Karnataka Times
Trending Stories, Viral News, Gossips & Everything in Kannada

Electric Auto Rickshaw: 15 ನಿಮಿಷಗಳ ಚಾರ್ಜ್ ನಲ್ಲಿ 126 ಕಿಲೋಮೀಟರ್ ಹೋಗುತ್ತೆ ಈ ಎಲೆಕ್ಟ್ರಿಕ್ ಆಟೋರಿಕ್ಷಾ! ಕಡಿಮೆ ಬೆಲೆ

advertisement

ಒಬ್ಬ ವ್ಯಕ್ತಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದಕ್ಕೆ ಸಾಕಷ್ಟು ಆಪ್ಷನ್ ಗಳನ್ನು ಆತನಿಗೆ ನೀಡಲಾಗಿರುತ್ತದೆ. ಅವುಗಳಲ್ಲಿ ಮೂರು ಚಕ್ರಗಳ ವಾಹನ ಕೂಡ ಒಂದು. ಹೌದು ನಾವು ಮಾತಾಡ್ತಿರೋದು ರಿಕ್ಷಾ ಬಗ್ಗೆ. ಅದರಲ್ಲಿ ವಿಶೇಷವಾಗಿ ಇಂದಿನ ಟ್ರೆಂಡ್ ಗೆ ತಕ್ಕಂತೆ ಎಲೆಕ್ಟ್ರಿಕ್ ರಿಕ್ಷಾ (Electric Auto Rickshaw) ಕೂಡ ಬಂದಿದೆ. Omega Seiki Mobility ಎನ್ನುವಂತಹ ಕಂಪನಿ ಎಸ್ಪೋನೆಂಟ್ ಎನರ್ಜಿಯ ಜೊತೆಗೆ ಸೇರಿಕೊಂಡು ವೇಗವಾಗಿ ಓಡುವಂತಹ ಎಲೆಕ್ಟ್ರಿಕ್ ರಿಕ್ಷಾ ಅನ್ನು ನಿರ್ಮಾಣ ಮಾಡಲಾಗಿದೆ.

ಇಂದಿನ ದಿನಗಳಲ್ಲಿ ಪ್ರತಿಯೊಂದು ಕಡೆಗಳಲ್ಲಿ ಕೂಡ ಎಲೆಕ್ಟ್ರಿಕ್ ವಾಹನಗಳ ಓಡಾಟ ಹಾಗೂ ಬಳಕೆ ನಡೆಯುತ್ತಿದೆ. ಕಮರ್ಷಿಯಲ್ ವಿಭಾಗದಲ್ಲಿ ಅದರಲ್ಲೂ ವಿಶೇಷವಾಗಿ ರಿಕ್ಷಾದಲ್ಲಿ ಕೂಡ ಇದರ ಅಗತ್ಯತೆ ಇತ್ತು. ಕೊನೆಗೂ ಕೂಡ Omega Seiki Mobility ಕಂಪನಿ ಇದರ ಕೊರತೆಯನ್ನು ಈಗ ನೀಗಿಸಿದೆ ಎಂದು ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ ಎಲೆಕ್ಟ್ರಿಕ್ ರಿಕ್ಷಾದ ಬಗ್ಗೆ ಇರುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಎಲೆಕ್ಟ್ರಿಕ್ ರಿಕ್ಷಾದ ಬ್ಯಾಟರಿ ಹಾಗೂ ರೇಂಜ್:

 

Image Source: ET EnergyWorld

 

advertisement

ಎಲೆಕ್ಟ್ರಿಕ್ ರಿಕ್ಷಾ (Electric Auto Rickshaw) ಗೆ ಕಂಪನಿ 8.8 ಕಿಲೋ ವ್ಯಾಟ್ ವ್ಯಾಟ್ ನ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದೆ ಎಂಬುದಾಗಿ ತಿಳಿದು ಬಂದಿದೆ. ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಸಾಕು ಈ ಎಲೆಕ್ಟ್ರಿಕ್ ರಿಕ್ಷಾದಲ್ಲಿ 126 ಕಿಲೋಮೀಟರ್ ವರೆಗೂ ಹೋಗಬಹುದು ಎಂಬುದಾಗಿ ಕಂಪನಿ ತಿಳಿಸಿದೆ. ಇನ್ನು ಇದು ನೂರು ಪ್ರತಿಶತ ಚಾರ್ಜ್ ಆಗುವುದಕ್ಕೆ ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುವ ಕಾರಣಕ್ಕಾಗಿ ಕೂಡ ಗ್ರಾಹಕದಲ್ಲಿ ಜನಪ್ರಿಯತೆಯನ್ನು ಹೊಂದಿದೆ ಎಂದು ಹೇಳಬಹುದಾಗಿದೆ.

ಸಾಮಾನ್ಯವಾಗಿ ಇಂತಹ ಎಲೆಕ್ಟ್ರಿಕ್ ವಾಹನಗಳು ಚಾರ್ಜ್ ಆಗುವುದಕ್ಕೆ ಬೇಜಾನ್ ಸಮಯ ತೆಗೆದುಕೊಳ್ಳುತ್ತದೆ ಎಂಬುದಾಗಿ ಹೇಳುವವರು ಹೆಚ್ಚು. ಆದರೆ ಈ ಎಲೆಕ್ಟ್ರಿಕ್ ರಿಕ್ಷಾದ (Electric Auto Rickshaw) ಈ ಫೀಚರ್ ನೋಡಿದ ಮೇಲೆ ಖಂಡಿತವಾಗಿ ಪ್ರತಿಯೊಬ್ಬರೂ ಕೂಡ ಇಂಪ್ರೆಸ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದರ ಬೆಲೆ ಎಷ್ಟು ಗೊತ್ತಾ?

 

Image Source: Newspoint

 

ಕಂಪನಿ ಈ ಎಲೆಕ್ಟ್ರಿಕ್ ರಿಕ್ಷಾ ಗೆ ಎಷ್ಟು ಬೆಲೆ ಎನ್ನುವುದನ್ನು ಕೂಡ ತನ್ನ ಹೇಳಿ ಕೇಳಿಕೊಂಡಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಎಲೆಕ್ಟ್ರಿಕ್ ರಿಕ್ಷಾ ಗೆ 3.24 ಲಕ್ಷ ರೂಪಾಯಿಗಳ ಆಸು ಪಾಸಿನಲ್ಲಿ ಇದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಎಲೆಕ್ಟ್ರಿಕ್ ರಿಕ್ಷಾದ (Electric Auto Rickshaw) ಜೊತೆಗೆ 2 ಲಕ್ಷ ಕಿಲೋಮೀಟರ್ ಅಥವಾ ಐದು ವರ್ಷಗಳ ಗ್ಯಾರೆಂಟಿಯನ್ನು ನೀಡಲಾಗುತ್ತದೆ. ಹೆಚ್ಚಾಗಿರುವಂತಹ ಪೆಟ್ರೋಲ್ ಹಾಗೂ ಡೀಸೆಲ್ ಲೋಕದಲ್ಲಿ ಈ ರೀತಿಯ ಎಲೆಕ್ಟ್ರಿಕ್ ವಾಹನಗಳು ಖಂಡಿತವಾಗಿ ಸಮಾಜದಲ್ಲಿ ಒಂದು ಸಕಾರಾತ್ಮಕ ಬದಲಾವಣೆ ಹಾಗೂ ಬೆಳವಣಿಗೆಯನ್ನು ತರುವಂತಹ ಕೆಲಸವನ್ನು ಮಾಡುತ್ತಿವೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.