಲಿ ಮತ್ತೆ ಹೊಸದಾಗಿ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು ಎಂಬ ಅವಕಾಶ ವನ್ನು ಸಹ ನೀಡಿದೆ. ನಿಮ್ಮ ಆಧಾರ್ ಕಾರ್ಡ್ (Aadhaar Card), ರೇಷನ್ ಕಾರ್ಡ್ (Ration Card), ಬ್ಯಾಂಕ್ ಖಾತೆ (Bank Account) ಇತ್ಯಾದಿ ಮಾಹಿತಿಗಳು ಸರಿ ಇಲ್ಲದೆ ಇದ್ದಲ್ಲಿ ಅವುಗಳನ್ನು ಸರಿಪಡಿಸಿ ಮತ್ತೆ ಅರ್ಜಿ ಸಲ್ಲಿಕೆ ಮಾಡಲು ಸರಕಾರ ಅವಕಾಶ ನೀಡಿದೆ.

ಏಳನೇ ಕಂತಿನ ಹಣ ಜಮೆ:

ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ ಮಹೀಳೆಯರಿಗೆ ಆರನೇ ಕಂತಿನ ಹಣ ಜಮೆ ಯಾಗಿದ್ದು ಏಳನೇ ಕಂತಿನ ಹಣ ಕೂಡ ಮಾರ್ಚ್ 5 ರ ನಂತರ ಜಮೆ ಯಾಗಲಿದೆ.ಈಗಾಗಲೇ ಹಣ ಬಿಡುಗಡೆ ಮಾಡಿದ್ದು ಡಿಬಿಟಿ ಗೆ ವರ್ಗಾವಣೆ ಮಾಡಲಿದೆ. ಅದೇ ರೀತಿ ಹಣ ಬಾರದೇ ಇರೋ ಮಹೀಳೆಯರ ಪಟ್ಟಿ ಮಾಡಿದ್ದು ಆ ಮಹೀಳೆಯರ ದಾಖಲೆ ಗಳನ್ನು ಸರಿಯಾಗಿ ಗಮನಿಸಿ ಹಣ ಬರುವಂತೆ ಮಾಡಲು ಕ್ರಮ ವಹಿಸುತ್ತಿದೆ.

advertisement

Leave A Reply

Your email address will not be published.