Karnataka Times
Trending Stories, Viral News, Gossips & Everything in Kannada

Property Auction: ಎಷ್ಟು ದಿನಗಳವರೆಗೆ EMI ಕಟ್ಟದಿದ್ದರೆ ಆಸ್ತಿ ಹರಾಜಾಗಲಿದೆ ಗೊತ್ತಾ? ಹೊಸ ರೂಲ್ಸ್

advertisement

ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುವುದು ಇಂದಿನ ದಿನದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಹೌದು ಸಾಲ ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ ಸರಿಯಾದ ಸಮಯದಲ್ಲಿ ಕಟ್ಟುವುದು ಕೂಡ ಅಷ್ಟೇ ಮುಖ್ಯ. ಅದು EMI ಆಗಿರಬಹುದು, ಇಲ್ಲವೇ ಪೂರ್ತಿ ಕಂತೆ ಆಗಿರಬಹುದು. ಒಂದು ವೇಳೆ ನೀವು ಸಾಲವನ್ನು ಕಟ್ಟದಿದ್ದಲ್ಲಿ ಡೀಫಾಲ್ಟರ್ ಎಂದು ನಿಮ್ಮನ್ನು ಗುರುತಿಸಲಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರನ್ನು (Credit Score) ಕಡಿಮೆಗೊಳಿಸುತ್ತದೆ. ಭವಿಷ್ಯದಲ್ಲಿ ಹಣಕಾಸಿನ ನೆರವನ್ನು ಪಡೆಯುವಲ್ಲಿ ಕೂಡ ತೊಂದರೆಯನ್ನು ನೀಡುತ್ತದೆ. ಬನ್ನಿ ಹಾಗಿದ್ದರೆ ಮಾಡಿದ ಸಾಲವನ್ನು ಕಟ್ಟದಿದ್ದರೆ ಆಗುವ ಪರಿಣಾಮಗಳೇನು ಎಂದು ನೋಡಿಕೊಂಡು ಬರೋಣ.

ಆಸ್ತಿಯನ್ನು ಹರಾಜು (Property Auction) ಮಾಡಲು ಬ್ಯಾಂಕ್‌ನ ಪ್ರಕ್ರಿಯೆ ಏನು?

 

Image Source: Times Property

 

EMI ಅನ್ನು 90 ದಿನಗಳವರೆಗೆ ಪಾವತಿಸದಿದ್ದರೆ, ಸಾಲವನ್ನು ಅನುತ್ಪಾದಕ ಆಸ್ತಿ (NPA) ಎಂದು ನಿರೂಪಿಸಲಾಗುತ್ತದೆ. ಮಾಹಿತಿಯನ್ನು ಕ್ರೆಡಿಟ್ ಬ್ಯೂರೋಗಳಿಗೆ ರವಾನಿಸಲಾಗುತ್ತದೆ ಮತ್ತು ಸಾಲಗಾರನಿಗೆ ಮರುಪಾವತಿಗಾಗಿ ಸಂದೇಶ ರವಾನೆ ಮಾಡಲಾಗುತ್ತಿದೆ. ಸಾಲಗಾರನು ಪ್ರತಿಕ್ರಿಯಿಸಲು ವಿಫಲವಾದರೆ ಕಾನೂನು ನೋಟಿಸ್ ನೀಡಲಾಗುತ್ತದೆ. 60 ದಿನಗಳಲ್ಲಿ ಕಾನೂನು ನೊಟೀಸ್ ಗೆ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ಸಾಲಗಾರನ ಆಸ್ತಿಯ ಸ್ವಾಧೀನಗೊಳಿಸಿಕೊಳ್ಳಬಹುದು.

ನಂತರದಲ್ಲಿ ಆಸ್ತಿಯನ್ನು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಕನಿಷ್ಠ ಎರಡು ಪ್ರಮುಖ ಪತ್ರಿಕೆಗಳಲ್ಲಿ ಕನಿಷ್ಠ ಒಂದು ತಿಂಗಳ ಮೊದಲು ಹರಾಜಿಗೆ ಜನರನ್ನು ಆಹ್ವಾನಿಸುವ ಸೂಚನೆಯನ್ನು ನೀಡಲಾಗುತ್ತದೆ. ವ್ಯಕ್ತಿಗಳು ತಮ್ಮ ಹಕ್ಕುಗಳನ್ನು ಅಥವಾ ಅವರು ಹೊಂದಿರುವ ಯಾವುದೇ ಆಕ್ಷೇಪಣೆಗಳನ್ನು 14 ದಿನಗಳೊಳಗೆ ಸಲ್ಲಿಸಲು ಕೇಳುತ್ತದೆ. ಒಂದು ವೇಳೆ ಸಂಬಂಧಪಟ್ಟವರು ಸಲ್ಲಿಸದಿದ್ದಲ್ಲಿ ಆಸ್ತಿ ಹರಾಜಾ (Property Auction) ಗುತ್ತದೆ.

