Karnataka Times
Trending Stories, Viral News, Gossips & Everything in Kannada

Toll: ಇನ್ಮೇಲೆ ದೇಶದಲ್ಲಿ ಯಾವ ಟೋಲ್ ಗೆಟ್ ಕೂಡ ಇರಲ್ಲ ! ಹೊಸ ಟ್ವಿಸ್ಟ್ ಇಲ್ಲಿದೆ ಗುಡ್ ನ್ಯೂಸ್

advertisement

ರಸ್ತೆ ಮೇಲೆ ಸಂಚಾರ ಮಾಡುವಾಗ ಕೆಲ ಅಗತ್ಯ ನಿಯಮ ಎಲ್ಲರೂ ಪಾಲಿಸಲೇ ಬೇಕೆಂದು ಇರಲಿದೆ. ಅದೇ ರೀತಿ ಟೋಲ್ (Toll)ಸಂಗ್ರಹ ವ್ಯವಸ್ಥೆಯನ್ನು ಕೂಡ ನಾವು ಕಾಣಬಹುದು. ಟೋಲ್ ಸಂಗ್ರಹವನ್ನು ಮಾಡುವ ವಿಧಾನಕ್ಕೆ ಹೊಸ ವಿಧಾನ ಜಾರಿಗೆ ತರುವತ್ತ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಟೋಲ್ ಪಾವತಿಯ ಸಂಗ್ರಹ ಆಗುವ ವಿಧಾನವನ್ನು ಬದಲಾಯಿಸಲಾಗಿದ್ದು ಈ ವಿಧಾನ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ.

ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಸರಕಾರದ ಈ ಒಂದು ವಿನೂತನ ಕಾರ್ಯಕ್ರಮ ಜಾರಿಗೆ ತಂದಿರುವುದು ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಲಿದೆ. ಟೋಲ್ ಅನ್ನು ಸಂಗ್ರಹಿಸಲು ಸಾಧ್ಯವಾಗದೇ ಪ್ರಯಾಣಿಕರು ಪ್ರಯಾಣಿಸಿದ ಕಿ.ಲೋ ಮೀಟರ್ ಗೆ ಮಾತ್ರವೇ ಟೋಲ್ ಭರಿಸಿದರೆ ಸಾಕಾಗುವುದು. ಇದಕ್ಕಾಗಿ ಉಪಗ್ರಹ ವ್ಯವಸ್ಥೆ ಜಾರಿಯಾಗುವ ಕಾರಣ ಯಾರೂ ಕೂಡ ಟೋಲ್ ನೀಡುವಿಕೆಯಿಂದ ದೂರ ಉಳಿಯಲಾರರು.

ಸಚಿವರಿಂದ ಸ್ಪಷ್ಟನೆ

ಕೇಂದ್ರ ಸಚಿವರಾದ ನಿತೀನ್ ಗಡ್ಕರಿ (Nitin Gadkari) ಅವರಿಗೆ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಈ ಬಗ್ಗೆ ಮಾಧ್ಯಮದವರ ಮುಂದೆ ಮಾತನಾಡಿದ್ದ ಅವರು ಟೋಲ್ ಸಂಗ್ರಹದಲ್ಲಿ ಹಳೆ ವ್ಯವಸ್ಥೆಯನ್ನು ರದ್ದು ಮಾಡಲಾಗುವುದು. ಹೊಸದಾಗಿ ಉಪಗ್ರಹ ಆಧಾರಿತ ವ್ಯವಸ್ಥೆ ಜಾರಿಯಾಗಲಿದ್ದು ನೀವು ಪ್ರಯಾಣ ಮಾಡಿದ್ದಕ್ಕೆ ಮಾತ್ರ ಪಾವತಿ ಮಾಡಿದರೆ ಸಾಕು. ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತ ಮಾಡಲಾಗುವುದು. ಇದು ಸಮಯ ಮತ್ತು ಹಣ ಎರಡನ್ನು ಉಳಿಸುವ ಜೊತೆಗೆ ನಿಮ್ಮ ಪ್ರಯಾಣ ಸುಖಕರವಾಗಲು ನೆರವಾಗಲಿದೆ ಎಂದರು.

advertisement

Image Source: Informalnewz

ಹೆದ್ದಾರಿಯ ಅಭಿವೃದ್ಧಿಗೆ ಒತ್ತು

ಈಗಾಗಲೇ ಕೇಂದ್ರ ಸರಕಾರವು ಅನೇಕ ರಸ್ತೆ ಅಭಿವೃದ್ಧಿ ಕಾರ್ಯ ಚಟುವಟಿಕೆ ಮಾಡಿದೆ. ಮೊದಲು ಮುಂಬೈ ನಿಂದ ಪುಣೆ ಬರಲು 8-9ಗಂಟೆ ಪ್ರಯಾಣ ಮಾಡಬೇಕಿತ್ತು ಆದರೆ ಈಗ 2ಗಂಟೆ ಸಾಕು ಮುಂದಿನ ದಿನದಲ್ಲಿ ಭಾರತ್ ಮಾಲಾ ಯೋಜನೆ ಅಡಿಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿಗಳನ್ನು ಅಮೇರಿಕಾದ ಮಾದರಿಯಂತೆ ಸಿದ್ಧಗೊಳಿಸುವತ್ತ ಚಿಂತಿಸಲಾಗಿದೆ. ಟೋಲ್ (Toll) ಸಂಗ್ರಹದಲ್ಲಿಯೂ ವಿನೂತನ ಸ್ಯಾಟಲೈಟ್ ವ್ಯವಸ್ಥೆ ಬರುವುದು ಜನರಿಗೆ ಬಹಳ ಅನುಕೂಲ ಆಗಲಿದೆ ಎಂದರು.

ಯಾವ ರೀತಿ ಇರಲಿದೆ

ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಬಹಳ ಅನುಕೂಲಕರವಾಗಿ ಇರಲಿದೆ. ಇದು ನಿಮ್ಮ ವಾಹನ ಸಾಗುವ ಮಾರ್ಗ ಸುಲಭಕ್ಕೆ ರಸ್ತೆ ಪ್ರಾಧಿಕಾರಕ್ಕೆ ಮಾಹಿತಿ ನೀಡಲಿದೆ.ಬಳಿಕ ನೀವು ಟೋಲ್ ಅನ್ನು ಪ್ಲಾಜಾದಲ್ಲಿ ಕಟ್ಟುವ ಅಗತ್ಯ ಬೀಳದೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗಲಿದೆ ಹಾಗಾಗಿ ಸಾಕಷ್ಟು ಜನರಿಗೆ ಈ ಕ್ರಮ ಅನುಕೂಲ ಆಗಲಿದೆ.

advertisement

Leave A Reply

Your email address will not be published.