Karnataka Times
Trending Stories, Viral News, Gossips & Everything in Kannada

Ayushman Bharat: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಈ ಯೋಜನೆಯಿಂದ 5 ಲಕ್ಷ ರೂಪಾಯಿ ಲಭ್ಯ!

advertisement

ಆಯುಷ್ಮಾನ್ ಭಾರತ್ (Ayushman Bharat) ಅಡಿಯಲ್ಲಿ ಆರೋಗ್ಯ ರಕ್ಷಣೆಯನ್ನು ಎಲ್ಲಾ ಆಶಾ, ಅಂಗನವಾಡಿ  ಕಾರ್ಯಕರ್ತೆಯರಿಗೂ ವಿಸ್ತರಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 2024ರ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಅವರು ಈ ಅಂಶವನ್ನು ಪ್ರಸ್ತಾಪಿಸಿದ್ದಾರೆ.

ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ-ಜನ ಆರೋಗ್ಯ ಯೋಜನೆ (Ayushman Bharat Pradhan Mantri-Jan Arogya Yojana) ವಿಶ್ವದಲ್ಲೇ ಅತಿ ದೊಡ್ಡ ಸಾರ್ವಜನಿಕ ನಿಧಿಯ ಆರೋಗ್ಯ ವಿಮಾ (Health Insurance) ಯೋಜನೆಯಾಗಿದ್ದು, ದ್ವಿತೀಯ ಮತ್ತು ತೃತೀಯ ಆರೈಕೆಗಾಗಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ಗಳನ್ನು ಒದಗಿಸುತ್ತದೆ. ಕಳೆದ ವರ್ಷ ಡಿಸೆಂಬರ್ 27ರವರೆಗೆ 12 ಕೋಟಿ ಕುಟುಂಬಗಳಿಗೆ ಸೇರಿದ 55 ಕೋಟಿ ಜನ ಈ ಯೋಜನೆಗೆ ಒಳಪಟ್ಟಿದ್ದರು.

What is Ayushman Bharat Yojana?

 

 

advertisement

ಆಯುಷ್ಮಾನ್ ಭಾರತ್ (Ayushman Bharat) ಯೋಜನೆಯು ಬಡವರಿಗೆ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಲಿ ಎಂಬ ಉದ್ದೇಶದಿಂದ ಭಾರತ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ಇದು ನಗದುರಹಿತ ಆಸ್ಪತ್ರೆ ಸೌಲಭ್ಯವನ್ನು ಪಡೆಯುವ ಯೋಜನೆಯಾಗಿದೆ.

ನಾವು ಈ ಯೋಜನೆಯ ಫಲಾನುಭವಿಗಳಾಗಿದ್ದರೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಎರಡರಲ್ಲೂ ಯೋಜನೆಯ ಸದುಪಯೋಗ ಪಡೆಯಬಹುದು. ಇದು ಆರೋಗ್ಯ ವಿಮೆ ಯೋಜನೆಗೆ ಸಮಾನವಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗುವ ಮುನ್ನ ತಗುಲುವ ಖರ್ಚು, ಔಷಧಿ, ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ಬಳಿಕ ನೀಡಲಾಗುವ ಚಿಕಿತ್ಸೆಯ ಖರ್ಚು ಮೊದಲಾದವುಗಳನ್ನು ಈ ವಿಮೆಯಲ್ಲಿ ಒಳಗೊಳ್ಳುತ್ತದೆ. ಇನ್ನು ಮೊಣಕಾಲು ಆಪರೇಷನ್, ಹೃದಯ ಸರ್ಜರಿ ಮೊದಲಾದವುಗಳ ವೆಚ್ಚವನ್ನು ಕೂಡಾ ಈ ಯೋಜನೆ ಮೂಲಕ ಭರಿಸಬಹುದು.

Ayushman Bharat Pradhan Mantri-Jan Arogya Yojana Features:

  • ಆಯುಷ್ಮಾನ್ ಭಾರತ್ ಯೋಜನೆ (Ayushman Bharat Scheme) ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಎರಡರಲ್ಲೂ ಒಂದು ಕುಟುಂಬವು ವಿಮೆ ಮೂಲಕ ಸುಮಾರು 5 ಲಕ್ಷ ರೂಪಾಯಿಯ ಚಿಕಿತ್ಸೆಯನ್ನು ಪಡೆಯಲು ಅವಕಾಶವನ್ನು ನೀಡುತ್ತದೆ.
  • ಈ ಯೋಜನೆಯನ್ನು ಪ್ರಮುಖವಾಗಿ ಇಂಟರ್‌ನೆಟ್ ಅಥವಾ ಆನ್‌ಲೈನ್ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಿರುವ, ಬಡತನದಲ್ಲಿರುವ ಜನರಿಗಾಗಿ ಜಾರಿ ಮಾಡಲಾಗಿದೆ.
  • ಈ ಯೋಜನೆಯ ಫಲಾನುಭವಿಗಳು ಯಾವುದೇ ಹಣವನ್ನು ಪಾವತಿ ಮಾಡದೆಯೇ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ.
  • ಪ್ರತಿ ವರ್ಷ ಸುಮಾರು 6 ಕೋಟಿಯಷ್ಟು ಭಾರತೀಯರು ಅನಿಶ್ಚಿತವಾಗಿ ಉಂಟಾಗುವ ಆರೋಗ್ಯ ಸಮಸ್ಯೆಯಿಂದಾಗಿ ಮಧ್ಯಮ ವರ್ಗದಿಂದ, ಬಡವರ್ಗಕ್ಕೆ ಇಳಿಯುತ್ತಿದ್ದಾರೆ. ಜನರು ಈ ರೀತಿ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
  • ಆಸ್ಪತ್ರೆಯಲ್ಲಿ ದಾಖಲಾಗುವ ಮೂರು ದಿನದ ಮುಂಚಿನ ಖರ್ಚು ವೆಚ್ಚಗಳು ಹಾಗೂ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ 15 ದಿನಗಳವರೆಗಿನ ಖರ್ಚು ವೆಚ್ಚವು ಈ ಯೋಜನೆಯಲ್ಲಿ ಒಳಗೊಳ್ಳುತ್ತದೆ.
  • ಒಂದು ಕುಟುಂಬದ ಗಾತ್ರದ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗೆಯೇ ವಯಸ್ಸಿನ ಮಿತಿಯೂ ಕೂಡಾ ಇಲ್ಲ.

advertisement

Leave A Reply

Your email address will not be published.