Karnataka Times
Trending Stories, Viral News, Gossips & Everything in Kannada

SBI: ಸದ್ದಿಲ್ಲದೇ ಹೊಸ ನಿರ್ಧಾರ ಮಾಡಿದ ಸ್ಟೇಟ್ ಬ್ಯಾಂಕ್! ಖಾತೆ ಇದ್ದವರಿಗೆ ಬ್ಯಾಡ್ ನ್ಯೂಸ್

advertisement

SBI ಬ್ಯಾಂಕ್ ನ ಗ್ರಾಹಕರು ಈ ಬಾರಿ ಆರ್ಥಿಕ ವರ್ಷದ ಕೊನೆಯಲ್ಲಿ ಶಾಕಿಂಗ್ ನ್ಯೂಸ್ ಅನ್ನು ಎದುರಿಸಬೇಕಾಗಿದೆ. ಬ್ಯಾಂಕ್ ನ ಕೆಲವು ವ್ಯವಸ್ಥೆ ಮೇಲೆ ಅಧಿಕ ಶುಲ್ಕ ವಿಧಿಸಲು SBI ಬ್ಯಾಂಕ್ ಮುಂದಾಗಿದ್ದು ಹೀಗಾಗಿ ಈ ಹೆಚ್ಚುವರಿ ಶುಲ್ಕ ಅಧಿಕ ಹೊರೆ ಆಗಲಿದೆ. ಯಾವುದಕ್ಮೆ ಅಧಿಕ ಶುಲ್ಕ ಅನ್ವಯ ಆಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವಾಗ ಜಾರಿಗೆ ಬರಲಿದೆ?

ಡೆಬಿಟ್ ಕಾರ್ಡ್ ಮೇಲೆ ಸಿಲ್ವರ್, ಕ್ಲಾಸಿಕ್ ಹಾಗೂ ಗ್ಲೊಬಲ್ ಮತ್ತು ಕಾಂಟ್ಯಾಕ್ಟ್ ಲೆಸ್ ಇತರ ವರ್ಗಗಳ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕ ಪರಿಷ್ಕೃತವಾಗಲಿದೆ. ಗೋಲ್ಡ್, ಯುವ, ಕಾಂಬೊ ಹಾಗೂ ಪ್ಲಾಟಿನಂ ಡೆಬಿಟ್ ಕಾರ್ಡ್ ನಲ್ಲಿ ಮಹತ್ವದ ಬದಲಾವಣೆ ಜಾರಿಗೆ ತರಲಾಗುತ್ತಿದೆ. ಡೆಬಿಟ್ ಕಾರ್ಡ್ (Debit Card) ನಲ್ಲಿ ಪರಿಷ್ಕೃತ ಶುಲ್ಕ ಮತ್ತು ವಾರ್ಷಿಕ ನಿರ್ವಹಣಾ ಶುಲ್ಕ ಜಾರಿಗೆ ಬರಲಿದೆ. ಎಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ.

Image Source: Mint

SBI ಡೆಬಿಟ್ ಕಾರ್ಡ್ ಶುಲ್ಕ ಅಧಿಕ:

advertisement

ಡೆಬಿಟ್ ಕಾರ್ಡ್ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು 75 ರೂಪಾಯಿ ಯಷ್ಟು ಹೆಚ್ಚಿಸಲು SBI ತೀರ್ಮಾನಿಸಿದೆ. ಗೋಲ್ಡ್,ಯುವ, ಕಾಂಬೊ ಡೆಬಿಟ್ ಕಾರ್ಡ್ ನ ಬೆಲೆ 300 ರೂಪಾಯಿಗೂ ಅಧಿಕ ಶುಲ್ಕ ಆಗಲಿದೆ. ಪ್ಲಾಟಿನಂ ಕ್ರೆಡಿಟ್ ಕಾರ್ಡ್ ಮೇಲೆ GST ಆಧಾರಿತ ಅವಲಂಬಿತ ಶುಲ್ಕ ವಿಧಿಸಲಾಗುವುದನ್ನು ನಾವಿಲ್ಲಿ ಕಾಣಬಹುದು.

ರಿವಾರ್ಡ್ ನಲ್ಲಿ ಬದಲಾವಣೆ:

SBI ಕ್ರೆಡಿಟ್ ಕಾರ್ಡ್ ನ ರಿವಾರ್ಡ್ ಸಿಸ್ಟಂ ನಲ್ಲಿಯೂ ಮಹತ್ವದ ಬದಲಾವಣೆ ಜಾರಿಗೆ ತರಲಾಗಿದೆ. ಅದರ ಜೊತೆಗೆ ಪಾವತಿ ಮೇಲಿನ ರಿವಾರ್ಡ್ ಪಾಯ್ಟ್ ಮೇಲೆ ಕೂಡ ಕೆಲವು ಅಗತ್ಯ ಬದಲಾವಣೆ ಜಾರಿಗೆ ತರಲಾಗಿದೆ. ಬಾಡಿಗೆ ಪಾವತಿ ಮೇಲೆ ರಿವಾರ್ಡ್ ಸಿಗುತ್ತಿದ್ದ ರಿವಾರ್ಡ್ ಇನ್ನು ಮೇಲೆ ಸಿಗಲಾರದು ಎನ್ನಬಹುದು.

Image Source: Business Today

ಇತರ ಹೆಚ್ಚುವರಿ ಶುಲ್ಕ

  • ತಮ್ಮ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿದರೆ 25ರೂಪಾಯಿ ಸೇವಾ ಶುಲ್ಕ ಹಾಗೂ GST ಕಟ್ಟಬೇಕು.
  • ATM ಮೂಲಕ ಅಂತಾರಾಷ್ಟ್ರೀಯ ವ್ಯವಹಾರ ಮಾಡಿದರೆ 3.5% ತೆರಿಗೆ ಹಾಗೂ GST ಸಹ ಕಟ್ಟಬೇಕು.
  • SBI ಬ್ಯಾಂಕಿನ ಎಲ್ಲ ವಹಿವಾಟಿನ ಮೇಲೆ 18% GST ಇರಲಿದೆ.
  • ಡೆಬಿಟ್ ಕಾರ್ಡ್ ಮೇಲೆ 75 ರೂಪಾಯಿ ಹೆಚ್ಚುವರಿ ಶುಲ್ಕವಾದ ಕಾರಣ 300 ರೂಪಾಯಿ ವರೆಗೆ ಕಡಿತವಾಗಲಿದೆ.
  • POSನಲ್ಲಿ ಇ ಕಾಮರ್ಸ್ ವ್ಯವಸ್ಥೆ ನಡೆಸಿದರೆ 3% ತೆರಿಗೆ ಕಟ್ಟಬೇಕು.
  • ಪಿನ್ ನವೀಕರಣ ಮಾಡಿದರೆ 50 ರೂಪಾಯಿ ಹಾಗೂ GST ವಿಧಿಸಲಾಗುವುದು.

advertisement

Leave A Reply

Your email address will not be published.