Karnataka Times
Trending Stories, Viral News, Gossips & Everything in Kannada

Property: ಇಂತಹ ಸಂದರ್ಭಗಳಲ್ಲಿ ತಂದೆ, ಮಗನ ಅನುಮತಿ ಇಲ್ಲದೆಯೇ ಆಸ್ತಿ ಮಾರಾಟ ಮಾಡಬಹುದು, ಸುಪ್ರೀಂಕೋರ್ಟ್ ಮಹತ್ವದ ತೀರ್ಮಾನ!

advertisement

ದೇವರ ಮನೆಯಲ್ಲಿ ವಿಳಂಬ ಇರಬಹುದು ಆದರೆ ಅನ್ಯಾಯ ಆಗುವುದಿಲ್ಲ ಎನ್ನುವ ಮಾತನ್ನ ನೀವು ಕೇಳಿರಬಹುದು. ಇದು ಕಾನೂನಿಗೂ ಕೂಡ ಚೆನ್ನಾಗಿ ಅನ್ವಯವಾಗುತ್ತೆ. ಯಾಕಂದ್ರೆ ಸಾಮಾನ್ಯವಾಗಿ ಕಾನೂನು ವಿವಾದಗಳು ಅಷ್ಟು ಸುಲಭವಾಗಿ ಬಗೆಹರಿಯುವುದಿಲ್ಲ. ಒಮ್ಮೆ ಒಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿದ್ರೆ ಅದು ಎಷ್ಟು ವರ್ಷಗಳ ನಂತರ ತೀರ್ಮಾನಕ್ಕೆ ಬರುತ್ತೆ ಅಂತ ಯಾರಿಗೂ ಹೇಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಸಾಕಷ್ಟು ಜನ ಯಾವುದೇ ಪ್ರಕರಣದಲ್ಲಿ ನ್ಯಾಯಾಲಯದ ಮೊರೆ ಹೋಗಲು ಹಿಂಜರಿಯುತ್ತಾರೆ.

ಆದರೆ ನ್ಯಾಯಾಲಯ ಯಾವಾಗ್ಲೂ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಹಾಗಾಗಿ ಎಲ್ಲ ಪ್ರಕರಣಗಳನ್ನು ಸರಿಯಾಗಿ ಕೂಲಂಕುಶವಾಗಿ ವಿಚಾರಣೆ ನಡೆಸಿ, ಸರಿ ತಪ್ಪುಗಳ ಲೆಕ್ಕಾಚಾರ ಹಾಕಿ ನಂತರ ತನ್ನ ತೀರ್ಪನ್ನು ಕೊಡುತ್ತದೆ. ಇದೀಗ 54 ವರ್ಷಗಳ ಹಿಂದಿನ ಒಂದು ಪ್ರಕರಣಕ್ಕೆ ಅಂತ್ಯ ಸಿಕ್ಕಿದೆ ಸುಪ್ರೀಂಕೋರ್ಟ್ (Supreme Court) ತನ್ನ ನಿರ್ಣಯವನ್ನು ತಿಳಿಸಿದೆ..

ತಂದೆಯ ಆಸ್ತಿ ಮಾರಲು ಮಗ ನಿರಾಕರಿಸುವಂತಿಲ್ಲ:

 

Image Source: Makaan

 

54 ವರ್ಷಗಳ ಹಿಂದೆ ಒಂದು ಕೇಸ್ ಕೋರ್ಟ್ ಮೆಟ್ಟಿಲೇರಿತ್ತು. ಅದಕ್ಕೆ ಸುಪ್ರೀಂ ಕೋರ್ಟ್ (Supreme Court) ಈಗ ಮಹತ್ವದ ತೀರ್ಪನ್ನು ನೀಡುವುದರ ಮೂಲಕ ತೆರೆ ಎಳೆದಿದೆ. ಯಾವುದೇ ತಂದೆ ಕಾನೂನು ಅಗತ್ಯಗಳನ್ನು ಪೂರೈಸುವ ಸಲುವಾಗಿ ಭೂಮಿಯನ್ನು ಅಥವಾ ಆಸ್ತಿಯನ್ನು ಮಾರಾಟ (Property Selling) ಮಾಡಿದರೆ ಪಾಲುದಾರರು ಅಂದರೆ ಮಕ್ಕಳು, ಕಾನೂನು ಬದ್ಧವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ತೀರ್ಮಾನ ನೀಡಿದೆ.

