Karnataka Times
Trending Stories, Viral News, Gossips & Everything in Kannada

Lakshmi Hebbalkar: ಈ ಕೆಲಸ ಮಾಡಿದವರಿಗೆ ಕೂಡಲೇ ಎಲ್ಲಾ ಕಂತಿನ ಗೃಹಲಕ್ಷ್ಮಿ ಹಣ ಹಾಕಿ ಎಂದ ಲಕ್ಷ್ಮಿ ಹೆಬ್ಬಾಳ್ಕರ್!

advertisement

ಸ್ನೇಹಿತರೆ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವ ಮುನ್ನ 5 ಗ್ಯಾರಂಟಿಗಳನ್ನು ಜಾರಿಗೆ ತರುವಂತಹ ಭರವಸೆ ನೀಡಿತ್ತು, ನುಡಿದಂತೆ ನಡೆದುಕೊಂಡಿರುವ ಸಿಎಂ ಸಿದ್ದರಾಮಯ್ಯನವರು (CM Siddaramaiah) ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಹೀಗೆ ಹಲವು ತಿಂಗಳಿಂದ ಎಲ್ಲಾ ಗ್ಯಾರೆಂಟಿಗಳು ಕಾರ್ಯರೂಪಕ್ಕೆ ಬಂದರೂ ಕೂಡ, ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಅಥವಾ ದಾಖಲಾತಿಯಲ್ಲಿನ ತಪ್ಪುಗಳಿಂದಾಗಿ 5 ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಫಲವನ್ನು ಕೆಲ ಮನೆಯ ಯಜಮಾನಿರು ಪಡೆದುಕೊಳ್ಳಲಾಗುತ್ತಿಲ್ಲ.

ಅಂಥವರ ಸಮಸ್ಯೆಯನ್ನು ಮನಗಂಡ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ವಿಶೇಷ ಮಾರ್ಗಸೂಚಿಯೊಂದನ್ನು ಪ್ರಕಟಿಸಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಆ ಮಾರ್ಗಸೂಚಿಗಳೇನೇನು ಎಂಬುದನ್ನು ತಿಳಿದುಕೊಳ್ಳಲು ಈ ಪುಟವನ್ನು ಸಂಪೂರ್ಣವಾಗಿ ಓದಿ, ಅರ್ಜಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿದರೆ ಎಲ್ಲಾ ತಂತಿನ ಬಾಕಿ ಇರುವ ಗೃಹಲಕ್ಷ್ಮಿ ಹಣವು ನಿಮ್ಮ ಖಾತೆಗೆ ಜಮೆಯಾಗಲಿದೆ.

ಈ ಕೆಲಸ ಮಾಡಿದ್ರೆ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ತಟ್ಟೆಂದು ಬಂದು ಬಿಡುತ್ತೆ:

 

Image Source: Deccan Herald

 

advertisement

  • ಯೋಜನೆ ಜಾರಿಗೊಳಿಸಿ ಹಲವು ತಿಂಗಳುಗಳೇ ಕಳೆದರು ನಿಮ್ಮ ಖಾತೆಗೆ ಇಂದಿಗೂ ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Money) ಜಮಾ ಆಗುತ್ತಿಲ್ಲವೆಂದರೆ, ನೀವು ನಿಮ್ಮ ಆಧಾರ್ ಸೀಡಿಂಗ್ (Aadhaar Seeding) ಮಾಡಿಕೊಂಡಿಲ್ಲ ಎಂದರ್ಥ. ಹೀಗಾಗಿ ಫಲಾನುಭವಿಗಳು ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿಕೊಂಡು ಮತ್ತೆ ಯೋಜನೆಗೆ ನೋಂದಾಯಿಸಿ.
  • ನೀವು ಪ್ರಸ್ತುತ ಬಳಸುತ್ತಿರುವಂತಹ ಬ್ಯಾಂಕ್ ಖಾತೆ (Bank Account)ಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸಿಕೊಂಡು, ಆಧಾರ್ ಜೊತೆಗೆ ಬ್ಯಾಂಕ್ ವಿವರವನ್ನು ಲಿಂಕ್ ಮಾಡಿದ ಬಳಿಕ ಈಗಾಗಲೇ ನೊಂದಾಯಿಸಿರುವಂತಹ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯನ್ನು ಒಮ್ಮೆ ಅಪ್ಡೇಟ್ ಮಾಡಿ.

 

Image Source: IndiaToday

 

  • ಅರ್ಜಿದಾರರು ಬ್ಯಾಂಕ್ನಲ್ಲಿ ಇ-ಕೆ ವೈ ಸಿ ಸಂಬಂಧಿತ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಿ.
  • ಗೃಹಲಕ್ಷ್ಮಿ ಯೋಜನೆಯಲ್ಲಿ ದಾಖಲು ಮಾಡಿರುವಂತಹ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸೀಡಿಂಗ್ ಮಾಡಿಸಿ ಮತ್ತೊಮ್ಮೆ ಕೆ ವೈ ಸಿ (KYC) ಮಾಡಿಸಿಕೊಂಡು, ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಅಪ್ಡೇಟ್ ಮಾಡಿದರೆ ಹಣ ಜಮೆ ಆಗಲಿದೆ.
  • ಇನ್ನು ಅನೇಕರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾಗಿದ್ದರು SMS ಸಂದೇಶ ಬರುವುದಿಲ್ಲ, ಅಂತವರು ಪಾಸ್ ಬುಕ್ ಎಂಟ್ರಿ (Passbook Entry) ಮಾಡಿಸಿ, ಹಣ ಬಂದಿದೆಯೇ ಎಂಬುದನ್ನು ಪರಿಶೀಲಿಸಿ.

‘ಇನ್ನು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಕೂಡ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಜೋಡಿಸಿದ್ದು, ನೀವೇನಾದರೂ ಸರ್ಕಾರ ನೀಡುತ್ತಿರುವಂತಹ ಈ ಯೋಜನೆಗಳಿಂದ ವಂಚಿತರಾಗುತ್ತಿದ್ದರೆ ನಿಮ್ಮ ಸಮಸ್ಯೆಯನ್ನು ಅವರ ಬಳಿ ಹೇಳಿ ಸರಿಪಡಿಸಿಕೊಳ್ಳಬಹುದು’ ಎಂಬ ಆದೇಶವನ್ನು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.

advertisement

Leave A Reply

Your email address will not be published.