Karnataka Times
Trending Stories, Viral News, Gossips & Everything in Kannada

Gruha Lakshmi Yojana: ಇನ್ಮೇಲೆ ಗೃಹಲಕ್ಹ್ಮೀ ಯೋಜನೆಯ ಮಹಿಳೆಯರಿಗೆ 3000 ರೂ ಹಣ! ಹೊಸ ಸಿಹಿಸುದ್ದಿ

advertisement

ಇನ್ನು ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದಾಗಿನಿಂದ ಹಲವಾರು ರೀತಿಯಾದಂತಹ ಯೋಜನೆಗಳನ್ನು ಜಾರಿ ಮಾಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಘೋಷಣೆ ಮಾಡಿದ ಐದು ಗ್ಯಾರಂಟಿಗಳನ್ನು ಕೂಡ ಅನುಷ್ಠಾನಕ್ಕೆ ತೆಗೆದುಕೊಂಡು ಬಂದಿತ್ತು, ಇನ್ನು ಇದರ ಮೂಲಕ ನುಡಿದಂತೆ ನಡೆವ ಸರ್ಕಾರ ಎಂಬುದನ್ನು ನಿರೂಪಿಸುವ ಮೂಲಕ ಜನತೆಯಲ್ಲಿ ಭರವಸೆ ಮೂಡಿಸಿದ್ದಾರೆ. ಇನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯಾರು ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

ಇನ್ನು ಕಾಂಗ್ರೆಸ್ ಸರ್ಕಾರ ನೀಡಿದ ಯೋಜನೆ ಇಂದ ಹಲವಾರು ಬಡ ಕುಟುಂಬಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಮುಂದಾಗಿದ್ದಾರೆ. ಇನ್ನು ಸರ್ಕಾರ ನೀಡಿರುವ ಯೋಜನೆ ಅಡಿಯಲ್ಲಿ ಗೃಹಿಣಿಯರು ಆರ್ಥಿಕ ಸಬಲತೆಯನ್ನು ಪಡೆದಿದ್ದು ಬಹಳಷ್ಟು ಪಾಸಿಟಿವ್ ರೀತಿಯಾಗಿ ಫಲಿತಾಂಶ ಸಿಗುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಭರವಸೆಯನ್ನು ಹೊಂದಿದೆ.

ರಾಜ್ಯದ ಜನತೆಗೆ ಹೊಸ ಸಿಹಿ ಸುದ್ದಿ ಗೃಹ ಜ್ಯೋತಿ 300 ಯೂನಿಟ್ ಮತ್ತು ಗೃಹ ಲಕ್ಷ್ಮಿ 3000 ಕ್ಕೆ ಹೆಚ್ಚಳದ ಕುರಿತು ತಿಳಿದುಕೊಳ್ಳೊಣ:

 

Image Source: Business Standard

 

advertisement

ಗೃಹ ಜ್ಯೋತಿ (Gruha Jyothi) 300 ಯೂನಿಟ್ ಮತ್ತು ಗೃಹ ಲಕ್ಷ್ಮಿ (Gruha Lakshmi) 3000 ಹೆಚ್ಚಳ ಆಗಲು ಕಾರಣ ಮತ್ತು ಅದರ ಜಾರಿ ಯಾವಾಗ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಇನ್ನು ಭಾರತದಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಕೂಡ ವಿವಿಧ ರೀತಿಯ ಭರವಸೆ ಮತ್ತು ಘೋಷಣೆ ಮಾಡುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ. ಇನ್ನು ಇದರ ಫಲವಾಗಿ ಹಲವು ರೀತಿಯಾದಂತಹ ಹೊಸ ಯೋಜನೆಯನ್ನು ಜಾರಿಗೆ ಮಾಡುವ ಯೋಜನೆಯನ್ನು ಪ್ರತಿ ಪಕ್ಷಗಳು ಮಾಡಿದೆ.

ಇನ್ನು ಇತ್ತೀಚಿಗೆ ನಡೆದ ಕಾರ್ಯಾಕರ್ತರ ಸಭೆಯಲ್ಲಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಎಸ್.ಎಸ್.ಬೋಸರಾಜ್ (S.S. Boseraju) ಅವರು ಈಗಾಗಲೇ ಸರ್ಕಾರವು ಕಳೆದ ಎಂಟು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Yojana) 36 ಸಾವಿರ ಕೋಟಿ ಹಣವನ್ನು ಖರ್ಚು ಮಾಡುತ್ತ ಇದೆ. ಇನ್ನು ಈ ಯೋಜನೆಯ ಮೂಲಕ ಗೃಹಿಣಿಯರು ತಮ್ಮ ಮನೆಯ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಕಾರ್ಯವನ್ನು ಮಾಡುತ್ತಾ ಇದ್ದಾರೆ. ಇದರಿಂದ ಮಹಿಳೆಯರಿಗೆ ಆರ್ಥಿಕ ಸಬಲತೆಯನ್ನು ಒದಗಿಸುವ ಯೋಚನೆ ಒಳ್ಳೆಯ ರೀತಿಯಾದಂತಹ ಫಲಿತಾಂಶ ನೀಡಿದೆ ಎಂದು ತಿಳಿಸಿದರು.

 

Image Source: Vox

 

ಇನ್ನು ಇದು ಮಾತ್ರವಲ್ಲದೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣದ ಖರ್ಚು 56 ಸಾವಿರ ಕೋಟಿಯಷ್ಟು ಮಾಡಿ ಪ್ರತಿ ಗೃಹಿಣಿಯರಿಗೆ ನೀಡುತ್ತಿರುವ ಹಣದ ಮೊತ್ತವನ್ನು 3000 ನೀಡುವ ವ್ಯವಸ್ಥೆ ಮಾಡಿಕೊಡುತ್ತದೆ ಕಾಂಗ್ರೆಸ್ ಸರ್ಕಾರ ಎಂಬ ಭರವಸೆಯನ್ನು ನೀಡಿದ್ದಾರೆ. ಇನ್ನು ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ಕಡೆಯೂ ಈ ಸುದ್ದಿಯ ಮೂಲಕ ಬಹಳಷ್ಟು ಮಹಿಳಾ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಇನ್ನು ಚುನಾವಣಾ ಫಲಿತಾಂಶದ ನಂತರ ಈ ಯೋಜನೆಯ ಹೆಚ್ಚಳದ ಕುರಿತು ಕಾದು ನೋಡಬೇಕಾಗಿದೆ.

advertisement

Leave A Reply

Your email address will not be published.