Karnataka Times
Trending Stories, Viral News, Gossips & Everything in Kannada

PM SVANidhi: ಬೀದಿ ಬದಿಯ ವ್ಯಾಪಾರಿಗಳಿಗೆ ಸರ್ಕಾರದಿಂದ ಅತಿ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ, ಈ ದಾಖಲೆಗಳು ಕಡ್ಡಾಯ!

advertisement

ಪ್ರಧಾನ ಮಂತ್ರಿ ಸ್ವನಿಧಿ (PM SVANidhi) ಯೋಜನೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ ಕೂಡಾ ಆಗಿದೆ. ಇದು ಜೂನ್ 2020 ರಲ್ಲಿ ಪ್ರಾರಂಭವಾದ ಕೇಂದ್ರ ವಲಯದ ಯೋಜನೆಯಾಗಿದೆ. ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ 50,000 ರೂ. ತನಕ ಸಾಲವನ್ನು ವಿತರಿಸಲು ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆ ಇದಾಗಿದೆ. ಈ ಯೋಜನೆಯ ಅಡಿಯಲ್ಲಿ ಫಸ್ಟ್‌ ಟರ್ಮ್‌ ಲೋನ್‌ ವಿಭಾಗದಲ್ಲಿ ಇದುವರೆಗೆ 76,78,830 ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಗಿದೆ. 60,03,816 ಪ್ರಕರಣಗಳಲ್ಲಿ ಸಾಲ ವಿತರಿಸಲಾಗಿದೆ.

What is PM SVANidhi?

 

 

ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಸಾಲ ಪಡೆಯಲು ಆಸ್ತಿ ಪತ್ರ ಇಲ್ಲವೆ ಬೇಳೆ ಬಾಳುವ ವಸ್ತುಗಳನ್ನು ಹೊಂದಿರಬೇಕು. ಆದರೆ ಈ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಬಂಡವಾಳ ನೆರವು ನೀಡುವ ಸಲುವಾಗಿ ಇರುವ ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆಯಾಗಿದೆ. ಲಾಕ್‌ ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದ ರಸ್ತೆ ಬದಿ ವ್ಯಾಪಾರಿಗಳ ನೆರವಿಗೆ ಇದನ್ನು ಆರಂಭಿಸಲಾಗಿದ್ದು, ಆರಂಭಿಕ ಹಂತದಲ್ಲಿ 10,000 ರೂ. ಸಾಲ ನೀಡಲಾಗುವುದು. ಬಳಿಕ 50,000 ರೂ. ತನಕ ವಿಸ್ತರಿಸಲು ಅವಕಾಶ ಇದೆ. ಸ್ವನಿಧಿ ಸಾಲಕ್ಕೆ ಬಡ್ಡಿ ದರ 7% ಆಗಿರುತ್ತದೆ. ಸಕಾಲಕ್ಕೆ ಸಾಲ ಮರು ಪಾವತಿಸುವವರಿಗೆ ಹೆಚ್ಚಿನ ಸಾಲಕ್ಕೆ ಅರ್ಹರಾಗಿರುತ್ತಾರೆ.

PM SVANidhi Main Objectives:

 • ಇದು ಕೇಂದ್ರ ವಲಯದ ಯೋಜನೆಯಾಗಿದೆ
 • ಬೀದಿ ವ್ಯಾಪಾರಿಗಳಿಗೆ ಇದು ಕೈಗೆಟುಕುವ ಬಡ್ಡಿದರದಲ್ಲಿ ಸಾಲ ನೀಡುತ್ತದೆ.
 • ಇದು ಮಾರ್ಚ್ 2022 ರಲ್ಲಿ ಜಾರಿಯಾಗಿತ್ತು. ಇಂದಿಗೂ ಜಾರಿಯಲ್ಲಿದೆ.
 • ಮಾರಾಟಗಾರರಿಗೆ ಆರಂಭದಲ್ಲಿ 10000 ರೂಪಾಯಿ ನೀಡಲಾಗುತ್ತದೆ.
 • ಸಾಲದ ಆರಂಭಿಕ ಅಥವಾ ಸಕಾಲಿಕ ಮರುಪಾವತಿಯಲ್ಲಿ ಬೀದಿ ಬದಿ ವ್ಯಾಪಾರಸ್ಥ ಶೇಕಡ 7 ರಷ್ಟು ಬಡ್ಡಿ ಸಬ್ಸಿಡಿಯನ್ನು ಪಡೆಯಬಹುದು.
 • ಡಿಜಿಟಲ್ ಪಾವತಿಗಳ ಮೇಲೆ ಮಾಸಿಕ ಕ್ಯಾಶ್-ಬ್ಯಾಕ್ ಪ್ರೋತ್ಸಾಹದ ನಿಬಂಧನೆ ಇದೆ.
 • ಮಾಸಿಕ ಕ್ಯಾಶ್‌ಬ್ಯಾಕ್ 50-100 ರೂಪಾಯಿ ಆಗಿದೆ.
 • ಮೊದಲ ಸಾಲವನ್ನು ಸಮಯಕ್ಕೆ ಮರುಪಾವತಿಸಿದರೆ ಹೆಚ್ಚಿನ ಸಾಲಕ್ಕೆ ಅರ್ಹರಾಗಬಹುದು.
 • ಸಾಲ ಪಡೆಯಲು ಯಾವುದೇ ಮೇಲಾಧಾರ ಇಡಬೇಕಾಗಿಲ್ಲ.

