Karnataka Times
Trending Stories, Viral News, Gossips & Everything in Kannada

Property Rules: ಆಸ್ತಿಯಲ್ಲಿ ಎರಡನೇ ಹೆಂಡತಿ ಮಕ್ಕಳಿಗೆ ಸಮಪಾಲು ನೀಡಬೇಕಾ? ಬಂತು ಹೊಸ ರೂಲ್ಸ್

advertisement

ಇಂದು ಆಸ್ತಿ ಪಾಸ್ತಿಗೆ ಚಿನ್ನದ ಮೌಲ್ಯ ಇದೆ ಎಂದು ಹೇಳಬಹುದು. ಹಾಗಾಗಿ ತಮ್ಮ ಪೂರ್ವಜರ ಆಸ್ತಿ (Ancestral Property) ಆಗಿದ್ದರೂ ಸರಿಯೇ ಕಷ್ಟ ಪಟ್ಟು ಕೋರ್ಟ್ ಮೆಟ್ಟಿಲೇರಿಯಾದರೂ ಪಡೆದೆ ಪಡೆಯುತ್ತಾರೆ. ಆಸ್ತಿಯಲ್ಲಿ ಸ್ವಂತ ಹಾಗೂ ಪಿತ್ರಾರ್ಜಿತ ಮತ್ತು ಬಳುವಳಿಯಾಗಿ ಬಂದ ಆಸ್ತಿ ಎಂಬ ಅನೇಕ ಪ್ರಕಾರ ಇದ್ದು ಒಂದೊಂದಕ್ಕೂ ಒಂದೊಂದು ನಿಯಮ ಅನ್ವಯ ಆಗಲಿದೆ. ಹಿಂದೆಲ್ಲ ಬಹುಪತ್ನಿತ್ವ ಸಂಬಂಧ ಹೆಚ್ಚಾಗಿ ಇದ್ದು ಈಗ ಆಸ್ತಿ ಹಂಚಿಕೆ ವಿಚಾರವಾಗಿ ಜಗಳ ಆಗುವುದು ಇದೆ.

ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು ವ್ಯಕ್ತಿ ಮರಣ ಹೊಂದಿದ್ದು ಇಬ್ಬರು ಪತ್ನಿಯರು ಕೂಡ ಮರಣ ಹೊಂದಿದ್ದರೆ ಆಗ ಆ ವ್ಯಕ್ತಿಯ ಆಸ್ತಿ (Property) ಯಾರ ಪಾಲಿಗೆ ಸೇರಲಿದೆ. ಯಾರು ಆ ಆಸ್ತಿಯ ಮಾಲಕರಾಗಲಿದ್ದಾರೆ ಎರಡನೇ ಪತ್ನಿ ಮಕ್ಕಳಿಗೆ ಆಸ್ತಿಯ ಹಕ್ಕು ಸಿಗಲಿದೆಯಾ ಈ ಸಂಬಂಧಿತ ಕಾನೂನು ನಿಯಮ ಏನು ಹೇಳಲಿದೆ ಎಂಬ ಬಗ್ಗೆ ಸವಿವರ ಮಾಹಿತಿ ಇಲ್ಲಿ ನಾವಿಂದು ನಿಮಗೆ ನೀಡಲಿದ್ದೇವೆ.

ಮೊದಲ ಪತ್ನಿಗೆ ಮಾತ್ರ ಅಧಿಕಾರ ಇದೆಯಾ?

 

Image Source: Housewise

 

ವ್ಯಕ್ತಿ ಎರಡು ಮದುವೆಯಾದ ಪಕ್ಷದಲ್ಲಿ ಮೊದಲ ಹೆಂಡತಿಗೆ ಅಧಿಕಾರ ಅಧಿಕ ಇರಲಿದೆ ಆಸ್ತಿಯಲ್ಲಿಯೂ ಆಕೆಯ ಮಕ್ಕಳಿಗೆ ಅಧಿಕ ಪಾಲು ಸಿಗಲಿದೆ ಎರಡನೇ ಮಕ್ಕಳಿಗೆ ಅಧಿಕಾರ ಇಲ್ಲ ಎಂದು ನಂಬಲಾಗಿತ್ತು. ಇದು ನಿಜವಾಗಿ ಕಾನೂನಿನಲ್ಲೂ ಉಲ್ಲೇಖ ಇದೆಯಾ ಎಂದರೆ ಖಂಡಿತಾ ಇಲ್ಲ ಎನ್ನಬಹುದು. ಕಾನೂನಿನ ಪ್ರಕಾರ ಎಲ್ಲ ಮಕ್ಕಳಿಗೆ ಕೂಡ ಆಸ್ತಿಯಲ್ಲಿ ಸಮಪಾಲು ನೀಡಬೇಕು ತಾರತಮ್ಯ ಮಾಡುವಂತಿಲ್ಲ ಎಂಬ ನಿಯಮ ಇದೆ. ಹಾಗಾಗಿ ಕಾನೂನಿನ ಪ್ರಕಾರ ಎರಡು ಹೆಂಡತಿಯರು ಮತ್ತು ಅವರ ಮಕ್ಕಳು ಸರಿಸಮಾನರಾಗಿದ್ದಾರೆ.

