Karnataka Times
Trending Stories, Viral News, Gossips & Everything in Kannada

Railway Food: ಯಾವುದೇ ಶುಲ್ಕ ಪಾವತಿಸದೆ ರೈಲ್ವೆಯಲ್ಲಿ ಪಡೆಯಬಹುದು ಉಚಿತ ಆಹಾರ; ರೈಲ್ವೆ ಇಲಾಖೆಯ ಹೊಸ ಸೌಲಭ್ಯ!

advertisement

ದೇಶದ ಜೀವನಾಡಿ ಎನಿಸಿಕೊಂಡಿದೆ ಭಾರತೀಯ ರೈಲ್ವೆ. ಪ್ರಪಂಚದಲ್ಲಿಯೇ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವನ್ನು ಹೊಂದಿರುವ ರಾಷ್ಟ್ರ ಎಂದು ಭಾರತ ಹೆಗ್ಗಳಿಕೆ ಗಳಿಸಿದೆ. ರೈಲ್ವೆ ಪ್ರಯಾಣ ಹೆಚ್ಚು ಆರಾಮದಾಯಕ ಹಾಗೂ ಅಗ್ಗವಾಗಿರುವುದರಿಂದ ಸುಲಭವಾಗಿ ಎಲ್ಲಿಂದ ಎಲ್ಲಿಗೆ ಬೇಕಾದರೂ ರೈಲಿನ ಮೂಲಕ ಪ್ರಯಾಣಿಸಬಹುದು. ನಮ್ಮ ಅನುಕೂಲಕ್ಕೆ ತಕ್ಕಂತೆ ರೈಲ್ವೆ ಕೋಚ್ (AC ಅಥವಾ NON AC) ಗಳನ್ನು ಆಯ್ದುಕೊಂಡು ಅವುಗಳಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

ರೈಲಿನಲ್ಲಿ ಪಡೆಯಬಹುದು ಉಚಿತ ಆಹಾರ:

 

 

advertisement

ಸಾಮಾನ್ಯವಾಗಿ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣಿಸುವವರಿಗೆ ರೈಲಿನಲ್ಲಿ ಇರುವ ಇತರ ಸೌಲಭ್ಯಗಳ ಬಗ್ಗೆ ತಿಳಿದಿರುವುದಿಲ್ಲ. ಹೆಚ್ಚಾಗಿ ನಾವು ದೂರದ ಊರಿಗೆ ರೈಲಿನಲ್ಲಿ ಪ್ರಯಾಣಿಸುವಾಗ ರೈಲಿನಲ್ಲಿಯೇ ಆಹಾರ (Railway Food) ಬುಕ್ ಮಾಡಿಕೊಂಡು ಖರೀದಿ ಮಾಡಬಹುದು, ಅಥವಾ ರೈಲಿನಲ್ಲಿಯೇ ಆಹಾರ ಬುಕ್ ಮಾಡಿಕೊಂಡು ಖರೀದಿ ಮಾಡಬಹುದು ಅಥವಾ ಟಿಕೆಟ್ ಖರೀದಿ ಸಮಯದಲ್ಲಿ ಆಹಾರ ಬುಕ್ ಮಾಡಿಕೊಳ್ಳಬಹುದು. ಆದರೆ ರೈಲಿನಲ್ಲಿ ನೀವು ಉಚಿತವಾಗಿಯೂ ಕೂಡ ಆಹಾರ (Free Railway Food) ಬುಕ್ ಮಾಡಬಹುದು ಎನ್ನುವ ವಿಚಾರ ನಿಮಗೆ ಗೊತ್ತಾ?

ಸೂಪರ್ ಫಾಸ್ಟ್ (Super Fast) ಅಥವಾ ಎಕ್ಸ್ಪ್ರೆಸ್ ರೈಲು (Express Train) ಗಳಲ್ಲಿ ನೀವು ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿಕೊಂಡಿದ್ದು ರೈಲು ಸ್ಟೇಷನ್ ಗೆ ತಡವಾಗಿ ಬಂದರೆ, ರೈಲು ಬರಲು ವಿಳಂಬವಾದರೆ ನಿಮ್ಮ ಕಾಯುವಿಕೆಗೆ ಕಾಂಪನ್ಸೇಷನ್ ಆಗಿ ಉಚಿತ ಆಹಾರ (Free Railway Food) ನೀಡಲಾಗುತ್ತದೆ.

ಈ ರೀತಿ ರೈಲು ಬರಲು ವಿಳಂಬವಾದರೆ ನೀವು ಸುಲಭವಾಗಿ ಆಹಾರ ಉಚಿತವಾಗಿ ಪಡೆಯಬಹುದು. ಹಾಗೂ ನಿಮ್ಮ ನೆಚ್ಚಿನ ಆಹಾರ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಮೂರು ಅವಧಿಯ ಉಚಿತ ಆಹಾರ ಪಡೆಯಬಹುದು. ಎಷ್ಟು ಸಂದರ್ಭದಲ್ಲಿ ರೈಲು ಬರಲು ವಿಳಂಬವಾಗಬಹುದು ಅಂತಹ ಸಮಯದಲ್ಲಿ ರೈಲಿನಲ್ಲಿ ನೀಡಲಾಗುವ ಈ ಉಚಿತ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಿ.

advertisement

Leave A Reply

Your email address will not be published.