Karnataka Times
Trending Stories, Viral News, Gossips & Everything in Kannada

Yamaha Bikes : ಯಮಹಾ RX100 ಗೆ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್! ಬೈಕ್ ನ ಅಂತಿಮ ಬೆಲೆ ಬಹುತೇಕ ಬಹಿರಂಗ ಡಿಟೇಲ್ಸ್ ಇಲ್ಲಿದೆ  

advertisement

Yamaha RX100  Returns: ಎಲ್ಲಾ ಬೈಕ್ ಪ್ರೇಮಿಗಳ ಹೃದಯದಲ್ಲಿ ಭಾರತದ ಯಮಹ ಆರ್ ಎಕ್ಸ್ 100 ವಿಶೇಷ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಕೆಲವೇ ಕೆಲವು ಅವಧಿಗಳಲ್ಲಿ ಐಕಾನಿಕ್ ಬೈಕ್ ಗಳ ಪಟ್ಟಿ ಸೇರಿದಂತಹ ಯಮಹ RX100(Yamaha RX 100) ಕೊಳ್ಳಲು ಇಂದಿಗೂ ಅದೆಷ್ಟೋ ಯುವಕರು ಮುಗಿ ಬೀಳುತ್ತಿದ್ದಾರೆ. ಹೀಗಿರುವಾಗ ಕೆಲವು ವರ್ಷಗಳ ಹಿಂದೆ ಯಮಹಾ RX100 ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಈ ಕಾರಣದಿಂದ ಯಮಹ ಕಂಪನಿ(Yamaha company) ಹೊಸ ಅವತಾರದ ಯಮಹ RX100 ಬೈಕನ್ನು ಮತ್ತೊಮ್ಮೆ ಮಾರುಕಟ್ಟೆ ಮರಳಿ ತರುವ ಪ್ರಯತ್ನದಲ್ಲಿದೆ.

ಮುಂದುವರಿಯಲಿದೆ ಯಮಹದ ಲೆಜೆಂಡರಿ ಪರಂಪರೆ

ಈ ಹಿಂದೆ ಯಮಹ RX100 ತನ್ನ ಶಕ್ತಿಶಾಲಿ ಕಾರ್ಯಕ್ರಮತೆ ಹಾಗೂ ನಯವಾದ ವಿನ್ಯಾಸದಿಂದ ಭಾರತೀಯ ಬೈಕುಗಳ ಪಟ್ಟಿಯಲ್ಲಿ ಐಕಾನಿಕ್ ಸ್ಥಾನವನ್ನು(Iconic Position) ಪಡೆದುಕೊಂಡಿತ್ತು. ಆದರೆ ಕಾರಣಾಂತರಗಳಿಂದ ಅದರ ಚಲಾವಣೆಯನ್ನು ಭಾರತದಲ್ಲಿ ಸ್ಥಗಿತಗೊಳಿಸಿದರು ಕೂಡ ಬೈಕಿನ ಕ್ರೇಜ್ ಕಿಂಚಿತ್ತು ಕಡಿಮೆಯಾಗಿಲ್ಲ. ಹೌದು ಸ್ನೇಹಿತರೆ ಯಮಹ RX100 ಇಂದಿಗೂ ಕೂಡ ಮೋಟಾರ್ ಸೈಕಲ್ ಪ್ರೇಮಿಗಳನ್ನು ಆಕರ್ಷಿಸುವುದನ್ನು ಮುಂದುವರಿಸುತ್ತಲೆ ಇದೆ.

Is RX100 coming again?What is the price of RX100 2024 in India?
How much is a new Yamaha RX?
Is Rx legal in India?
Image Credit: News Now