ಕ್ರೆಡಿಟ್ ಸ್ಕೋರ್ (Credit Score) ಮೇಲೆ ಪರಿಣಾಮ:

 

Image Source: SoFi

 

ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯದಲ್ಲಿ ಮರುಪಾವತಿಸಲು ವಿಫಲವಾದರೆ ಬ್ಯಾಂಕ್ ಅದನ್ನು ಕ್ರೆಡಿಟ್ ಬ್ಯೂರೋ (Credit Bureau) ಗಳಿಗೆ ವರದಿ ಮಾಡುತ್ತದೆ. ಅದು ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕಳಪೆ ಕ್ರೆಡಿಟ್ ಸ್ಕೋರ್ ನಿಮ್ಮ ಹಣಕಾಸಿನ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಿಬಿಡುತ್ತದೆ ಮತ್ತು ಭವಿಷ್ಯದಲ್ಲಿ ಸಾಲ ಸಿಗುವುದು ಕಷ್ಟವಾಗುತ್ತದೆ.

advertisement

ಸುರಕ್ಷಿತ ಸಾಲಗಳು:

ಸುರಕ್ಷಿತ ಸಾಲದಲ್ಲಿ ಡೀಫಾಲ್ಟ್ ಎಂದರೆ ಬಾಕಿ ಮೊತ್ತವನ್ನು ಮರುಪಡೆಯಲು ಸಾಲವನ್ನು ಹರಾಜು ಮಾಡುವ ಹಕ್ಕನ್ನು ಹಣಕಾಸು ಸಂಸ್ಥೆ ಹೊಂದಿದೆ ಎಂದರ್ಥ. ವೈಯಕ್ತಿಕ ಸಾಲಗಳಾದಂತಹ ಸುರಕ್ಷಿತ ಸಾಲಗಳ ಡೀಫಾಲ್ಟ್ ಮತ್ತು ಕ್ರೆಡಿಟ್ ಸ್ಕೋರ್ (Credit Score) ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ, ಅದು ಮುಂದಿನ ಸಲ ಸಾಲ ಪಡೆಯುವಾಗ ತೊಂದರೆ ಉಂಟುಮಾಡುತ್ತದೆ.

ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ:

ಸಾಲದ ಡೀಫಾಲ್ಟ್ ನಂತರ ನೀವು ಮೊದಲ ಹೆಜ್ಜೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸುವುದರ ಕಡೆಗೆ ಗಮನ ನೀಡಬೇಕು. ಮತ್ತು ಸಾಲದಾತರೊಂದಿಗೆ ಮಾತುಕತೆ ನಡೆಸುವ ಮೂಲಕ ಬಾಕಿಯನ್ನು ಖಚಿತ ಪಡಿಸಿಕೊಳ್ಳಬೇಕು ಕಾಲಾ ನಂತರದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಿದಂತೆ ನೀವು ಮತ್ತೆ ಸಾಲವನ್ನು ಪಡೆಯಬಹುದಾಗಿದೆ.

ಮತ್ತೆ ಸಾಲಕ್ಕೆ ಅರ್ಜಿ ಸಲ್ಲಿಸುವುದು ಯಾವಾಗ?

ಹಣಕಾಸಿನ ಪರಿಸ್ಥಿತಿ ಸುಧಾರಿಸಿದಂತೆ ನಿಮ್ಮ ಉಳಿದ ಸಾಲಗಳ ನಿಯಮಿತ ಪಾವತಿಯನ್ನು ಪೂರ್ಣಗೊಳಿಸಬೇಕಾಗುತ್ತದೆ ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಸುಧಾರಿಸಿದ ನಂತರದಲ್ಲಿ ನೀವು ಮತ್ತೆ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.

ಡಿಫಾಲ್ಟ್ ಸಂದರ್ಭದಲ್ಲಿ ಮುಂದಿನ ಹಂತಗಳೇನು:

ನೀವು ಸಾಲವನ್ನು ಮರು ಪಾವತಿಸಲು ವಿಫಲರಾಗಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರನ್ನು ಸುಧಾರಿಸಲು ನೀವು ಬಹಳ ಕಷ್ಟ ಪಡಬೇಕಾಗುತ್ತದೆ. ಸುಧಾರಿತ ಕ್ರೆಡಿಟ್ ಸ್ಕೋರ್ (Credit Score) ಭವಿಷ್ಯದಲ್ಲಿ ಹಣಕಾಸು ಉತ್ಪನ್ನಗಳು ಮತ್ತು ಸೇವೆಯನ್ನು ನಿಮಗೆ ನೀಡುವಲ್ಲಿ ಯಶಸ್ವಿಯಾಗುತ್ತದೆ. ಒಂದು ವೇಳೆ ನೀವು ಕ್ರೆಡಿಟ್ ಸ್ಕೋರನ್ನು ಸುಧಾರಿಸಿಕೊಂಡಿಲ್ಲವಾದರೆ ಮುಂದಿನ ದಿನಗಳಲ್ಲಿ ಸಾಲ ಸೌಲಭ್ಯಗಳು ಸಿಗುವುದು ಕಷ್ಟಕರವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸ್ಥಿರವಾಗಿದ್ದರೆ ಸುರಕ್ಷಿತ ಭವಿಷ್ಯವನ್ನು ಹೊಂದಬೇಕು ಎಂದಿದ್ದರೆ ಸಾಲ ಮಾಡದೆ ಇರುವುದು ಉತ್ತಮ. ಒಂದು ವೇಳೆ ಸಾಲವನ್ನು ಮಾಡಿದರು ಕೂಡ ಸರಿಯಾದ ಸಮಯದಲ್ಲಿ ಹಣವನ್ನು ಮರುಪಾವತಿ ಮಾಡಿ ಕ್ರೆಡಿಟ್ ಸ್ಕೋರನ್ನು ಉತ್ತಮವಾಗಿರಿಸಿಕೊಳ್ಳುವುದು ಅತ್ಯುತ್ತಮವಾದ ವಿಧಾನವಾಗಿದೆ.

advertisement

Leave A Reply

Your email address will not be published.