Karnataka Times
Trending Stories, Viral News, Gossips & Everything in Kannada

CIBIL Score: ಇಂತಹವರಿಗೆ ಇನ್ಮೇಲೆ ಸುಲಭವಾಗಿ ಕಾರ್ ಲೋನ್ ಸಿಗಲ್ಲ! ಧಿಡೀರ್ ಹೊಸ ರೂಲ್ಸ್

advertisement

ಸಾಲ ಮಾಡೋದು ಸುಲಭವಲ್ಲ. ಹೌದು ಸಾಲ ಮಾಡಿ ಕಾರ್ ತೆಗೆದುಕೊಳ್ಳುವ ಯೋಚನೆ ನಿಮಗಿದ್ದರೆ ಮೊದಲು ನೀವು ನಿಮ್ಮ ಕ್ರೆಡಿಟ್ ಸ್ಕೋರ್ (Credit score) ಎಷ್ಟಿದೆ ಎಂಬುದನ್ನು ತಿಳಿದಿರಬೇಕಾಗುತ್ತದೆ.ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಗಳ ಹಣಕಾಸಿನ ಸ್ಥಿತಿ ಹೇಗಿದೆ ಎಂದು ಪರಿಶೀಲಿಸಲಾಗುತ್ತದೆ. ಬ್ಯಾಂಕಾಗಲೀ ಅಥವಾ ಇನ್ಯಾವುದೇ ಹಣಕಾಸು ಸಂಸ್ಥೆಯಾಗಲೀ ಕ್ರೆಡಿಟ್ ಸ್ಕೋರ್ (Credit score) ಪರಿಗಣನೆಗೆ ತೆಗೆದುಕೊಳ್ಳುತ್ತವೆ. ಕ್ರೆಡಿಟ್ ಸ್ಕೋರ್ ಯಾವುದೇ ಒಬ್ಬ ವ್ಯಕ್ತಿಯ ಹಣಕಾಸು ನಿರ್ವಹಣೆಗೆ (Money Management) ಕೈಗನ್ನಡಿ ಇದ್ದಂತೆ. ಇದರ ಆಧಾರದ ಮೇಲೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ಹೀಗಾಗಿ, ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಯಾವುದೇ ಸಾಲ ತೆಗೆದುಕೊಳ್ಳುವಾಗಲೂ ಕ್ರೆಡಿಟ್ ಸ್ಕೋರ್ ನೋಡಲಾಗುತ್ತದೆ. ಕಾರ್ ಲೋನ್ (Car Loan) ಪಡೆಯುವಾಗಲೂ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಇದು ಪ್ರಮುಖ ಪಾತ್ರ ವಹಿಸುತ್ತದೆ.

700 ಕ್ಕಿಂತ ಹೆಚ್ಚಿನ CIBIL Score ಏನನ್ನು ಸೂಚಿಸುತ್ತದೆ?

700 ಕ್ಕಿಂತ ಹೆಚ್ಚಿನ CIBIL ಸ್ಕೋರ್ (CIBIL Score) ಉತ್ತಮ ಕ್ರೆಡಿಟ್ ಇತಿಹಾಸವನ್ನು ತೋರಿಸುತ್ತದೆ ಮತ್ತು ನೀವು ಸಾಲವನ್ನು ಸಮಯಕ್ಕೆ ಮರುಪಾವತಿ ಮಾಡಿದ್ದೀರಿ ಎಂದು ಸಾಲದಾತರಿಗೆ ತೋರಿಸುತ್ತದೆ. ಕ್ರೆಡಿಟ್ ಸ್ಕೋರ್ 300ರಿಂದ 900 ಅಂಕಗಳವರೆಗೆ ಇರುತ್ತದೆ. 300 ಎಂಬುದು ಕನಿಷ್ಠವಾದರೆ 900 ಗರಿಷ್ಠ ಆಗಿರುತ್ತದೆ. ಕ್ರೆಡಿಟ್ ಸ್ಕೋರ್ 700ಕ್ಕಿಂತ ಹೆಚ್ಚು ಇದ್ದರೆ ಆ ವ್ಯಕ್ತಿಯ ಸಾಲ ಬದ್ಧತೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇಂತಹ ವ್ಯಕ್ತಿಗಳಿಗೆ ಕಾರ್ ಕೊಳ್ಳಲು ಬಹು ಬೇಗ ಸಾಲ ಸಿಗುತ್ತದೆ.

Image Source: Axis Bank

advertisement

700 ಕ್ಕಿಂತ ಕಡಿಮೆ CIBIL Score ಇದ್ದರೆ ಸಾಲ ದೊರೆಯುವುದಿಲ್ಲವೆ?