ಹಳೆ ಮಾದರಿಯಂತೆ ಹೊಸ ಅವತಾರದಲ್ಲಿ ಯಮಹ RX ಬಿಡುಗಡೆ

ಹಳೆಯ ಯಮಹ RX100 ಬೈಕನ್ನು ಯಮಹ ಕಂಪನಿಯು ಸ್ವಲ್ಪ ಪುನರಾವರ್ತನೆಗೊಳಿಸಿ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡುವಂತಹ ಸೂಚನೆಯನ್ನು ನೀಡಿತ್ತು. ಮೋಟಾರ್ ಸೈಕಲ್ ಉತ್ಸಾಹಿಗಳ(Motorcycle Enthusiast) ನಿರೀಕ್ಷೆಯಂತೆ ಹೊಸ ಅವತಾರದಲ್ಲಿ ಯಮಹಾ RX100 225 ಸಿಸಿ ಇಂಜಿನ್ನೊಂದಿಗೆ ಹೊಸ ಮಾದರಿಯ ಬೈಕನ್ನು ಕಂಪನಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಈ ಬೈಕ್ ನೋಡಲು ಥೇಟ್ ಹಳೆಯ ಅವತಾರದಂತೆ ಇದ್ದು, ಅದೇ ರೀತಿಯಾದಂತಹ ಕಾರ್ಯಕ್ಷಮತೆ ಹಾಗೂ ಅದ್ಭುತ ವಿನ್ಯಾಸವನ್ನು ಒಳಗೊಂಡಿರುವಂತಹ ಮಾಹಿತಿಯನ್ನು ಕಂಪನಿ ಹಂಚಿಕೊಂಡಿದ್ದಾರೆ.

advertisement

ಯಮಹ RX100- ಆಧುನಿಕ ವೈಶಿಷ್ಟ್ಯತೆಗಳು

ನೋಡಲು ಹಳೆಯ ಯಮಹ RX100ನಂತೆ ಇರುವ ಈ ನೂತನ ಬೈಕ್ ನಲ್ಲಿ ಆಧುನಿಕ ವೈಶಿಷ್ಟತೆಗಳನ್ನು ಅಳವಡಿಕೆ ಮಾಡಲಾಗಿದ್ದು ಇಂಧನ ಇಂಜಕ್ಷನ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್ ಗಳ ಜೊತೆಗೆ ಡಿಸ್ಕ್ ಬ್ರೇಕ್ಗಳನ್ನು ಸೇರ್ಪಡಿಸಲಾಗಿದೆ. ಅಷ್ಟೇ ಅಲ್ಲದೆ ಕಂಪನಿ ಹೊಸ ಅವತಾರದ ಯಮಹ RX100 ನ ಕಾರ್ಯಕ್ಷಮತೆ ಮತ್ತು ಸುರಕ್ಷತೆಯ ಕಡೆಗೂ ಹೆಚ್ಚಿನ ಮನ್ನಣೆಯನ್ನು ನೀಡಿದ್ದಾರೆ.

Is RX100 coming again?What is the price of RX100 2024 in India?
How much is a new Yamaha RX?
Is Rx legal in India?
Image Credit: News Now

ಹಲವು ಬಣ್ಣಗಳಲ್ಲಿ ಲಭ್ಯವಿದೆ ಯಮಹ RX100!

ಯಮಹ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹಲವು ಕ್ಲಾಸಿಕ್ ಬಣ್ಣಗಳನ್ನು (Classic Colors) ಹೊಂದಿರುವ ಯಮಹಾ RX100ನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದು, ಮೂಲಗಳ ಮಾಹಿತಿಯ ಪ್ರಕಾರ ಹಳೆಯ ಬೈಕನ್ನು ನೆನಪಿಸುವಂತಹ ಕೆಂಪು, ಕಪ್ಪು, ನೀಲಿ, ಹಳದಿ ಹಾಗೂ ಹಸಿರಿನ ವರ್ಣಗಳಲ್ಲಿ ಹೊಸ ಅವತಾರವನ್ನು ನಿರೀಕ್ಷಿಸಬಹುದು.

ಅತಿ ಕಡಿಮೆ ಬೆಲೆಗೆ ನಿಮ್ಮದಾಗಲಿದೆ ಹೊಸ ಅವತಾರದ RX

ಮೂಲ ಮಾದರಿಯ ಕಾರ್ಯಕ್ಷಮತೆಯನ್ನು ಮತ್ತೊಮ್ಮೆ ಜನರಿಗೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಯಮಹ ಕಂಪನಿ, ಕೆಲ ನವೀಕರಣವನ್ನು ಮಾಡುವುದರ ಜೊತೆಗೆ ನೂತನ ವೈಶಿಷ್ಟ್ಯಗಳನ್ನು ಅಳವಡಿಸಿ ಕೇವಲ 1.4 ರಿಂದ 1.5 ಲಕ್ಷ ಬೆಲೆಗೆ ಬೈಕನ್ನು ಎಕ್ಸ್ ಶೋರೂಮ್ನಲ್ಲಿ ಮಾರಾಟ ಮಾಡಲಿದ್ದಾರೆ.

advertisement

Leave A Reply

Your email address will not be published.