advertisement

PM SVANidhi ಯೋಜನೆಯ ವಿಶಿಷ್ಟತೆಗಳು:

 • ಬೀದಿಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು.
 • ಸಾಲ ಮರುಪಾವತಿ ಆಧಾರದಲ್ಲಿ ಹೆಚ್ಚುವರಿ ಸಾಲ ನೀಡುವುದು
 • ಡಿಜಿಟಲ್ ಮರುಪಾವತಿ ಆಯ್ಕೆ ಮಾಡುವವರಿಗೆ ಬಹುಮಾನ ನೀಡುವ ಮೂಲಕ ಡಿಜಿಟಲೀಕರಣಕ್ಕೆ ಉತ್ತೇಜನ ಪಿಎಂ ಸ್ವನಿಧಿ ಸಾಲ ನೀಡುವ ಸಂಸ್ಥೆಗಳು, ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು, ಮೈಕ್ರೋ-ಫೈನಾನ್ಸ್ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು (SHG) ಬ್ಯಾಂಕುಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಅರ್ಹತೆ ಇದೆ.
 • ಬೀದಿ ವ್ಯಾಪಾರಿಗಳ (ಜೀವನದ ರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ಕಾಯಿದೆ, 2014 ರ ಅಡಿಯಲ್ಲಿ ನಿಯಮಗಳು ಮತ್ತು ಯೋಜನೆಯನ್ನು ಸೂಚಿಸಿದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಫಲಾನುಭವಿಗಳಿಗೆ ಮಾತ್ರ ಈ ಯೋಜನೆಯು ಲಭ್ಯವಿದೆ.
 • ತನ್ನದೇ ಆದ ರಾಜ್ಯ ಬೀದಿ ವ್ಯಾಪಾರಿಗಳ ಕಾಯಿದೆಯನ್ನು ಹೊಂದಿರುವ ಮೇಘಾಲಯದ ಫಲಾನುಭವಿಗಳು ಭಾಗವಹಿಸಬಹುದು.

ಈ ಯೋಜನೆಯು ಅಡಿಯಲ್ಲಿ ಸಾಲ ಪಡೆಯಲು ಇರಬೇಕಾದ ದಾಖಲೆಗಳು:

 • Aadhaar Card,
 • Voter ID Card,
 • Driving License Training
 • Nrega Card
 • PAN Card ಇವುಗಳಲ್ಲಿ ಕೆಲ ದಾಖಲೆಗಳು ಇದ್ದರೆ ಸಾಕು. ಆಧಾರ್‌ ಮತ್ತು ವೋಟರ್‌ ಐಡಿ ಕಡ್ಡಾಯವಾಗಿ ಬೇಕು.

ಯಾರೆಲ್ಲ ಸಾಲ ಪಡೆಯಬಹುದು?

ರಸ್ತೆ ಬದಿಯಲ್ಲಿ ತರಕಾರಿ, ಹಣ್ಣು ಹಂಪಲು, ದಿನೋಪಯೋಗಿ ವಸ್ತುಗಳು, ಆಟಿಕೆಗಳು, ರೆಡಿಮೇಡ್‌ ವಸ್ತುಗಳು, ಬಟ್ಟೆ ಬರೆಗಳು, ಬ್ರೆಡ್‌, ಮೊಟ್ಟೆ, ಪುಸ್ತಕ, ಪೆನ್ನು ಇತ್ಯಾದಿಗಳನ್ನು ಮಾರಾಟ ಮಾಡುವವರು, ತಳ್ಳುವ ಗಾಡಿಯನ್ನು ಇಟ್ಟು ರಸ್ತೆ ಪಕ್ಕ ಮಾರಾಟ ಮಾಡುವವರು, ಪಾನ್‌ ಶಾಪ್‌ನವರು, ರಸ್ತೆ ಬದಿಯ ಸಲೂನ್‌ಗಳನ್ನು ನಡೆಸುವವರು, ರಸ್ತೆ ಬದಿ ಅಂಗಡಿಯಲ್ಲಿ ಇಸ್ತ್ರಿ ಹಾಕುವರು ಈ ಸಾಲ ಪಡೆಯಬಹುದು. ಆದರೆ ಬೀದಿ ಬದಿಯ ವ್ಯಾಪಾರಿಗಳು ಸ್ಥಳೀಯ ಆಡಳಿತ ಸಂಸ್ಥೆಗಳು ನೀಡಿರುವ ಐಡೆಂಟಿಟಿ ಕಾರ್ಡ್‌ ಅನ್ನು ಹೊಂದಿರಬೇಕು. ಸ್ಥಳೀಯಾಡಳಿತದ ಸರ್ವೇನಲ್ಲಿ ಗುರುತಿಸಿಕೊಂಡಿರಬೇಕು.

advertisement

Leave A Reply

Your email address will not be published.