Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಯೋಜನೆಯು 6 ನೆಯ ಕಂತಿನ ಹಣ ಈ ದಿನಾಂಕದಂದು ಸಿಗೋದು ಪಕ್ಕಾ!

advertisement

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು ರಾಜ್ಯದಲ್ಲಿ ಮಾತ್ರವಲ್ಲ ದೇಶದಾದ್ಯಂತ ಜನಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಮುಖ್ಯವಾಗಿ ಗೃಹ ಲಕ್ಷ್ಮೀ ಯೋಜನೆ (Gruha Lakshmi Yojana) ಭಾರತದಲ್ಲಿ ಚರ್ಚೆಗೆ ಆದರೆ ಈ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದು ಅಪ್ಡೇಟ್ ಬಂದಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಮುಂದಿನ ದಿನಗಳಲ್ಲಿ ಬರುತ್ತದೆಯೋ ಇಲ್ಲವೋ ಎನ್ನುವ ಪ್ರಶ್ನೆ ಕೂಡ ಉಂಟಾಗುತ್ತಿದೆ. ಆದರೆ ಚಿಂತೆ ಬೇಡ ಯಾವ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ನಿಲ್ಲುವುದಿಲ್ಲ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಒಂದಿಷ್ಟು ಮಹಿಳೆಯರಿಗೆ ಒಂದನೇ ಕಂತಿನ ಹಣ ಬಂದಿಲ್ಲ ಇನ್ನೂ ಕೆಲವರಿಗೆ ಎರಡನೇ ಕಂತು ಮೂರನೇ ಕಂತಿನ ಹಣ ಕೂಡ ಬಂದಿಲ್ಲ. ಸರ್ಕಾರದಲ್ಲಿ ಯಾವುದೇ ರೀತಿಯ ಬಜೆಟ್ ಇಲ್ಲದೆ ಇರುವುದರಿಂದ ಈ ರೀತಿ ಹಣ ಬಾಕಿ ಉಳಿಯುತ್ತದೆ ಎಂಬುದು ಮಹಿಳೆಯರ ಮಾತಾಗಿದೆ. ಇನ್ನು ಕೆಲವರು ಐದನೇ ಕಂತಿನ ಹಣ ಬಂದಿದೆ ಆರನೇ ಕಂತಿನ ಹಣ ತಡವಾಗುತ್ತದೆ ಎನ್ನುತ್ತಿದ್ದಾರೆ. ಹೌದು ಅದು ನಿಜ.

6 ಕಂತಿನ ಹಣ ಬಿಡುಗಡೆ ಆಗಲು ತಡವೇಕೆ?

 

advertisement

 

ಸರ್ಕಾರ ದಿಂದ ಬಂದ ಮಾಹಿತಿ ಏನೆಂದರೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ 5 ತಿಂಗಳ ಹಣ ಈಗಾಗಲೇ ಬಿಡುಗಡೆಯಾಗಿದೆ ಎಂಬುದನ್ನ ತಿಳಿಸಿದ್ದಾರೆ. ಈಗಾಗಲೇ 5 ತಿಂಗಳಿಗೆ ಹಣ ಬಿಡುಗಡೆಯಾಗಿದೆ ಇನ್ನೂ 7 ತಿಂಗಳಿಗೆ ಹಣ ಬಿಡುಗಡೆಯಾಗಬೇಕಾಗಿದೆ ಎಷ್ಟು ಹಣ ಬಿಡುಗಡೆಯಾಗಬೇಕು ಎಂಬುದು ಎಂದರೆ 12 ಕೋಟಿಗಿಂತ ಹೆಚ್ಚು ಹಣವನ್ನು ಬಿಡುಗಡೆ ಮಾಡಬೇಕು. ಆದರೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ನೀಡಿದ್ದ ಹಣ ಖಾಲಿ ಆಗಿದೆ. ಹಾಗಾಗಿ ಸರ್ಕಾರ ಮತ್ತೊಮ್ಮೆ ಹಣಕಾಸು ಇಲಾಖೆಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಬೇಕಿದೆ.

ನಮಗೆ ಇಷ್ಟು ಹಣಬೇಕು ಎಂದು ಕೊಟೇಶನ್ ನೀಡಿದರೆ ಹಣಕಾಸು ಇಲಾಖೆ ಪರಿಶೀಲಿಸಿ ಅದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳಿಸುತ್ತಾರೆ . ಅವರು ಅದನ್ನು ಮತ್ತೊಮ್ಮೆ ಪರಿಶೀಲಿಸಿ ಡಿಬಿಟಿ ಮುಖಾಂತರ ನಿಮ್ಮ ನಿಮ್ಮ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡುತ್ತಾರೆ.

ಇನ್ನು ಸರ್ಕಾರ ಈಗಾಗಲೇ ಈ ಬಗ್ಗೆ ಮುಂದಿನ ಕ್ರಮ ಕೈಗೊಂಡಿರುವ ಕಾರಣ ಫೆಬ್ರುವರಿ ತಿಂಗಳ 10ರ ಒಳಗಾಗಿ ಗೃಹ ಲಕ್ಷ್ಮಿ (Gruha Lakshmi) ಆರನೇ ಕಂತಿನ ಹಣ ಬಿಡುಗಡೆ ಆಗುತ್ತದೆ ಎನ್ನಲಾಗುತ್ತಿದೆ.

advertisement

Leave A Reply

Your email address will not be published.