advertisement

ತಂದೆ, ವಿಲ್ ಮಾಡಿಟ್ಟ ನಂತರವೂ ಕೂಡ ಕಾನೂನಿನ ಅಗತ್ಯಗಳಿಗಾಗಿ ಭೂಮಿ ಮಾರಾಟ ಮಾಡಿದರೆ ಹಕ್ಕುದಾರರು ತಕರಾರು ಮಾಡುವಂತಿಲ್ಲ. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ 1964 ರಲ್ಲಿ ಮಗ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರುವಾಗ ತಂದೆ ಮಗ ಇಬ್ಬರು ಜೀವಂತ ಇದ್ದರು ಆದರೆ ಅದರ ನಂತರದ ದಿನದಲ್ಲಿ ವಾರಸುದಾರರು ಪ್ರಕರಣವನ್ನು ಮುಂದುವರಿಸಿಕೊಂಡು ಬಂದಿದ್ದರು.

ತೀರ್ಪು ನೀಡಿದ ಸುಪ್ರೀಂ ಕೋರ್ಟ್:

 

Image Source: Business Today

 

ನ್ಯಾಯಮೂರ್ತಿಗಳಾದ ಎಎಂ ಸಪ್ರೆ ಮತ್ತು ಎಸ್ ಕೆ ಕೌಲ್ ಅವರ ಪೀಠವು ಹಿಂದೂ ಕಾನೂನು 254ನೇ ವಿಧಿಯ ಪ್ರಕಾರ ತಂದೆಯಿಂದ ಆಸ್ತಿ (Property) ಯನ್ನು ಮಾರಾಟ ಮಾಡುವ ಹಕ್ಕು ಇದೆ ಎಂದು ಹೇಳಿದ್ದಾರೆ. ಅನುಚ್ಛೇದ 254 (2) ಅಡಿಯಲ್ಲಿ ಉತ್ತರಾಧಿಕಾರಿ ಪೂರ್ವಜರ ಆಸ್ತಿಯನ್ನು ಮಾರಾಟ ಮಾಡಬಹುದು ಎನ್ನುವ ಹಕ್ಕನ್ನು ನೀಡುತ್ತದೆ. ಇದರಲ್ಲಿ ಇನ್ನೊಂದು ಮುಖ್ಯವಾದ ವಿಚಾರ ಅಂದ್ರೆ ಅನೈತಿಕ ಅಥವಾ ಕಾನೂನುಬಾಹಿರ ಕೃತ್ಯವನ್ನು ಹೊರತುಪಡಿಸಿ ಕಾನೂನಾತ್ಮಕ ವಿಚಾರಗಳಿಗೆ ಮಗ ಹಾಗೂ ಮೊಮ್ಮಗನ ಪಾಲನ ಮಾರಾಟ ಮಾಡಿದರೆ ಅದಕ್ಕೆ ಪಾಲುದಾರರು ಆಕ್ಷೇಪಣೆ ಒಡ್ಡುವಂತಿಲ್ಲ. ಪೂರ್ವಿಕರ ಸಾಲವನ್ನು ತೀರಿಸಲು ಪಾಲುದಾರರಿದ್ದರು ಕೂಡ ಆ ಆಸ್ತಿಯನ್ನು ಮಾರಾಟ ಮಾಡಲು ತಂದೆಗೆ ಹಕ್ಕಿದೆ.

ತಂದೆ ತನ್ನ ಪೂರ್ವಜರ ಆಸ್ತಿ (Ancestral Property) ಯನ್ನು ತನ್ನ ಮಕ್ಕಳ ಮದುವೆ ಖರ್ಚಿಗಾಗಿ ಅಥವಾ ಕುಟುಂಬದ ಸದಸ್ಯರ ಅಂತ್ಯಕ್ರಿಯೆಗಾಗಿ ಮಾರಾಟ ಮಾಡುವ ಸಂದರ್ಭ ಬಂದರೆ ಅಥವಾ ನಡೆಯುತ್ತಿರುವ ವ್ಯಾಜ್ಯಗಳ ವೆಚ್ಚವನ್ನು ಭರಿಸಲು ಕೂಡ ಆಸ್ತಿ ಮಾರಾಟ ಮಾಡಬಹುದು. ಅಷ್ಟೇ ಅಲ್ಲದೆ ಅವಿಭಕ್ತ ಕುಟುಂಬದ ಮುಖ್ಯಸ್ಥನ ವಿರುದ್ಧ ಯಾವುದೇ ಗಂಭೀರ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದಲ್ಲಿ ಅದರ ರಕ್ಷಣೆಗೂ ಕೂಡ ಆಸ್ತಿ ಮಾರಾಟ ಮಾಡಬಹುದು.

advertisement

Leave A Reply

Your email address will not be published.