Karnataka Times
Trending Stories, Viral News, Gossips & Everything in Kannada

Gold Price: ಸದ್ಯ ಅಮೆರಿಕದಲ್ಲಿ ಚಿನ್ನದ ಬೆಲೆ ಎಷ್ಟು ಗೊತ್ತಾ?

advertisement

ಇಡೀ ವಿಶ್ವದಲ್ಲಿ ದೊಡ್ಡಣ್ಣ ಎನ್ನುವಂತಹ ಸ್ಥಾನವನ್ನು ಕಳೆದು ಸಾಕಷ್ಟು ವರ್ಷಗಳಿಂದಲೂ ಕೂಡ ಅಮೆರಿಕ ಪಡೆದುಕೊಂಡು ಬಂದಿದೆ. ಜಗತ್ತಿನ ಯಾವುದೇ ವಿಚಾರವನ್ನು ತೆಗೆದುಕೊಳ್ಳಿ ಅಮೆರಿಕಾ ಅದರಲ್ಲಿ ಮೊದಲನೇ ಸ್ಥಾನದಲ್ಲಿ ಬಹುತೇಕ ಕಾಣಿಸಿಕೊಳ್ಳುತ್ತದೆ. ಆರ್ಥಿಕತೆ ಸಂರಕ್ಷಣೆ ಪ್ರೊಡಕ್ಷನ್ ಯಾವುದೇ ವಿಚಾರದಲ್ಲಿ ಕೂಡ ಅಮೆರಿಕ ತನ್ನ ಪ್ರಾಬಲ್ಯವನ್ನು ಕಳೆದ ಸಾಕಷ್ಟು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದೆ.

ಇನ್ನು ಚಿನ್ನದ (Gold) ವಿಚಾರಕ್ಕೆ ಬಂದ್ರೆ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಚಿನ್ನದ ರಿಸರ್ವೇಶನ್ (Gold Reservation) ಅನ್ನು ಹೊಂದಿರುವಂತಹ ದೇಶಗಳಲ್ಲಿ ಕೂಡ ಅಮೇರಿಕಾ ಅಗ್ರಗಣ್ಯ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಭಾರತಕ್ಕೆ ಹೋಲಿಸಿದರೆ ಅಮೆರಿಕ ದೇಶದಲ್ಲಿ ಚಿನ್ನದ ಬೆಲೆ (Gold Price) ಕೂಡ ಕಡಿಮೆ ಅನ್ನೋದನ್ನ ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಅಮೆರಿಕ ದೇಶದಲ್ಲಿ ಚಿನ್ನದ ಬೆಲೆ ಎಷ್ಟು ಇದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅಮೆರಿಕದಲ್ಲಿ ಚಿನ್ನದ ಬೆಲೆ (Gold Price In America):

 

Image Source: The Economic Times

 

advertisement

ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಸಾಕಷ್ಟು ವಸ್ತುಗಳು ಕಡಿಮೆ ಬೆಲೆಗೆ ಸಿಗಬಹುದಾಗಿದೆ. ಇನ್ನು ಅದೇ ರೀತಿಯಲ್ಲಿ ಚಿನ್ನವನ್ನು ಹೆಚ್ಚಾಗಿ ಹೊಂದಿರುವಂತಹ ದೇಶಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುವಂತಹ ಅಮೆರಿಕಾದಲ್ಲಿ ಚಿನ್ನದ ಬೆಲೆ (Gold Price) ಕೂಡ ಭಾರತಕ್ಕೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಕಡಿಮೆ ಎಂದು ಹೇಳಬಹುದು. ಚಿನ್ನವನ್ನು ಪ್ರತಿಯೊಬ್ಬರೂ ಕೂಡ ಅಲಂಕಾರಿಕ ವಸ್ತುವಿನ ರೀತಿಯಲ್ಲಿ ಧರಿಸುತ್ತಾರೆ ನಿಜ ಆದರೆ ಅದರಲ್ಲಿ ಕೂಡ ಎರಡು ವರ್ಗ ಇದೆ ಅನ್ನೋದನ್ನ ನಾವು ತಿಳಿದುಕೊಳ್ಳಬೇಕು.

 

Image Source: The National

 

ಒಂದು ಶ್ರೀಮಂತರ ವರ್ಗ ಕೇವಲ ಚಿನ್ನವನ ಪ್ರತಿಷ್ಠೆಗಾಗಿ ದುಬಾರಿ ಬೆಲೆಯಲ್ಲಿ ಖರೀದಿ ಮಾಡಿ ಹಾಕಿಕೊಳ್ಳುತ್ತಾರೆ. ಇನ್ನೊಂದು ವರ್ಗ ಮಧ್ಯಮ ವರ್ಗ ಇವರು ಕೇವಲ ತಾವು ಚಂದ ಕಾಣೋದಕ್ಕೆ ಮಾತ್ರವಲ್ಲದೆ ಅವುಗಳನ್ನು ಕಷ್ಟದ ಸಂದರ್ಭದಲ್ಲಿ ಅಡ ಇಟ್ಟು ತಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಕೂಡ ಚಿನ್ನವನ್ನು ಬಳಸಿಕೊಳ್ಳುತ್ತಾರೆ.

ಇನ್ನು ಅಮೆರಿಕದಲ್ಲಿರುವಂತಹ ಸದ್ಯದ ಮಟ್ಟಿಗೆ ಇರುವ ಚಿನ್ನದ ಬೆಲೆ (Gold Price) ಯನ್ನು ಗಮನಿಸುವುದಾದರೆ ಪ್ರತಿ ಔನ್ಸ್ ಗೆ 2,380.34 ಡಾಲರ್ ಅಂದರೆ ಭಾರತದ ರೂಪಾಯಿಯಲ್ಲಿ ಕನ್ವರ್ಟ್ ಮಾಡಿದರೆ 1.99 ಲಕ್ಷ ರೂಪಾಯಿಗಳಿಗಿಂತ ಹೆಚ್ಚು. ಪ್ರತೀ ಗ್ರಾಂಗೆ 76.53 ಡಾಲರ್ ಆಗಿದ್ದು ಇದನ್ನು ಭಾರತದ ರೂಪಾಯಿಯಲ್ಲಿ ಕನ್ವರ್ಟ್ ಮಾಡಿದರೆ 6403 ರೂಪಾಯಿ. ಒಂದು ಕೆಜಿ ಚಿನ್ನದ ಬೆಲೆ 76, 529 ಡಾಲರ್ ಆಗಿರುತ್ತದೆ. ಇದರ ಮೌಲ್ಯ 64 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರುತ್ತದೆ.

advertisement

Leave A Reply

Your email address will not be published.