advertisement

ಯಾವ ಆಸ್ತಿ ಎಂಬುದು ಮುಖ್ಯ:

 

Image Source: LiveChennai

 

ತಂದೆಯಿಂದ ಆಸ್ತಿಯನ್ನು ಸಮಪಾಲು ಪಡೆಯುವ ಮುನ್ನ ಈ ಆಸ್ತಿ (Property) ಯಾವುದು ಎಂಬುದು ಮೊದಲು ನೋಡಬೇಕು. ಆಸ್ತಿ ಸ್ವಂತದ್ದು ಆಗಿದ್ದರೆ ಅವರು ವಿಲ್ ಮಾಡಿ ಸತ್ತಿದ್ದರೆ ಅದರ ಪ್ರಕಾರವೇ ಆಸ್ತಿ ಹಂಚಿಕೆ ಆಗಲಿದೆ. ಅದೇ ರೀತಿ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ವಿಲ್ ಇಲ್ಲ ಎಂದಾದರೆ ಆಗ ನೀವು ಆಸ್ತಿ ಸಮಪಾಲು ನೀಡಬೇಕು. ಎರಡನೇ ಹೆಂಡತಿ ಮಕ್ಕಳಿಗೂ ಆಸ್ತಿಯ ಪಾಲು ನೀಡಲೇ ಬೇಕು ಎಂಬ ನಿಯಮ ಇದೆ. ಅದೇ ರೀತಿ ಆತನ ಪತ್ನಿಯಂದಿರು ಒಂದು ವೇಳೆ ಬದುಕಿದ್ದರೆ ಆಕೆಗೂ ಕೂಡ ಪ್ರತ್ಯೇಕ ಆಸ್ತಿ ಭಾಗ ನೀಡಲೇ ಬೇಕು ಎಂಬ ನಿಯಮ ಇದೆ.

ದಾನವಾಗಿ ಬಂದಿದ್ದರೆ:

ಒಂದು ವೇಳೆ ಆ ಒಂದು ಆಸ್ತಿ (Property) ನಿಮ್ಮ ತಂದೆಗೆ ದಾನವಾಗಿ ಬಂದಿದ್ದರೆ ಅದಕ್ಕೆ ಬೇರೆ ನಿಯಮ ಅನ್ವಯವಾಗಲಿದೆ. ದಾನವಾಗಿ ಬಂದ ಆಸ್ತಿ ಇತ್ತೀಚಿನ ಕಾನೂನು ಪ್ರಕಾರ ಕನ್ವರ್ಷನ್ ಆಗಿದ್ದರೆ ಆಗ ಅದು ನಿಮ್ಮ ಕುಟುಂಬದ ಸ್ವಂತ ಆಸ್ತಿ ಆಗಲಿದೆ. ಹಾಗೆ ಪಡೆದ ಆಸ್ತಿ ದಾಖಲಾತಿ ಸಮೇತ ವಿಲ್ ಮಾಡಿ ಇಟ್ಟರೆ ಆ ವಿಲ್ ಪ್ರಕಾರ ಆಸ್ತಿ ಹಂಚಿಕೆ ಆಗಲಿದೆ. ವಿಲ್ ಇಲ್ಲದಿದ್ದರೆ ಎರಡು ಹೆಂಡತಿ ಹಾಗೂ ಮಕ್ಕಳಿಗೆ ಸಮಾನಾಗಿ ಹಂಚಿಕೆ ಆಗುತ್ತದೆ.

advertisement

Leave A Reply

Your email address will not be published.