Karnataka Times
Trending Stories, Viral News, Gossips & Everything in Kannada

KSRTC: ಬೆಳ್ಳಂಬೆಳಗ್ಗೆ KSRTC ಯಿಂದ ಮಹತ್ವದ ಬದಲಾವಣೆ! ನಿಯಮ ಚೇಂಜ್

advertisement

ಸರಕಾರಿ ಬಸ್ ಎಂದರೆ ಅದರ ನಿರ್ವಹಣೆ ಕೂಡ ಸರಕಾರದ ಪಾಲು ದೊಡ್ಡ ಮಟ್ಟಿಗೆ ಇರುತ್ತದೆ ಎಂದು ಹೇಳಬಹುದು. KSRTC ಬಸ್ ಗಳಿಗೆ ರಾಜ್ಯದಲ್ಲಿ ಈ ಹಿಂದಿಗಿಂತಲೂ ಅಧಿಕ ಮಾನ್ಯತೆ ದೊರೆಯುತ್ತಿದೆ‌‌. ಶಕ್ತಿ ಯೋಜನೆ ಜಾರಿಯಾದ ಬಳಿಕ KSRTC ಬಸ್ ಗೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ಸರಕಾರಿ ಕೆಲಸಗಾರರು ಕಡಿಮೆ ಆಗುತ್ತಿದ್ದಾರೆ ಎನ್ನಬಹುದು. ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು ಹೆಚ್ಚುವರಿ ಬಸ್ ಹಾಗೂ ಸಿಬ್ಬಂದಿ ಬೇಡಿಕೆ ಕೂಡ ಈಗ ಮುನ್ನಲೆಯಲ್ಲಿದೆ.

ಸರಕಾರಿ ಬಸ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಈಗ ಬಿಡುವಿರದ ಕೆಲಸ ಸಿಗುತ್ತಲಿದೆ. ಎಲ್ಲ ದಿನ KSRTC ಬಸ್ ಓಡಾಡಲೇ ಬೇಕಿದ್ದು ಇಲ್ಲಿನ ಸಿಬಂದಿಗೆ ನೆಟ್ಟಗೆ ರಜೆ ಸಹ ಸಿಗುತ್ತಿಲ್ಲ ಎಂಬ ಮಾಹಿತಿ ಇತ್ತೀಚೆಗಷ್ಟೇ ವೈರಲ್ ಆಗುತ್ತಿದೆ. ಒಂದು ವೇಳೆ ರಜೆ ಇದ್ದರೂ ತಮ್ಮ ಮೇಲಾಧಿಕಾರಿಗಳು KSRTC ಬಸ್ ಸಿಬ್ಬಂದಿಗೆ ರಜೆ ನೀಡಲು ಅನುಮತಿ ನೀಡುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆ KSRTC ಬಸ್ ಸಿಬ್ಬಂದಿಯ ರಜೆಯ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ ಹೊಸ ಆದೇಶ ಹೊರಡಿಸುತ್ತಿದೆ.

KSRTC Strike Karnataka
Image Source: Deccan Herald

KSRTC ನ ಹಳೆ ವ್ಯವಸ್ಥೆ ಹೇಗಿತ್ತು?

KSRTC ಸಿಬ್ಬಂದಿಗೆ ರಜೆ ನೀಡುವ ಅಧಿಕಾರವನ್ನು KSRTC ಘಟಕ ಮತ್ತು ವಿಭಾಗದ ಮುಖ್ಯಸ್ಥರಿಗೆ ನೀಡಲಾಗಿತ್ತು ಆದರೆ ಇನ್ನು ಮುಂದೆ ಈ ಅಧಿಕಾರ ಬದಲಾಗಲಿದೆ. ಇದು ಮ್ಯಾನುವಲ್ ಸಿಸ್ಟಂ ಆದ ಕಾರಣ ವಿಭಾಗದ ಮುಖ್ಯಸ್ಥರು ರಜೆ ನೀಡಲು ಕಿರುಕುಳ ನೀಡುತ್ತಿದ್ದಾರೆ ಎಂಬ ದೂರನ್ನು ಆಧರಿಸಿ ಈ ವ್ಯವಸ್ಥೆ ಬದಲಾಯಿಸಲು ತೀರ್ಮಾನಿಸಲಾಗಿದೆ. ನೌಕರರು ರಜೆ ವ್ಯವಸ್ಥೆ ಬದಲಾಯಿಸುವಂತೆ ಬೇಡಿಕೆ ಮುಂದಿಟ್ಟಿದ್ದು ತಂತ್ರಾಂಶ ಆಧಾರಿತ ಸೇವೆ ನೀಡಲು ಸರಕಾರ ತೀರ್ಮಾನ ಕೈಗೊಂಡಿದೆ.

advertisement

KSRTC Bus Karnataka
Image Source: Abhibus

ವ್ಯವಸ್ಥೆ ಬದಲಿಸಲು ತೀರ್ಮಾನ

ಹಳೆ ಮ್ಯಾನುವಲ್ ವ್ಯವಸ್ಥೆಗೆ ಬದಲಾಗಿ ತಂತ್ರಾಂಶ ಆಧಾರಿತ ಸೇವೆ ಅಂದರೆ HRMS ಸಿಸ್ಟಂ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಹಾಗಾಗಿ ಇನ್ನು ಮುಂದೆ ಹಾಜರಾತಿ ಮತ್ತು ರಜೆ ತೆಗೆದುಕೊಳ್ಳುವ ವ್ಯವಸ್ಥೆ HRMS ಮೂಲಕವೇ ನಿರ್ವಹಿಸಲಾಗುತ್ತದೆ. ಮೊದಲ ಹಂತದಲ್ಲಿ ಶಿವಮೊಗ್ಗ ವಿಭಾಗದಲ್ಲಿ ಜಾರಿಗೆ ಬಂದ ಬಳಿಕ ಉಳಿದ 11 ವಿಭಾಗಕ್ಕೂ ಇದೇ ವ್ಯವಸ್ಥೆ ಜಾರಿಗೆ ಬರಲಿದೆ.

HRMS Systum In KSRTC
Image Source: IndiaMart

ಸರಳ ವ್ಯವಸ್ಥೆ

HRMS ತಂತ್ರಾಂಶ ಆಧಾರಿತ ಸೇವೆಯೂ ಬಹಳ ಸರಳವಾಗಿ ಇರಲಿದೆ. ಸಿಬಂದಿಗಳು ತಮ್ಮ ರಜಾ ಅವಧಿಯನ್ನು ಮೊದಲೆ ದಾಖಲಿಸಿ ಕಂಪ್ಯೂಟರ್ ಅಥವಾ ಮೊಬೈಲದ ಮೂಲಕ ಹೇಳಬೇಕು ಬಳಿಕ ರಜಾ ಹಂಚಿಕೆಯನ್ನು ಮಾಡಲಾಗುವುದು. ಮಾರ್ಚ್ 1ರಿಂದ ಈ ನಿಯಮ ಬಂದಿದ್ದು ಎಲ್ಲೆಡೆ ವಿಸ್ತರಣೆ ಆಗಲಿದೆ.

advertisement

Leave A Reply

Your email address will not be published.