Karnataka Times
Trending Stories, Viral News, Gossips & Everything in Kannada

Gruha Lakshmi: ಈ ತಾರೀಕಿನೊಳಗೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಕ್ರೆಡಿಟ್ ಆಗಲಿದೆಯಂತೆ!

advertisement

ಇನ್ನು ಕಾಂಗ್ರೆಸ್ ಸರ್ಕಾರದ ಆಡಳಿತ ಬಂದಾಗಿನಿಂದ ಅದರಲ್ಲಿಯೂ ಪ್ರಮುಖವಾಗಿ ಮಹಿಳೆಯರಿಗೆ ವಿವಿಧ ರೀತಿಯಲ್ಲಿ ಸವಲತ್ತುಗಳನ್ನು ನೀಡುವುದರ ಜೊತೆಗೆ ಹಲವಾರು ಯೋಜನೆಗಳ ಮೂಲಕ ಅವರಿಗೆ ಹಣವನ್ನು ಕೂಡ ತಲುಪಿಸುವಂತಹ ಹೊಸ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಅದರಂತೆ ಗೃಹಲಕ್ಷ್ಮಿ (Gruha Lakshmi) ಯೋಜನೆಯ ಆಧಾರದಲ್ಲಿ ಹಲವಾರು ಮಹಿಳೆಯರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಈ ಬಾರಿ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ.

ಆದರೆ 7ನೇ ಕಂತಿನ ಹಣದ ಬಿಡುಗಡೆಯ ಜೊತೆಗೆ ಕೆಲವು ಕಠಿಣ ಕ್ರಮಗಳನ್ನು ಕೂಡ ಜರುಗಿಸಲಾಗಿದೆ ಅದರಂತೆ ಹಲವು ಮಹಿಳೆಯರಿಗೆ ಇನ್ನೂ ಎರಡನೇ ಮೂರನೇ ಮತ್ತು ನಾಲ್ಕನೇ ಕಂತಿನ ಹಣ ಕೂಡ ಬಂದಿಲ್ಲದೆ ಇರುವುದು ತಿಳಿದು ಬಂದಿದ್ದು, ಇನ್ನು ಕೆಲವರಿಗೆ 7ನೇ ಕಂತಿನ ಹಣದ ಮೊತ್ತವು ಇನ್ನು ಕ್ರೇಡಿಟ್ ಆಗದೆ ಇರುವುದು ತಿಳಿದುಬಂದಿದೆ. ಇನ್ನು ಈ ಬಾರಿಯ ಹಣವು ಕ್ರೇಡಿಟ್ ಆಗುವ ಮುನ್ನವೇ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿರುವಂತಹ ರಾಜ್ಯ ಸರ್ಕಾರವು ವಿವಿಧ ಹಂತಗಳ ವೆರಿಫಿಕೇಶನ್ ಮಾಡಿದ ನಂತರ ಹಣದ ಮೊತ್ತವನ್ನು ಕ್ರೆಡಿಟ್ ಮಾಡುವ ಕ್ರಮವನ್ನು ಜರುಗಿಸಿದೆ.

Image Source: VOX

Gruha Lakshmi 7th Installment: 

advertisement

ರಾಜ್ಯ ಸರ್ಕಾರದ ಗೃಹಲಕ್ಷ್ಮಿಯ ಯೋಜನೆಯ ಹಣವನ್ನು ಈಗಾಗಲೇ ಹಲವರು ಪಡೆದುಕೊಳ್ಳುತ್ತಿದ್ದು ಕೆಲವೊಬ್ಬರು ಸರಿಯಾದಂತಹ ದಾಖಲೆಗಳನ್ನು ನೀಡದೆ ಇರುವ ಕಾರಣ ಅಂತವರ ಖಾತೆಗೆ ಹಣ ಕ್ರೆಡಿಟ್ ಆಗಿಲ್ಲ. ಇದರ ಜೊತೆಗೆ ಕೆಲವು ಫೇಕ್ ಅಕೌಂಟ್ ಗಳ ಮೂಲಕ ಹಲವರು ಹಣ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಈ ರೀತಿಯಾದಂತಹ ಗೊಂದಲಗಳನ್ನು ತಪ್ಪಿಸಲು ಸರ್ಕಾರವು ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡಿ ನಂತರ ಹಣವನ್ನು ಕ್ರೇಡಿಟ್ ಮಾಡಲು ಮುಂದಾಗಿದೆ.

Image Source: KP News 24*7

ಇನ್ನು ಈ ಬಾರಿಯ ಡಾಕ್ಯುಮೆಂಟ್ ವೆರಿಫಿಕೇಶನ್ ಹೇಗಿರಲಿದೆ ಎಂದರೆ ಆಧಾರ್ ಕಾರ್ಡ್ (Aadhaar Card) ಬ್ಯಾಂಕ್ ಅಲ್ಲಿ ಸೀಡಿಂಗ್ ಆಗಿರಬೇಕು, ಪ್ಯಾನ್ ಕಾರ್ಡ್ (Pan Card) ನ ಇ- ಕೆವೈಸಿ (E-KYC) ಆಗಿರಬೇಕು. ರೇಷನ್ ಕಾರ್ಡ್ (Ration Card) ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಹೆಸರು ನೀಡಿರುವ ಮಹಿಳೆ ಮುಖ್ಯಸ್ಥೇ ಆಗಿರಬೇಕು ಮತ್ತು ಎಲ್ಲಾ ದಾಖಲೆಗಳಲ್ಲಿಯೂ ಕೂಡ ಒಂದೇ ಹೆಸರು ಇರಬೇಕು ಎಂಬ ನಿಯಮವನ್ನು ಕೂಡ ನೀಡಿದೆ ಮತ್ತು ಈ ಎಲ್ಲಾ ಡಾಕ್ಯುಮೆಂಟ್ಗಳು ಸರಿಯಾಗಿ ಇದ್ದಲ್ಲಿ ಅಂತವರಿಗೆ ಈ ಸಾರಿಯ 7ನೇ ಕಂತಿನ ಹಣವು ಮಾರ್ಚ್ 25ರ ಒಳಗಾಗಿ ಕ್ರೇಡಿಟ್ ಆಗುತ್ತದೆ ಎಂದು ತಿಳಿಸಲಾಗಿದೆ.

ಇದರ ಜೊತೆಗೆ ಹಣ ಬರದೇ ಇರುವ ಮಹಿಳೆಯರು ಒಮ್ಮೆ ತಮ್ಮ ಡಾಕ್ಯುಮೆಂಟ್ಗಳನ್ನು ವೆರಿಫಿಕೇಶನ್ ಮಾಡಿಸಿಕೊಳ್ಳಬೇಕೆಂದು ಸರ್ಕಾರವು ಸೂಚಿಸಿದೆ.

advertisement

Leave A Reply

Your email address will not be published.