Karnataka Times
Trending Stories, Viral News, Gossips & Everything in Kannada

Loan: ರೈತರು ಈ ಕೆಲಸ ಮಾಡಿದರೆ ಅವರ ಸಾಲದ ಮೇಲಿನ ಬಡ್ಡಿ ಮನ್ನಾ, ಸರ್ಕಾರದ ಆದೇಶ!

advertisement

ರೈತರು ಈ ದೇಶದ ಮುಖ್ಯ ಅಂಗ, ರೈತರ ಬದುಕು ಸಬಲವಾಗಿದ್ದರೆ ಮಾತ್ರ ದೇಶವು ಪ್ರಗತಿಯಲ್ಲಿದ್ದಂತೆ. ಇಂದು ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಮುಖ್ಯ ವಾಗಿ ಕಿಸಾನ್ ಯೋಜನೆ (PM Kisan Scheme), ಬೆಳೆ ವಿಮೆ ಪರಿಹಾರ, ಕಿಸಾನ್ ಸಮ್ಮಾನ್ (Kisan Samman) ಇತ್ಯಾದಿ. ಮೊನ್ನೆ ಯಷ್ಟೆ ರೈತರಿಗೆ ಬೆಳೆ ವಿಮೆ ಪರಿಹಾರದದ ಮೊತ್ತವನ್ನು ಸಹ ರೈತರ ಖಾತೆಗೆ ಜಮೆ ಮಾಡಿದೆ. ಇದೀಗ ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದಲ್ಲಿ ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಗುಡ್ ನ್ಯೂಸ್ ‌ನೀಡಿದ್ದಾರೆ.

ಈ ರೈತರ ಬಡ್ಡಿ ಮನ್ನಾ ಮಾಡಲಿದ್ದಾರೆ?

 

 

ರೈತರು ಕೃಷಿಯೇತರ ಚಟುವಟಿಕೆಗಳಿಗೆ ಸಹಕಾರ ಸಂಸ್ಥೆ ಮೂಲಕ ಸಾಲ ಪಡೆದಿದ್ದರೆ‌ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ (Loan) ಗಳ ಅಸಲು ಪಾವತಿ ಮಾಡಿದ್ದಲ್ಲಿ ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸ್ಪಷ್ಟನೆ ನೀಡಿದ್ದಾರೆ. ರೈತರು ಪಶುಸಂಗೋಪನೆ ಹೈನುಗಾರಿಕೆ ಮೀನುಗಾರಿಕೆ ರೇಷ್ಮೆ ಮೊದಲಾದ ಕೃಷಿ ಚಟುವಟಿಕೆಗಳಿಗೆ ತೆಗೆದುಕೊಂಡಿದ್ದರೆ ಮಾತ್ರ ಅಂತಹ ಸಾಲದ ಬಡ್ಡಿಯನ್ನು ಮಾತ್ರ ಮನ್ನ ಮಾಡಲಾಗುತ್ತದೆ.

ಅನುಮೋದನೆ ಸಿಕ್ಕಿದೆ:

ಈ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಡತ ಮಂಡಿಸಿ ಅನುಮೋದನೆಯನ್ನು ಸಹ ನೀಡಲಾಗಿದೆ.ಸರ್ಕಾರ ನಿಗದಿಪಡಿಸಿದ ಈ ನಿರ್ಧಾರಕ್ಕೆ ಅನುಮೋದನೆ ಕೂಡ ಸಿಕ್ಕಿದ್ದು ಸುಮಾರು 440 ಕೋಟಿ 20 ಲಕ್ಷ ಬಡ್ಡಿ ಮನ್ನಾ ಮಾಡಲಾಗುವುದು, ಸಹಕಾರಿ ಸಂಘಗಳಿಂದ ಪಡೆದಿದ್ದ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಸಚಿವ ಹೆಚ್.ಕೆ ಪಾಟೀಲ್ (HK Patil) ಮಾಹಿತಿ ಕೂಡ ನೀಡಿದ್ದಾರೆ.

advertisement

ಅಸಲು ಮರುಪಾವತಿ:

ಸಾಲದ ಮೇಲಿನ ಅಸಲು ಪಾವತಿ ಮಾಡಿದ್ರೆ ಅದರ ಮೇಲಿನ ಬಡ್ಡಿ ಮನ್ನಾ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ರೈತರು ಈ ಬಡ್ಡಿ ಮನ್ನಾ ಸೌಲಭ್ಯ ಪಡೆಯಬೇಕಾದ್ರೆ ಇದೇ ತಿಂಗಳ 29 ರೊಳಗೆ ಸಾಲದ ಅಸಲು ಮೊತ್ತವನ್ನು ಮರು ಪಾವತಿಮಾಡಬೇಕು. ಈ ಬಗ್ಗೆ ಜ.20 ರಂದು ಸರಕಾರ ಆದೇಶ ಹೊರಡಿಸಿದೆ.

ಇವರು ಅರ್ಹರು:

ಡಿಸೆಂಬರ್ 31 2023 ಕ್ಕೆ ಸುಸ್ತಿಯಾಗುವ ಮಧ್ಯಮ ಅವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು ರೈತರು ಪಡೆದಿದ್ದರೆ ಅಂತಹ ರೈತರ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಮನ್ನ ಮಾಡಲಿದೆ ಎನ್ನಲಾಗಿದೆ. ಆದರೆ 2024 ಫೆಬ್ರವರಿ 29ಕ್ಕೆ ಸಾಲದ ಮೇಲಿನ ಸಂಪೂರ್ಣ ಅಸಲನ್ನು ಪಾವತಿ ಮಾಡಿದ್ದರೆ ಮಾತ್ರ ರೈತರಿಗೆ ಈ ಸೌಲಭ್ಯ ದೊರೆಯುತ್ತದೆ

ಈ ಬ್ಯಾಂಕ್ ನ ಬಡ್ಡಿ ಮನ್ನಾ:

ಗ್ರಾಮೀಣ ಅಭಿವೃದ್ಧಿ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ,ಕೃಷಿ ಪತ್ತಿನ ಸಂಘ,ಸರಕಾರಿ ಬ್ಯಾಂಕುಗಳು, ಲ್ಯಾಂಪ್ಸ್ ಸಹಕಾರಿ ಸಂಘಗಳು, ಇತ್ಯಾದಿ ಬ್ಯಾಂಕುಗಳಲ್ಲಿ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಿದೆ.

advertisement

Leave A Reply

Your email address will not be published.