Karnataka Times
Trending Stories, Viral News, Gossips & Everything in Kannada

HSRP: HSRP ಅಲ್ಲ ಇಂತಹ ವಾಹನಗಳನ್ನು ದೂರದಿಂದಲೇ ಗುರುತಿಸಿ 25,000 ರೂ ಗಳವರೆಗೆ ಫೈನ್!

advertisement

ಪ್ರತಿಯೊಂದು ವಾಹನಗಳು ಕೂಡ ಸಾರಿಗೆ ನಿಯಮಗಳಿಗೆ ಅನುಸಾರವಾಗಿ ರೋಡ್ಗಳ ಮೇಲೆ ಓಡಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸ್ಕೂಟರ್ ಗಳ ವಿಚಾರದಲ್ಲಿ ಬಂದಿರುವಂತಹ ಕೆಲವೊಂದು ನಿಯಮಗಳ ಬಗ್ಗೆ ಇವತ್ತಿನ ಲೇಖನದಲ್ಲಿ ಹೇಳುವುದಕ್ಕೆ ಹೊರಟಿದ್ದು ಯಾಮಾರಿದ್ರೆ ನೀವು 25,000ಗಳವರೆಗೆ ಫೈನ್ ಕಟ್ಟಬೇಕಾಗಿ ಬರುತ್ತೆ.

ದೂರದಿಂದಲೇ ನೋಡಿ ನಿಮ್ಮ ಸ್ಕೂಟರ್ ಮೇಲೆ 25,000 ಫೈನ್ ಬೀಳುತ್ತೆ!

1. ಯಾವುದೇ ಕಾರಣಕ್ಕೂ ತಮ್ಮ ಸ್ಕೂಟರ್ ಮೇಲೆ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವ ಹಾಗಿಲ್ಲ. ಸರ್ಕಾರ ನಂಬರ್ ಪ್ಲೇಟ್ ಗಾಗಿ ಒಂದು ಕಾಮನ್ ಸ್ಟೈಲ್ ಅನ್ನು ತಂದಿದ್ದು ಪ್ರತಿಯೊಬ್ಬರು ಕೂಡ ಅದನ್ನೇ ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಇದನ್ನು ಅಪರಾಧ ಎಂಬುದಾಗಿ ಪರಿಗಣಿಸಲಾಗುತ್ತದೆ. ನಂಬರ್ ಪ್ಲೇಟ್ ನಲ್ಲಿ ಇರುವಂತಹ ಪ್ರತಿಯೊಂದು ಸಂಖ್ಯೆಗಳು ಕೂಡ ಸ್ಪಷ್ಟವಾಗಿ ಕಾಣಬೇಕಾಗಿರುತ್ತದೆ ಹಾಗೂ ನಂಬರ್ ಪ್ಲೇಟ್ ಮೇಲೆ ಬೇರೆ ರೀತಿಯ ಸ್ಟಿಕರ್ಗಳನ್ನು ಕೂಡ ಅಂಟಿಸುವ ಹಾಗೆ ಇರುವುದಿಲ್ಲ ಎನ್ನುವುದನ್ನ ಸಾರಿಗೆ ಇಲಾಖೆ ಸ್ಪಷ್ಟಪಡಿಸಿರುತ್ತದೆ. ಅದರಲ್ಲೂ ವಿಶೇಷವಾಗಿ RTO ಇತ್ತೀಚಿಗೆ ಜಾರಿಗೆ ತಂದಿರುವ ನಿಯಮಗಳ ಪ್ರಕಾರ ಪ್ರತಿಯೊಬ್ಬರು ಕೂಡ ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗಿರುತ್ತದೆ.

advertisement

Image Source: Latest Laws

2. ವಾಹನ ಕಾನೂನು ನಿಯಮಗಳ ಪ್ರಕಾರ ಯಾವುದೇ ಕಾರಣಕ್ಕೂ ಸ್ಕೂಟರ್ ಅಥವಾ ಬೈಕುಗಳನ್ನ ಮಾಡಿಫಿಕೇಶನ್ ಅಂದ್ರೆ ಅದರ ನಿಜವಾದ ರೂಪಕ್ಕಿಂತ ಬದಲಾವಣೆ ಮಾಡಿ ಬೇರೆ ರೂಪ ನೀಡುವಂತಹ ಕೆಲಸವನ್ನು ಮಾಡುವ ಹಾಗಿಲ್ಲ. ಇದು ನೋಡೋದಿಕ್ಕೆ ಸ್ಟೈಲಿಶ್ ಆಗಿ ಕಾಣಿಸಬಹುದು ಆದರೆ ವಾಹನ ನಿಯಮಗಳ ಪ್ರಕಾರ ಇದನ್ನು ಮಾಡುವ ಹಾಗಿಲ್ಲ ಅನ್ನೋದು ಕಡ್ಡಾಯವಾಗಿ ಜಾರಿಗೆ ತಂದಿರುವ ನಿಯಮವಾಗಿದೆ. ಈ ಸಂದರ್ಭದಲ್ಲಿ ಕೇವಲ ನಿಮ್ಮ ಮೇಲೆ ದೊಡ್ಡ ಮೊತ್ತದ ಫೈನ್ ಬೀಳೋದು ಮಾತ್ರವಲ್ಲದೆ ನಿಮ್ಮ ವಾಹನವನ್ನು ಜಪ್ತು ಮಾಡುವಂತಹ ಸಾಧ್ಯತೆ ಕೂಡ ಇರುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ.

3. ಇಂದಿನ ದಿನಗಳಲ್ಲಿ ಯುವಜನತೆಯಲ್ಲಿ ಅದೊಂದು ಕೆಟ್ಟ ಅಭ್ಯಾಸ ಪ್ರಾರಂಭವಾಗಿದೆ ಏನೆಂದರೆ, ತಮ್ಮ ದ್ವಿಚಕ್ರ ವಾಹನಗಳಿಗೆ ಕೆಟ್ಟದಾಗಿ ಸೌಂಡ್ ಬರುವಂತಹ ಸೈಲೆನ್ಸರ್ ಅನ್ನು ಅಳವಡಿಸೋದು. ಇಂತಹ ಕೆಲಸಗಳನ್ನು ನೀವು ರಾಯಲ್ ಎನ್ಫೀಲ್ಡ್ ಬಳಸುವವರು ಬಳಿ ಹೆಚ್ಚಾಗಿ ನೋಡಬಹುದಾಗಿದೆ. ನಿಯಮವನ್ನು ಮೀರಿ ಈ ರೀತಿಯಲ್ಲಿ ಸೈಲೆನ್ಸರ್ನಲ್ಲಿ ಬದಲಾವಣೆ ಮಾಡಿದರೆ ಪೊಲೀಸರು ನಿಮ್ಮನ್ನ ಹಿಡಿದು ಫೈನ್ ಹಾಕೋದು ಮಾತ್ರವಲ್ಲದೆ ನಿಮ್ಮ ಗಾಡಿಯಿಂದ ಸೈಲೆನ್ಸರ್ ಅನ್ನು ಕಿತ್ತುಹಾಕುವ ಸಾಧ್ಯತೆ ಕೂಡ ಇರುತ್ತದೆ.

advertisement

Leave A Reply

Your email address will not be published.