Karnataka Times
Trending Stories, Viral News, Gossips & Everything in Kannada

Second Hand Car: ಸೆಕೆಂಡ್ ಹ್ಯಾಂಡ್ ಕಾರ್ ಮಾರುವ ಎಲ್ಲರಿಗೂ ಜಾರಿಗೆ ಬಂತು ನೋಡಿ ಹೊಸ ನಿಯಮ!

advertisement

ಹೊಸ ಕಾರನ್ನು ಖರೀದಿಸಲು ಸಾಧ್ಯವಾಗದೇ ಇದ್ದಲ್ಲಿ ಸಾಕಷ್ಟು ಜನರು ಸೆಕೆಂಡ್ ಹ್ಯಾಂಡ್ ಕಾರನ್ನು (Second Hand Cars) ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವಂತಹ ಪ್ರಯತ್ನವನ್ನು ಮಾಡುತ್ತಾರೆ ಆದರೆ ಈಗ ಜಾರಿಗೆ ಬಂದಿರುವಂತಹ ಹೊಸ ನಿಯಮಗಳ ಪ್ರಕಾರ ಡೀಲರ್ ಹಾಗೂ ಕಾರು ಖರೀದಿದಾರರ ನಡುವೆ ಕಾರಣ ಮಾರಾಟ ಮಾಡುವಂತಹ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಅನ್ನೋ ಕಾರಣಕ್ಕಾಗಿ ಜಾರಿಗೆ ತರಲಾಗಿದೆ.

ಸಾರಿಗೆ ಇಲಾಖೆ ಈ ರೀತಿ ಸೆಕೆಂಡ ಹ್ಯಾಂಡ್ ಕಾರ್ ಗಳನ್ನು (Second Hand Cars) ಡೀಲರ್ ನಿಂದ ಖರೀದಿಸುವಾಗ ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಕಾನೂನಾತ್ಮಕ ಜಂಜಾಟಗಳಿಂದ ಬಳಸಬೇಕಾಗಿಲ್ಲ ಅನ್ನೋದನ್ನ ನಿಶ್ಚಿತಗೊಳಿಸಲು ಸೆಂಟ್ರಲ್ ಮೋಟಾರ್ ವೆಹಿಕಲ್ ರೂಲ್ಸ್ 1989 ಇದರಲ್ಲಿ ಬದಲಾವಣೆ ತರಲಾಗಿದೆ. ಇದರ ಪ್ರಕಾರ ಅವರ ಬಳಿ ಆ ಸೆಕೆಂಡ್ ಹ್ಯಾಂಡ್ ಕಾರು ಇರೋತನಕ ಅವರನ್ನೇ ಓನರ್ ಅನ್ನಾಗಿ ಪರಿಗಣಿಸಲಾಗುತ್ತದೆ.

ಡೀಲರ್ಗಳೇ ಓನರ್ಗಳಾಗುತ್ತಾರೆ:

 

Image Source: eCompareMo

 

ಇದಕ್ಕಾಗಿ ಡೀಲರ್ಗಳು ರಾಜ್ಯ ಟ್ರಾನ್ಸ್ಪೋರ್ಟ್ ಇಲಾಖೆಯಿಂದ (State Transport Department) ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕಾಗಿರುತ್ತದೆ ಹಾಗೂ ಕಾರಿನ ಮಾಲೀಕತ್ವವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕಾಗಿರುತ್ತದೆ. ಈ ರೀತಿ ಮಾಲಿಕತ್ವವನ್ನು ವರ್ಗಾಯಿಸಿಕೊಳ್ಳುವ ಮುಂಚೆ ಸಂಬಂಧಪಟ್ಟಂತಹ ಇಲಾಖೆಯ ಅನುಮತಿಯನ್ನು ಪಡೆದುಕೊಂಡಿರಬೇಕು.

ವಾಹನದ ಮಾಲೀಕರು ಕೂಡ ಈ ವಿಚಾರವನ್ನು ರಾಜ್ಯ RTO ಇಲಾಖೆಗೆ ತಿಳಿಸಬೇಕು ಹಾಗೂ ಇದನ್ನ ಡೀಲರ್ ನಿಂದ ಕೂಡ ಸಹಿ ಹಾಕಿಸಿಕೊಳ್ಳಬೇಕಾಗಿರುತ್ತದೆ. ಈ ಮೂಲಕ ವಾಹನದ ನಿಜವಾದ ಮಾಲೀಕ ಹಾಗೂ ಹೊಸದಾಗಿ ಖರೀದಿಸುತ್ತಿರುವಂತಹ ಮಾಲಿಕನ್ ನಡುವೆ ಯಾವುದೇ ಲಿಂಕ್ ಇರುವುದಿಲ್ಲ. ನೇರವಾಗಿ ಸೆಕೆಂಡ್ ಹ್ಯಾಂಡ್ ಕಾರಿನ (Second Hand Car) ಡೀಲರ್ ಹಾಗೂ ಹೊಸದಾಗಿ ಖರೀದಿ ಮಾಡುತ್ತಿರುವಂತಹ ಕಾರಿನ ಮಾಲೀಕರ ನಡುವೆ ಈ ಪ್ರಕ್ರಿಯೆಗಳು ನಡೆಯುತ್ತವೆ.

advertisement

ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (Registration Certificate) ಅನ್ನು ನಕಲು ಮಾಡುವುದಕ್ಕೆ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳುವುದಕ್ಕೆ ಇದು ಡೀಲರ್ಗಳಿಗೆ ನೆರವಾಗುತ್ತದೆ. NOC ಸರ್ಟಿಫಿಕೇಟ್ ಹಾಗೂ ಖರೀದಿ ಮಾಡಲು ಬಂದಿರುವಂತಹ ಗ್ರಾಹಕರಿಗೂ ಕೂಡ ಈ ಕಾರಿನ ಮಾಲೀಕತ್ವವನ್ನು ವರ್ಗಾವಣೆ ಮಾಡುವಂತಹ ಸಂಪೂರ್ಣ ಅಧಿಕಾರ ಡೀಲರ್ ಗೆ ಬಂದಿರುತ್ತದೆ.

