Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹ ಲಕ್ಷ್ಮಿ ಏಳನೇ ಕಂತಿನ ಹಣ ಬರಲು ಆರಂಭ! ಮೊದಲು ಈ ಜಿಲ್ಲೆಗಳಿಗೆ

advertisement

ಹೋದ ಭಾರಿ ನಡೆದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವು ಮಹಿಳಾ ಪರವಾದ ಯೋಜನೆಗಳನ್ನು ಹೆಚ್ಚು ಹಮ್ಮಿಕೊಂಡಿತ್ತು. ಇದಕ್ಕಾಗಿ ಮಹಿಳೆಯರ‌ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಈ ಭಾರಿಯ ಕೇಂದ್ರ ಸರಕಾರದ ಚುನಾವಣೆ ಇನ್ನೇನು ನಡೆಯಲಿದ್ದು ಪಕ್ಷಗಳ ಪ್ರಣಾಳಿಕೆ ಕೂಡ ಅರಂಭವಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ (Gruha Lakshmi) ಯೋಜನೆಯನ್ನು ಜಾರಿಗೆ ತರುವ ಮೂಲಕ ಹೆಚ್ಚು ಪ್ರೋತ್ಸಾಹ ಮಹಿಳೆಯರಿಗಾಗಿ ನೀಡುತ್ತಿದೆ. ಉಚಿತ ಬಸ್ ನಲ್ಲಿ ಮಹಿಳೆಯರು ಈಗಾಗಲೇ ಪ್ರಯಾಣ ಮಾಡುತ್ತಿದ್ದಾರೆ.ಆದೇ ರೀತಿ ನೋಂದಣಿ ಮಾಡಿದ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣವು ಬಿಡುಗಡೆಗೊಂಡಿದೆ.

Gruha Lakshmi 7 ನೇ ಕಂತಿನ ಹಣ ಜಮೆ?

ಈಗಾಗಲೇ ನೋಂದಣಿ ಮಾಡಿದ ಕೆಲವು ಮಹಿಳೆಯರಿಗೆ ಆರು ಕಂತಿನ ವರೆಗೆ ಹಣ ಬಿಡುಗಡೆಯಾಗಿದೆ. ಕೆಲವು ಮಹಿಳೆಯರಿಗೆ ನೋಂದಣಿ ಮಾಡಿದ್ರೂ ಹಣ ಜಮೆಯಾಗಿಲ್ಲ‌. ಪೆಡಿಂಗ್ ಹಣವನ್ನು ಕೂಡ ಸರಕಾರ ಶೀಘ್ರವಾಗಿ ಖಾತೆಗೆ ಜಮೆ ಮಾಡಲಿದೆ. ಇನ್ನು ಏಳನೇ ಕಂತಿನ ಹಣವು ಸರಕಾರದಿಂದ ಬಿಡುಗಡೆಯಾಗಿದೆ. ಈ ಬಗ್ಗೆ ಅಪ್ಡೇಟ್ ಮಾಹಿತಿಯು ಬಂದಿದ್ದು ಕೆಲವು ಜಿಲ್ಲೆಗಳಿಗೆ ಈ ಹಣ ಬಿಡುಗಡೆಯಾಗಿದ್ದು ಹಂತ ಹಂತವಾಗಿ ಹಣ ಜಮೆಯಾಗಲಿದೆ.

Image Source: TV9 Kannada

advertisement

Gruha Lakshmi ಹಣ ಈ ಜಿಲ್ಲೆಗಳಿಗೆ ಬಿಡುಗಡೆ:

ನೋಂದಣಿ ಮಾಡಿದ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಹಣ ಜಮೆಯಾಗಲಿದ್ದು ಇದರಲ್ಲಿ ಕೆಲವೊಂದು ಜಿಲ್ಲೆಗಳಿಗೆ ಹಣ ಬಿಡುಗಡೆಯಾಗಿದೆ. ಅದರಲ್ಲಿ ಶಿವಮೊಗ್ಗ, ಧಾರವಾಡ, ತುಮಕೂರು, ಚಾಮರಾಜನಗರ, ವಿಜಯಪುರ, ಬೆಳಗಾವಿ,ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಕೊಪ್ಪಳ, ದಕ್ಷಿಣ ಕನ್ನಡ, ತುಮಕೂರು, ಹಾವೇರಿ, ಉತ್ತರ ಕನ್ನಡ, ಕೋಲಾರ, ಗದಗ, ವಿಜಯನಗರ,ಬೀದರ್, ರಾಯಚೂರು, ಮೈಸೂರು,ಚಿತ್ರದುರ್ಗ, ಹಾಸನ, ಬಳ್ಳಾರಿ, ಯಾದಗಿರಿ,ಇಷ್ಟು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಣ ಬಿಡುಗಡೆಗೊಂಡಿದೆ.

Image Source: Fisdom

ಈ ಸಮಸ್ಯೆ ನಿವಾರಣೆ ಮಾಡಿ

ಹೆಚ್ಚಿನ ಮಹಿಳೆಯರ ಆಧಾರ್ ಜೋಡಣೆ, ಬ್ಯಾಂಕಿಗ್ ಮಾಹಿತಿ ಸಮಸ್ಯೆ ,ಇ-ಕೆವೈಸಿ ಅಪ್ಡೆಟ್, ರೇಷನ್ ಕಾರ್ಡ್ (Ration Card) ಅಪ್ಡೇಟ್‌ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮಾಹಿತಿ‌ ನೀಡಿದ್ದು, ಏನು ಕ್ರಮ ಕೈಗೊಳ್ಳಬೇಕು ಎಂಬ ಸೂಚನೆಯನ್ನು ಕೂಡ ನೀಡಿದ್ದಾರೆ.

advertisement

Leave A Reply

Your email address will not be published.