Karnataka Times
Trending Stories, Viral News, Gossips & Everything in Kannada

Gowow Ori: ಆಫ್ ರೋಡಿಂಗ್ ಎಲೆಕ್ಟ್ರಿಕ್ ಬೈಕ್ ಭಾರತಕ್ಕೆ ಬರಲಿದೆ, ಸಿಂಗಲ್ ಚಾರ್ಜ್ ಗೆ 100Km ಮೈಲೇಜ್!

advertisement

ಈಗ ಈಗ ಎಲ್ಲಾ ಸೆಗ್ಮೆಂಟ್ ನ ವಾಹನಗಳಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ದಿನೇ ದಿನೇ ಬರುವ ಹೊಸ ಮಾಡೆಲ್ ಗಳು ಹಾಗೂ ಹೊಸ ಆವಿಷ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಇನ್ನಷ್ಟು ಮಾರುಕಟ್ಟೆಗೆ ಸಿದ್ಧವನ್ನಾಗಿಸಿವೆ. ಇದರ ಜೊತೆಗೆ ಉತ್ತಮವಾಗುತ್ತಾ ಬರುತ್ತಿರುವ ಬೆಲೆಗಳು ಎಲೆಕ್ಟ್ರಿಕ್ ವಾಹನಗಳತ್ತ ಜನರು ನೋಡುವಂತೆ ಮಾಡುತ್ತಿದೆ.

ಎಲೆಕ್ಟ್ರಿಕ್ ವಾಹನಗಳಲ್ಲಿ ಬೈಕ್ ಗಳು ಹೊಸತೇನ್ನಲ್ಲ ಭಾರತದಲ್ಲಿ ತುಂಬಾ ಕಂಪನಿಗಳ Electric Bikes,  Scooters ಈಗಾಗಲೇ ದೊರಕುತ್ತಿವೆ. ವಿವಿಧ ವಿನ್ಯಾಸದ ಹಾಗೂ ವಿವಿಧ ರೇಂಜ್ ನೀಡುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಇವೆ. ಆದರೆ ಈಗ ಆಫ್ ರೋಡೀಂಗ್ ಅಥವಾ ಡರ್ಟ್ ಬೈಕ್ ಸೆಗ್ಮೆಂಟ್ ನಲ್ಲಿಯೂ ಕೂಡ ಎಲೆಕ್ಟ್ರಿಕ್ ವಾಹನಗಳು ಕಾಲಿಡಲಿವೆ. ಹಾಗಿದ್ದರೆ ಲಾಂಚ್ ಆಗುತ್ತಿರುವ ಬೈಕ್ ನ ಫೀಚರ್ಸ್ ಗಳು ಏನಿರಲಿದೆ ಎಂಬುದರ ಬಗ್ಗೆ ಈಗ ನೋಡೋಣ.

Gowow Ori Bike: 

 

 

ಚೈನಾದ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಗೋವೊವ್ (Gowow Ori) ಈಗ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಓರಿ ಹೆಸರಿನ ಈ ಬೈಕ್ ಆಫ್ ರೋಡಿಂಗ್ ಎಲೆಕ್ಟ್ರಿಕ್ ಬೈಕ್ ಆಗಿದೆ ಹಾಗೂ ಇದು ಜನರಿಗೆ ಹೆಚ್ಚು ಇಷ್ಟ ಆಗುತ್ತಿದೆ. ಇಲ್ಲಿಯ ತನಕ ಸಾಮಾನ್ಯವಾಗಿ ಎಲೆಕ್ಟ್ರಿಕ್ ವೆಹಿಕಲ್ ಗಳು ಬಂದ ನಂತರ ಈಗ ಡರ್ಟ್ ಬೈಕ್ ಎಲೆಕ್ಟ್ರಿಕ್ ಮಾದರಿಯಲ್ಲಿ ಬರುತ್ತಿದೆ.

advertisement

ಗೋವೊವ್ (Gowow) PMSM ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೋನಸ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ ಇದು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಇದು ದ್ವಿಚಕ್ರವಾಹನಕ್ಕೆ ತುಂಬಾ ಹೆಚ್ಚಾಗಿರುವ ಟಾರ್ಕ್ ಆದ್ದರಿಂದ ಸುರಕ್ಷತೆಯ ದೃಷ್ಟಿಯಲ್ಲಿ ಈ ದ್ವಿಚಕ್ರ ವಾಹನದ ಗರಿಷ್ಠ ವೇಗವನ್ನು ಗಂಟೆಗೆ 100 ಕಿಲೋಮೀಟರ್ ನಿಗದಿಪಡಿಸಲಾಗಿದೆ.

 

 

ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 62 ಮೈಲುಗಳಷ್ಟು ಅಂದರೆ 100 ಕಿಲೋಮೀಟರ್ ಗಳಿಗಿಂತಲೂ ಹೆಚ್ಚು ರೇಂಜನ್ನು ನೀಡುತ್ತದೆ. ಈ ಬೈಕು ಸುಮಾರು 161 ಪೌಂಡ್ ಗಳಷ್ಟು ತೂಕ ಇದೆ ಮತ್ತು Off Roading ಗೆ ಬೇಕಾದ ಬಾಡಿಯನ್ನು ಹೊಂದಿದೆ.

ಈ ಬೈಕಿನಲ್ಲಿ ಇರುವ ಡಿಜಿಟಲ್ ತಂತ್ರಜ್ಞಾನದ ಮೂಲಕ ಸವಾರರು ಈ ಬೈಕ್ ನ ಡೇಟಾವನ್ನು ಪರಿಶೀಲಿಸಬಹುದು ಹಾಗೂ ಮೇಲ್ವಿಚಾರಣೆಯನ್ನು ಕೂಡ ಮಾಡಬಹುದು, ಇದು ಡಬಲ್ ಸ್ಟಾರ್ ಕಾಂಪೋಸಿಟ್ ಫ್ರಂಟ್ ಮತ್ತು ಫೋರ್ ಲಿಂಕ್ ರಿಯಲ್ ಸಸ್ಪೆನ್ಷನ್ ಸಿಸ್ಟಮ್ ಹೊಂದಿದ್ದು ಒರಟಾದ ರಸ್ತೆ ಪ್ರದೇಶದಲ್ಲಿಯೂ ಕೂಡ ಉತ್ತಮವಾದ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ ಹಾಗೂ ಇದರಿಂದಾಗಿ ಬೈಕ್ ನ ಬ್ರೇಕ್ ಡಿಸ್ಕ್ ನ ಮೇಲೆ ಕೊಳೆ ಅಥವಾ ಕೆಸರು ಇದ್ದ ಸಂದರ್ಭದಲ್ಲೂ ಸರಿಯಾಗಿ ಕೆಲಸ ನಿರ್ವಹಿಸುತ್ತವೆ.

ಈ Gowow Ori ಬೈಕ್ ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿದ್ದು ವರದಿಗಳ ಪ್ರಕಾರ 4.6 ಲಕ್ಷ ಇದರ ಬೆಲೆ ಆಗಲಿದೆ. ಬೇರೆ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ ಬೆಲೆ ಸ್ವಲ್ಪ ಜಾಸ್ತಿ ಇದ್ದರೂ ಕೂಡ ಇದು ಆಫ್ ರೋಡಿಂಗ್ ಪ್ರಿಯರಿಗೆ ಇಷ್ಟ ಆಗಲಿದೆ.

advertisement

Leave A Reply

Your email address will not be published.