ಒಂದು ವೇಳೆ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಸಾಲ ಸಿಗುವುದೇ ಇಲ್ಲ ಎಂದಲ್ಲ. ಸಾಲ ನೀಡುವುದು ರಿಸ್ಕ್ ಎಂದು ಬ್ಯಾಂಕುಗಳು ಭಾವಿಸುತ್ತವೆ. ಈ ರಿಸ್ಕ್ ಫ್ಯಾಕ್ಟರ್ ಕಡಿಮೆ ಮಾಡಲು ಹೆಚ್ಚು ಬಡ್ಡಿ ನಿಗದಿ ಮಾಡುತ್ತವೆ. ಉದಾಹರಣೆಗೆ, ಶೇ. 14ರಷ್ಟು ಬಡ್ಡಿ ಇರುವ ಸಾಲಕ್ಕೆ ಶೇ. 18 ಅಥವಾ ಇನ್ನೂ ಹೆಚ್ಚಿನ ಬಡ್ಡಿ ವಿಧಿಸಬಹುದಾಗಿದೆ.

Image Source: Jupiter Community

ಹೆಚ್ಚು ಹಣ ಇಟ್ಟರೆ ಸಿಬಿಲ್​ ಸ್ಕೋರ್​ ಹೆಚ್ಚು ಇರುವುದೇ?

ಕಾರ್ ಸಾಲ ನೀಡಲು ಸಿಬಿಲ್ ಸ್ಕೋರ್​ವೊಂದೇ ಮಾನದಂಡವಾಗಿರುವುದಿಲ್ಲ. ನಿಮ್ಮ ಹಿಂದಿನ ಮತ್ತು ಈಗಿನ ಹಣಕಾಸು ಸ್ಥಿತಿ ಹೇಗಿದೆ ಎಂಬುದನ್ನು ನೋಡಲಾಗುತ್ತದೆ. ಅಂದರೆ ನಿಮಗೆ ನಿರಂತರವಾಗಿ ಕನಿಷ್ಠ ಆದಾಯ ಬರುತ್ತಿದೆಯಾ ಎಂಬುದು ಮುಖ್ಯ. ಅದಕ್ಕೆ ಬಹುತೇಕ ಬ್ಯಾಂಕುಗಳು ನಿಮ್ಮ ಕ್ರೆಡಿಟ್ ಸ್ಕೋರ್ ಜೊತೆಗೆ ನಿಮ್ಮ ಸ್ಯಾಲರಿ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್​ (Bank Statement) ಗಳನ್ನು ಪರಿಶೀಲಿಸುತ್ತವೆ. ನಿಮ್ಮ ಆದಾಯ ಉತ್ತಮವಾಗಿದ್ದರೂ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕೆಂಬ ನಿಯಮ ಏನಿಲ್ಲ. ನೀವು ಹಿಂದೆ ಸರಿಯಾದ ಸಮಯಕ್ಕೆ ಕಂತುಗಳನ್ನು ಕಟ್ಟದೇ ಹೋಗಿದ್ದರೆ ಸಿಬಿಲ್ ಸ್ಕೋರ್ ಕಡಿಮೆ ಆಗಬಹುದು. ಅದಕ್ಕೆ ಸಿಬಿಲ್ ಸ್ಕೋರ್ ಎಂಬುದು ನಿಮ್ಮ ಹಣಕಾಸು ಜವಾಬ್ದಾರಿಗೆ ದ್ಯೋತಕವಾಗಿರುತ್ತದೆ. ಸಿಬಿಲ್ ಸ್ಕೋರ್ ಕಡಿಮೆ ಇದ್ದವರಿಗೆ ಸಾಲ ಕೊಡುವುದಿಲ್ಲ ಎಂದಲ್ಲ ಆದರೆ ಕೊಂಚ ಹೆಚ್ಚು ಬಡ್ಡಿ ದರದಲ್ಲಿ ನೀಡುತ್ತವೆ. ಹಾಗಾಗಿ ಕಾರ್ ಲೋನ್‌ಗೆ ಅರ್ಜಿ ಸಲ್ಲಿಸುವ ಮೊದಲು ಉತ್ತಮ ಕ್ರೆಡಿಟ್ ಬಳಕೆಯ ಅನುಪಾತವನ್ನು ಇಟ್ಟುಕೊಳ್ಳುವುದು ಒಳ್ಳೆಯದು.

advertisement

Leave A Reply

Your email address will not be published.