 

Image Source: Mint

 

ಈ ಸಂದರ್ಭದಲ್ಲಿ ಮಾರಾಟ ಮಾಡುವುದಕ್ಕಿಂತ ಮುಂಚೆ ಡೀಲರ್ಗಳು ಕೇವಲ ಕಾರಣ ಟೆಸ್ಟ್ ಡ್ರೈವ್ (Test Drive) ಮಾಡಬಹುದು ಹಾಗೂ ಅದರ ಮೇಂಟೆನೆನ್ಸ್ ಮತ್ತು ರಿಪೇರಿಗಳನ್ನು ಮಾಡಬಹುದಾಗಿದೆ. ಯಾವುದೇ ಕಾರಣಕ್ಕೂ ಪಬ್ಲಿಕ್ ರೋಡ್ಗಳಲ್ಲಿ ಈ ವಾಹನವನ್ನು ಓಡಿಸುವ ಅಧಿಕಾರವನ್ನು ಡೀಲರ್ಗಳಿಗೆ ಹಳೆ ನಿಯಮಗಳು ನೀಡುತ್ತಿರಲಿಲ್ಲ.

ಹೊಸ ನಿಯಮಗಳ ಪ್ರಕಾರ ಎಲೆಕ್ಟ್ರಾನಿಕ್ ಟ್ರಿಪ್ ರಿಜಿಸ್ಟರ್ (Electronic Trip Register) ಅನ್ನು ಹೊಂದಿರಬೇಕು ಎಂಬುದಾಗಿ ಡೀಲರ್ಗಳಿಗೆ ತಿಳಿಸುತ್ತದೆ. ಡ್ರೈವರ್ ಟೈಮ್ ಹಾಗೂ ಮೈಲೇಜ್ ಗಳನ್ನು ಕೂಡ ಇದರಲ್ಲಿ ದಾಖಲಿಸಬೇಕು. ಒಮ್ಮೆ ಕಾರು ಹೊಸ ಓನರ್ ಗೆ ಮಾರಾಟ ಆದ ನಂತರ ಡೀಲರ್ ಅದರ ಮಾಲೀಕತ್ವವನ್ನು ಹೊಸ ಓನರ್ ಗೆ ವರ್ಗಾಯಿಸುವುದು ಅವರ ಕರ್ತವ್ಯ ಆಗಿರುತ್ತದೆ. ನಿಗದಿತ ಸಮಯದಲ್ಲಿ ಇದನ್ನು ಮಾಡಬಹುದು ಅವರ ಡೀಲರ್ ಲೈಸೆನ್ಸ್ ರದ್ದುಗೊಳ್ಳುವ ಸಾಧ್ಯತೆ ಇರುತ್ತದೆ.

ಯಾವುದೇ ಜಂಜಾಟ ಇಲ್ಲದೆ ಖರೀದಿ ಸಾಧ್ಯ:

ಈ ಹಿಂದೆ ಸಾಕಷ್ಟು ಬಾರಿ ಹೊಸ ಓನರ್ ಗೆ ಕಾರನ್ನು ಮಾರಾಟ ಮಾಡಿದ ನಂತರ ಅವರು ಈ ಹಿಂದೆ ಆ ಕಾರಿನ ಓನರ್ ಮಾಡಿರುವಂತಹ ತಪ್ಪುಗಳಿಗಾಗಿ ಆ ಕಾರಿನ ಮೇಲೆ ಶಿಕ್ಷೆಯನ್ನು ಅನುಭವಿಸಿರುವ ಅಂತಹ ಉದಾಹರಣೆಗಳು ಕೂಡ ಇದು ಹೊಸದಾಗಿ ಬಂದಿರುವಂತಹ ನಿಯಮಗಳ ಪ್ರಕಾರ ಇನ್ಮುಂದೆ ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾದ ಅಗತ್ಯ ಇರುವುದಿಲ್ಲ. ಇನ್ನು ಹೊಸ ನಿಯಮಗಳ ಪ್ರಕಾರ ಡೀಲರ್ಗಳು ಹೊಸ ಕಾರಿನ ಓನರ್ಗಳಿಗೆ ಕಾರಿನ ಡಾಕ್ಯುಮೆಂಟ್ ಸೇರಿದಂತೆ ಅದಕ್ಕೆ ಕಟ್ಟಲಾಗಿರುವಂತಹ ಚಲನ್ ಗಳ ಪ್ರತಿಯನ್ನು ಸರಿಯಾದ ಸಮಯಕ್ಕೆ ನೀಡಬೇಕಾಗಿರುತ್ತದೆ.

advertisement

Leave A Reply

Your email address will not be published.