Karnataka Times
Trending Stories, Viral News, Gossips & Everything in Kannada

Arecanut Price: ಪ್ರತಿದಿನದ ಅಡಿಕೆ ಬೆಲೆಯನ್ನು ಮೊಬೈಲ್ ಮೂಲಕ ತಿಳಿಯುವ ಸಿಂಪಲ್ ವಿಧಾನ ಇಲ್ಲಿದೆ!

advertisement

ಅಡಕೆ ಧಾರಣೆಯಲ್ಲಿ ದಿನೇ ದಿನೆ ವ್ಯತ್ಯಾಸವಾಗುತ್ತದೆ. ಪ್ರತಿ ದಿನ ಅಡಕೆ ರೇಟ್‌ (Arecanut Price) ಎಷ್ಟಾಯ್ತು ಎಂದು ತಿಳಿಯಲು ಬೆಳಗಾರರು ಹರಸಾಹಸ ಪಡುತ್ತಾರೆ. ಮಾರುಕಟ್ಟೆ ಜೊತೆಗೆ ಸಂಪರ್ಕ ಹೊಂದಿರುವ ದೊಡ್ಡ ರೈತರಿಗೆ ಧಾರಣೆ ತಿಳಿಯುವುದು ಸುಲಭ. ಸಣ್ಣಪುಟ್ಟ ರೈತರಿಗೆ ದರ ಗೊತ್ತಾಗುವುದು ಕಷ್ಟ. ಬೆಳೆಗಾರರಿಗೆ ಅಡಕೆ ಧಾರಣೆಯ ಮಾಹಿತಿ ತಿಳಿಸಲೆಂದೇ ಆ್ಯಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ (Google Play Store) ನಲ್ಲಿವೆ. ಅದಕ್ಕಿಂತ ಸರಳ ವಿಧಾನದಲ್ಲಿ ನೋಡೋದು ಹೇಗೆಂದು ತಿಳಿಯಲು ನಾವು ಸಹಾಯ ಮಾಡುತ್ತೇವೆ.

ಅಡಿಕೆ ದರ ಪ್ರತಿದಿನ ತಿಳಿಯಲು ಸರಳ ವಿಧಾನ:

 

advertisement

 

  • ನಿಮ್ಮ ಮೊಬೈಲ್ ಫೋನ್ ಅಲ್ಲಿ ಕ್ರೋಮ್ ಬ್ರೌಸರ್ (Chrome Browser) ಅಲ್ಲಿ ಕೃಷಿ ವಾಹಿನಿ ಎಂದು ಟೈಪ್ ಮಾಡಿ.
  • ನಂತರ ಒಂದಿಷ್ಟು ಪುಟಗಳು ತೆರೆದುಕೊಳ್ಳುತ್ತವೆ ಅದರಲ್ಲಿ ಹೋಮ್ ಪೇಜ್ (Home Page) ಕ್ಲಿಕ್ ಮಾಡಿ.
  • ಆಗ ಕೃಷಿ ವಾಹಿನಿಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳು ತೆರೆದುಕೊಳ್ಳುತ್ತವೆ.
  • ನಂತರದಲ್ಲಿ ನೀವು ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳ ಜೊತೆಗೆ ಅಡಿಕೆ, ತೆಂಗು, ಹತ್ತಿ, ರಾಗಿ, ಜೋಳ ಹೀಗೆ ಯಾವುದೇ ದರವನ್ನು ಬೇಕಾದರೂ ಇಲ್ಲಿಂದ ನೇರವಾಗಿ ಪಡೆಯಬಹುದು.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (Arecanut Price) ಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ ಬೇರೆ ತರವಿದ್ದರೆ ಉತ್ತರ ಕನ್ನಡದ ಶಿರಸಿಯಲ್ಲಿ ದರ ವಹಿವಾಟು ಬೇರೆ ರೀತಿಯಾಗಿಯೆ ಇರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿ ಇತ್ತೀಚಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಮೇಲೆ ತಿಳಿಸಿದಂತೆ ಆರಾಮವಾಗಿ ಪಡೆಯಬಹುದಾಗಿದೆ.

advertisement

Leave A Reply

Your email address will not be published.