Karnataka Times
Trending Stories, Viral News, Gossips & Everything in Kannada

HSRP: HSRP ಗೆ ಅಂತಿಮ ಗಡುವು ಹತ್ತಿರವಾದ ಬೆನ್ನಲ್ಲೇ ದೊಡ್ಡ ಅಘಾತ! ಇಂತಹವರಿಗೆ ಸಿಗುತ್ತಿಲ್ಲ ನಂಬರ್ ಪ್ಲೇಟ್.

advertisement

HSRP ನಂಬರ್ ಅನ್ನು ಅಳವಡಿಸಬೇಕು ಎನ್ನುವುದಾಗಿ ಈಗಾಗಲೇ ಸರ್ಕಾರ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದ್ದು ಇದು ಸಂದರ್ಭದಲ್ಲಿ ಕೆಲವೊಂದು ವರ್ಗದ ವಾಹನವನ್ನು ಹೊಂದಿರುವವರಿಗೆ ಈ ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವಂತಹ ಗೊಂದಲ ದೊಡ್ಡ ಮಟ್ಟದಲ್ಲಿ ಸೃಷ್ಟಿಯಾಗಿದೆ. ಹೌದು ಕೆಲವೊಂದು ಹಳೆಯ ವಾಹನಗಳ ಕಂಪನಿಗಳು ಆ ಕಾರ್ ಇಲ್ಲದೆ ನಂಬರ್ ಪ್ಲೇಟ್ಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವಂತಹ ಗೊಂದಲಕ್ಕೆ ಬಿದ್ದಿವೆ.

ಈಗಾಗಲೇ ಸಾಕಷ್ಟು ಬಾರಿ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ವಾಹನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವಂತಹ ಗಡುವಿನ ದಿನಾಂಕಗಳು ಮುಂದುವರೆದುಕೊಂಡು ಹೋಗಿವೆ. ಆದರೆ ಈಗ ಮೇ 31 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದೊಳಗೆ ಪ್ರತಿಯೊಬ್ಬರು ಕೂಡ ಅಧಿಕೃತ ವೆಬ್ಸೈಟ್ನಲ್ಲಿ ರಿಜಿಸ್ಟರ್ ಮಾಡಿಕೊಂಡು ನಂತರ ತಮ್ಮ ಶೋರೂಮ್ ನಲ್ಲಿ ಹೋಗಿ ನಂಬರ್ ಪ್ಲೇಟ್ ಪಡೆದುಕೊಂಡು ಅಳವಡಿಸಿಕೊಳ್ಳಬೇಕು ಎನ್ನುವಂತಹ ನಿಯಮಗಳನ್ನು ಜಾರಿ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಈಗ ಎಲ್ಲರ ತಲೆಯಲ್ಲಿ ಇದರ ಬಗ್ಗೆ ಗೊಂದಲ ಸೃಷ್ಟಿ ಮಾಡುವಂತೆ ಮಾಡಿದೆ.

ಬ್ರಾಂಡ್ ಲಿಸ್ಟ್ ಆಗಿಲ್ಲ

advertisement

HSRP ನಂಬರ್ ಪ್ಲೇಟ್ ಅನ್ನು ತನ್ನ ವಾಹನಕ್ಕೆ ಅಳವಡಿಸಬೇಕು ಎನ್ನುವುದಾಗಿ ಕಳೆದ ಸಾಕಷ್ಟು ದಿನಗಳಿಂದ ನಾನು ಪ್ರಯತ್ನ ಪಡುತ್ತಿದ್ದೇನೆ ಆದರೆ, ಅಧಿಕೃತ ವೆಬ್ಸೈಟ್ನಲ್ಲಿ ಆ ಬೈಕಿನ ಬ್ರಾಂಡ್ ಲಿಸ್ಟ್ ಆಗಿಲ್ಲ ಅನ್ನೋದಾಗಿ ತನ್ನ ದುಃಖವನ್ನು ಬೆಂಗಳೂರು ಮೂಲದ ಒಬ್ಬ ವ್ಯಕ್ತಿ ತೋಡಿಕೊಂಡಿದ್ದಾನೆ. RTO ನಲ್ಲಿ ಈ ವಿಚಾರದ ಬಗ್ಗೆ ಪರಿಹಾರ ಹುಡುಕಿ ಕೊಡುವಂತೆ ಕೇಳಲಾಗಿದ್ದರೂ ಕೂಡ ಇದುವರೆಗೂ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ ಅನ್ನೋದಾಗಿ ಕೂಡ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Which website is legit for HSRP? Is Siam genuine for HSRP? Is FTA HSRP real or fake? Is HSRP sticker mandatory?
Image Source: ThePrint

ಇನ್ನು ಮಂಡ್ಯದಲ್ಲಿ ಅನಿಲ್ ಕುಮಾರ್ ಎನ್ನುವಂತಹ ವ್ಯಕ್ತಿಯ ಪಾಡು ಕೂಡ ಇದೆ ಆಗಿದೆ. HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಸಿಕೊಳ್ಳಲು ಹೋದರೆ ಅವರ ನಂಬರ್ RTO ಅಡಿಯಲ್ಲಿ ರಿಜಿಸ್ಟರ್ ಆಗಿಲ್ಲ ಅನ್ನುವಂತಹ ಮಾಹಿತಿಯನ್ನು ತೋರಿಸುತ್ತಿದೆ. ನನ್ನ ಬಳಿ ಎಲ್ಲ ರೀತಿಯ ಡಾಕ್ಯುಮೆಂಟ್ಸ್ ಗಳು ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಕೂಡ ಇದ್ರು ಈ ರೀತಿ ತೋರಿಸುತ್ತಿದೆ ಅನ್ನೋದಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸಾಕಷ್ಟು ಕಡೆಗಳಲ್ಲಿ HSRP ನಂಬರ್ ಪ್ಲೇಟ್ ಅನ್ನು ಅಳವಡಿಸುವಲ್ಲಿ ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತಿದ್ದು ಇದಕ್ಕಾಗಿ ತಮ್ಮ ಹತ್ತಿರದ RTO ಆಫೀಸ್ಗೆ ಭೇಟಿ ನೀಡಬೇಕಾಗಿರುತ್ತದೆ ಅನ್ನೋದು ಕೂಡ ಡೀಲರ್ಗಳು ಸೂಚಿಸುತ್ತಿದ್ದಾರೆ. ಇನ್ನು ಇದರ ಕುರಿತಂತೆ ಉತ್ತರ ಬಂದಿದ್ದು ಈಗಾಗಲೇ ವೆಬ್ಸೈಟ್ನಲ್ಲಿ ಇರುವಂತಹ ಡೀಲರ್ಗಳ ವಾಹನಗಳ ಬ್ರಾಂಡ್ ಮೇಲೆ ಮಾತ್ರ ನಾವು ನಂಬರ್ ಪ್ಲೇಟ್ ಅನ್ನು ನೀಡುತ್ತಿದ್ದು ಯಾರು ಸಮಸ್ಯೆಯನ್ನು ಹೊಂದುತ್ತಿದ್ದಾರೋ ಅವರು ತಮ್ಮ ಡೀಲರ್ ಬಳಿ ಹೋಗಿ ಇದರ ಬಗ್ಗೆ ದೂರನ್ನು ನೀಡಬೇಕು ಎಂಬುದಾಗಿ ಹೇಳಿಕೊಳ್ಳಲಾಗಿದೆ.

advertisement

Leave A Reply

Your email address will not be published.