Karnataka Times
Trending Stories, Viral News, Gossips & Everything in Kannada

KSRTC: ಬೆಳ್ಳಂಬೆಳಿಗ್ಗೆ ರಾಜ್ಯವೇ ಖುಷಿಪಡುವ ಸಂತೋಷದ ವಿಚಾರ ಹಂಚಿಕೊಂಡ KSRTC

advertisement

KSRTC ಬಸ್  ಈಗ ಜನರ ಮೆಚ್ಚಿನ ಸಾರಿಗೆ ವಾಹನವಾಗಿ ಮಾರ್ಪಾಡಾಗುತ್ತಿದೆ. ಶಕ್ತಿ ಯೋಜನೆ ಜಾರಿಗೆ ಬಂದ ಮೇಲಂತೂ KSRTC ಮೌಲ್ಯ ಈ ಹಿಂದಿಗಿಂತಲೂ ಬಹಳ ಶ್ರೇಷ್ಠ ಸ್ಥಾನಕ್ಕೆ ಬಂದಿದೆ. ಜನರ ಓಡಾಟ ಪ್ರಮಾಣ ಅಧಿಕವಾಗುತ್ತಿದ್ದಂತೆ ಬಸ್ ಗೆ ಅಧಿಕ ಬೇಡಿಕೆ ಕೂಡ ಬರುತ್ತಿದೆ. ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರು ಸಾರಿಗೆ ಬಸ್ ಕುರಿತಾಗಿ ಮೆಚ್ಚುಗೆ ವ್ಯಕ್ತ ಪಡಿಸಿ ಹೆಚ್ಚುವರಿ ಬಸ್ ಬಿಡುಗಡೆ ಮಾಡುವ ಪ್ರಸ್ತಾಪನೆಯನ್ನು ಕೂಡ ಜನರ ಮುಂದಿಟ್ಟಿದ್ದರು.

ದೂರದೂರು ಪ್ರಯಾಣ ಮಾಡುವವರು, ಕೆಲಸ, ಶೈಕ್ಷಣಿಕ ಕಾರಣಕ್ಕಾಗಿ ಪ್ರಯಾಣ ಮಾಡುವವರ ಪ್ರಮಾಣ ಕೂಡ ಅಧಿಕವಾಗುತ್ತಿದೆ. ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಓಡಾಟ ಅಧಿಕವಾಗುತ್ತಿದ್ದು ಬಸ್ ಅಂತೂ ಸದಾ ರಶ್ ಆಗೆ ಇರುತ್ತಿದೆ. ಜನರಿಗೆ ಇಷ್ಟೆಲ್ಲ ನೆರವಾಗುವ ಕೆಎಸ್ ಆರ್ಟಿಸಿ ಬಸ್ ಗೆ ಈಗ ಮತ್ತೊಂದು ಗರಿಮೆ ತನ್ನ ಮುಡಿಗೇರಿಸಿಕೊಳ್ಳುತ್ತಿದೆ. KSRTC ಬಸ್ ಗೆ 5 ರಾಷ್ಟ್ರೀಯ ಹಾಗೂ ಒಂದು ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದ್ದು ಕರ್ನಾಟಕದ ಪಾಲಿಗೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ.

Image Source: Times Now

KSRTC ಬಸ್ ಗೆ ಯಾವೆಲ್ಲ ಪ್ರಶಸ್ತಿ:

advertisement

  • ಬಸ್ ಬ್ರ್ಯಾಂಡ್ ನಿರ್ವಹಣೆಗೆ ದಕ್ಷಿಣ ಆಫ್ರಿಕಾ ನಾಯಕತ್ವ ಪ್ರಶಸ್ತಿ.
  • ಮಾನವ ಸಂಪನ್ಮೂಲ ಉಪಕ್ರಮಕ್ಕೆ ಪಂಜಾಬ್ ನಾಯಕತ್ವ ಪ್ರಶಸ್ತಿ
  • ಅತ್ಯುತ್ತಮ ಗ್ರಾಹಕ ಸ್ನೇಹಾ ಉಪಕ್ರಮಕ್ಕೆ ಗ್ರಾಹಕ ಸೇವಾ ಸ್ಟಾರ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ.
  • ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸತತ ವಿನೂತನ ಉಪಕ್ರಮಗಳಿಗಾಗಿ ರಾಷ್ಟ್ರೀಯ ಅತ್ಯುತ್ತಮ ಉದ್ಯೋಗ ಬ್ರ್ಯಾಂಡ್ ಪ್ರಶಸ್ತಿ.
  • ಮಾನವ ಸಂಪನ್ಮೂಲ ಉಪಕ್ರಮ ಸಾಧನೆಗಾಗಿ ಗೌವರ್ನೆನ್ಸ್ ನೌ ಹತ್ತನೇ ಸಾರ್ವಜನಿಕ ಉದ್ದಿಮೆ ಪ್ರಶಸ್ತಿ.
  • ಅತ್ಯುತ್ತಮ ವಿನೂತನ ವಾಹನ ನಿರ್ವಹಣೆಗೆ ಈಶಾನ್ಯ ಭಾರತ ನಾಯಕತ್ವ ಪ್ರಶಸ್ತಿ ಲಭಿಸಿದೆ.

ಅಧಿಕಾರಿಗಳು ಹೇಳಿದ್ದೇನು?

ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿ. ಅನ್ಬುಕುಮಾರ್ ಅವರು ಪ್ರಶಸ್ತಿ ಲಭಿಸಿದ್ದ ಬಗ್ಗೆ ಮಾತಾಡಿದ್ದಾರೆ. ಇದು ಇಡಿ ಕರ್ನಾಟಕಕ್ಕೆ ಲಭಿಸಿದ್ದ ಗೌರವವಾಗಿದೆ. KSRTC ಇನ್ನಷ್ಟು ಅಭಿವೃದ್ಧಿ ಪಡಿಸಲು ಉತ್ತೇಜನ ಸಿಕ್ಕಂತಾಗಿದೆ ಎಂದು ಅವರು ಈ ಬಗ್ಗೆ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕೂಡ ಈ ಪ್ರಶಸ್ತಿ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದು ಶ್ರಮಕ್ಕೆ ತಕ್ಕ ಪ್ರತಿಫಲ ಎಂದು ಮೆಚ್ಚುಗೆ ನೀಡಿದ್ದಾರೆ.

Image Source: Vartha Bharati

ಇತ್ತೀಚಿನ ದಿನದಲ್ಲಿ KSRTC ಬಸ್ ನಲ್ಲಿ ಡಿಜಿಟಲ್ ಪೇ ಸಿಸ್ಟಂ ಜಾರಿಗೆ ತಂದಿದ್ದು ಬಸ್ ವಿನೂತನ ಕ್ರಮದ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು 2024ರ ಮಾರ್ಚ್ 15ರಂದು ಹೊಸದಿಲ್ಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದಲ್ಲಿ ನಡೆಯಲಿದೆ. KSRTC ಬಸ್ ಗೆ ಐದು ಪ್ರಶಸ್ತಿಗಳು ಲಭಿಸಿದ್ದು ರಾಜ್ಯಕ್ಕೆ ಖುಷಿ ತರಿಸಿದೆ.

advertisement

Leave A Reply

Your email address will not be published.