Karnataka Times
Trending Stories, Viral News, Gossips & Everything in Kannada

Budget 2024: 3 ಕೋಟಿ ಮನೆ ನಿರ್ಮಾಣ, 1 ಕೋಟಿ ಮನೆಗಳಿಗೆ ಉಚಿತ ಸೋಲಾರ್ ಅಳವಡಿಕೆ: ಕೇಂದ್ರ ಸರ್ಕಾರದ ಬಜೆಟ್ ನ ಅಂಶಗಳು!

advertisement

ಇಂದು ಅಂದ್ರೆ ಫೆಬ್ರವರಿ ಒಂದು 2024, ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಮೋದಿಜಿ ನೇತೃತ್ವದ ಸರ್ಕಾರ ಮಾಡಿರುವ ಸಾಧನೆಗಳ ಪಟ್ಟಿಯನ್ನು ಓದಿ ಹೇಳುವುದರ ಮೂಲಕ ನಿರ್ಮಲ ಸೀತಾರಾಮನ್ ಅವರು ಬಜೆಟ್ ಮಂಡನೆ ಆರಂಭಿಸಿದರು.

ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಕೆಲಸ:

ಕಳೆದ ಹತ್ತು ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ ಬಹಳಷ್ಟು ಅಭಿವೃದ್ಧಿ ಆಗಿದೆ. ಜನಪರ ಯೋಜನೆಗಳನ್ನು ರಚಿಸಲಾಗಿದೆ. ಉದ್ಯೋಗ ಉದ್ದಿಮೆ ವ್ಯವಹಾರ ಮೊದಲಾದವುಗಳಿಗೆ ಉತ್ತೇಜನ ನೀಡಲಾಗುತ್ತಿದ್ದು ಎರಡನೇ ಅವಧಿಯಲ್ಲಿ ಯುವಕ ಯುವತಿಯರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಲಾಗಿದೆ.

80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ:

ದೇಶದ ಅಭಿವೃದ್ಧಿಗಾಗಿ ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರ ಮಾಡಿರುವ ಖರ್ಚು ಹಾಗೂ ಅನುದಾನ ಅಷ್ಟಿಷ್ಟಲ್ಲ. ದೇಶದ ಜನತೆಗೆ Free Water, Gas, Electricity ಎಲ್ಲವನ್ನು ವಿತರಣೆ ಮಾಡಲಾಗಿದೆ. 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ (Free Ration Distribution) ಮಾಡಲಾಗಿದೆ. ಅಭಿವೃದ್ಧಿ ಮೂಲಕ ಸಾಮಾಜಿಕ ನ್ಯಾಯಕ್ಕೆ ಕೇಂದ್ರ ಸರ್ಕಾರ ಪಣತೊಟ್ಟಿದೆ ಎಂದು ನಿರ್ಮಲ ಸೀತಾರಾಮನ್ (Nirmala Sitharaman) ಬಜೆಟ್ ಮಂಡನೆಯ ಸಮಯದಲ್ಲಿ ತಿಳಿಸಿದರು.

ಹಳ್ಳಿಗಳ ಅಭಿವೃದ್ಧಿ:

advertisement

ಕರೋನಾದಂತಹ ಸಂಕಷ್ಟ ಸಮಯವನ್ನು ಎದುರಿಸಿದ ದೇಶ ಈಗ ಅಭಿವೃದ್ಧಿಯತ್ತ ಮುಂದುವರೆಯುತ್ತಿದೆ. ಹಳ್ಳಿಗಳಲ್ಲಿ ಹೊಸ ಹೊಸ ಉದ್ಯೋಗಗಳು ಸೃಷ್ಟಿ ಆಗಿವೆ. ಉದ್ಯೋಗ ಆಕಾಂಕ್ಷಿಗಳಿಗೆ ಸರಿಯಾದ ನೆರವನ್ನು ಸರ್ಕಾರ ನೀಡಿದ್ದು ಯುವಕರ ಏಳಿಗೆಗೆ ಶ್ರಮಿಸಿದೆ ಹಳ್ಳಿಗಳಲ್ಲಿ ಆರ್ಥಿಕ ಅಭಿವೃದ್ಧಿ ಕಾಣುತ್ತಿದೆ ಎಂದಿದ್ದಾರೆ.

3 ಕೋಟಿ ಮನೆ ನಿರ್ಮಾಣ, ಒಂದು ಕೋಟಿ ಸೋಲಾರ್ ಅಳವಡಿಕೆ:

 

 

ನಮೋ ಸರ್ಕಾರ ಜನರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳಲ್ಲಿ ವಸತಿ ಯೋಜನೆ ಯಶಸ್ವಿಯಾಗಿದೆ. ಗ್ರಾಮೀಣ ಭಾಗದಲ್ಲಿ 3 ಕೋಟಿ ಮನೆ ನಿರ್ಮಾಣ ಮಾಡಲಾಗಿದ್ದು, 1 ಕೋಟಿ ಮನೆ ಮೇಲೆ ಸೋಲಾರ್ (Solar) ನಿರ್ಮಾಣ ಮಾಡಲಾಗಿದೆ. ಇದರಿಂದ ಹಲವು ಕುಟುಂಬಗಳು ಉಚಿತವಾಗಿ ವಿದ್ಯುತ್ ಪಡೆದುಕೊಳ್ಳುವಂತೆ ಆಗಿದೆ.

ಮಧ್ಯಮ ವರ್ಗಕ್ಕೆ ವಸತಿ ಯೋಜನೆಯ ಮೂಲಕ ಮನೆ ನಿರ್ಮಾಣ ಮಾಡಿಕೊಡಲಾಗಿದೆ. ಹೈನುಗಾರಿಕೆ ಮಾಡಲು ರೈತರಿಗೆ ಬೆಂಬಲ ಹಾಗೂ ಡೈರಿ ಉದ್ಯಮಕ್ಕೆ ಬೇಕಾಗಿರುವ ಮೂಲ ಸೌಕರ್ಯಗಳ ವಿತರಣೆ ಮಾಡಲಾಗಿದೆ. ಮತ್ಸ್ಯ ಸಂಪದ ಯೋಜನೆಯ ಅಡಿ 55 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಿದ್ದು, ಅವುಗಳಲ್ಲಿ ಬಹುತೇಕ ಯಶಸ್ವಿಯಾಗಿದೆ.

ಸರ್ಕಾರದ ಈ ಸಾಧನೆಗಳ ಜೊತೆಗೆ ಇನ್ನಷ್ಟು ಭವಿಷ್ಯದ ಯೋಜನೆಗಳ ಬಗ್ಗೆ ಇಂದಿನ ಬಜೆಟ್ ನಲ್ಲಿ ಮಂಡಿಸಲಾಗಿದೆ.

advertisement

Leave A Reply

Your email address will not be published.