Karnataka Times
Trending Stories, Viral News, Gossips & Everything in Kannada

Airtel: ಏರ್ಟೆಲ್ ಬಿಗ್ ಆಫರ್; 84 ದಿನಗಳ ಅವಧಿಗೆ ಉಚಿತ 5G ಡಾಟಾ ಹಾಗೂ 15 ಓಟಿಟಿ ಪ್ರವೇಶ!

advertisement

ಭಾರತೀಯ ಟೆಲಿಕಾಂ ಕಂಪನಿಗಳಾಗಿರುವ ಜಿಯೋ (Jio) ಹಾಗೂ ಏರ್ಟೆಲ್ (Airtel) ಇತ್ತೀಚಿನ ದಿನಗಳಲ್ಲಿ ಪೈಪೋಟಿ ದರದಲ್ಲಿ ರಿಚಾರ್ಜ್ ಪ್ಲಾನ್ ಒದಗಿಸುತ್ತಿವೆ. 84 ದಿನಗಳ ಮಾನ್ಯತೆ ಹೊಂದಿರುವ ಏರ್ಟೆಲ್ ನ ಈ ರಿಚಾರ್ಜ್ ಪ್ಲಾನ್ ಬಗ್ಗೆ ನೀವು ತಿಳಿದರೆ ಖಂಡಿತವಾಗಿಯೂ ತಕ್ಷಣ ರೀಚಾರ್ಜ್ ಮಾಡಿಕೊಳ್ಳುತ್ತಿರಿ. ಅದರಲ್ಲೂ ಜಿಯೋ ಗೆ ಠಕ್ಕರ್ ಕೊಡುವುದಕ್ಕಾಗಿಯೇ ಏರ್ಟೆಲ್ ಈ ಹೊಸ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದೆ ಎನ್ನಬಹುದು.

84 ದಿನಗಳ ಮಾನ್ಯತೆ ಹೊಂದಿರುವ ಏರ್ಟೆಲ್ ರಿಚಾರ್ಜ್ ಪ್ಲಾನ್:

ರಿಲಯನ್ಸ್ ಜಿಯೋ (Jio) ಹಾಗೂ ಏರ್ಟೆಲ್ (Airtel) ನಡುವೆ ರಿಚಾರ್ಜ್ ಪ್ಲಾನ್ ವಿಚಾರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ಹೇಳಬಹುದು. ಕೇವಲ 999 ರೂಪಾಯಿಗಳ ಈ ಯೋಜನೆಯಲ್ಲಿ ನೀವು ಅತಿ ಹೆಚ್ಚು ಪ್ರಯೋಜನ ಪಡೆದುಕೊಳ್ಳಲಿದ್ದೀರಿ. ಹಾಗಾದ್ರೆ ಯಾವೆಲ್ಲಾ ಪ್ರಯೋಜನಗಳು ಸಿಗಲಿದೆ ಗ್ರಾಹಕರಿಗೆ ಯಾವ ರೀತಿ ಅನುಕೂಲ ಆಗಲಿದೆ ಎನ್ನುವುದನ್ನು ನೋಡೋಣ.

ಜಿಯೋದ 999 ರೂಪಾಯಿಗಳ ರಿಚಾರ್ಜ್ ಪ್ಲಾನ್:

advertisement

ರಿಲಯನ್ಸ್ ಜಿಯೋ (JIo) 84 ದಿನಗಳ ಮಾನ್ಯತೆ ಹೊಂದಿರುವ 999 ರೂಪಾಯಿಗಳ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಪ್ರತಿ ದಿನ 3 ಜಿಬಿ ಡಾಟಾ ಪಡೆಯಬಹುದು ಇದು ಅನಿಯಮಿತ 5G Data ಆಗಿರುತ್ತದೆ. ಇತರ ಪ್ರಯೋಜನಗಳನ್ನು ನೋಡುವುದಾದರೆ ಅನಿಯಮಿತ ಕರೆ ಸೌಲಭ್ಯ ಹಾಗೂ ಉಚಿತ 100 ಎಸ್ಎಂಎಸ್ ಪಡೆಯಬಹುದು. ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೋವ್ಡ್ ಗೆ ಉಚಿತ ಪ್ರವೇಶ ಪಡೆಯಬಹುದು. ಆದರೆ ಇದು ಕಾಂಪ್ಲಿಮೆಂಟರಿ ಜಿಯೋ ಸಿನಿಮಾ ಚಂದದಾರಿಕೆ ಆಗಿರುವುದರಿಂದ ಜಿಯೋ ಸಿನಿಮಾ ಪ್ರೇಮಿಯಂ ಇದರಲ್ಲಿ ಸೇರ್ಪಡೆಗೊಳ್ಳುವುದಿಲ್ಲ.

ಏರ್ಟೆಲ್ 999 ರೂಪಾಯಿಗಳ ರಿಚಾರ್ಜ್ ಪ್ಲಾನ್:

 

 

ಇದು ಏರ್ಟೆಲ್ (Airtel) ನ 84 ದಿನಗಳ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್ ಪ್ಲಾನ್ ಆಗಿದೆ. 5G ನೆಟ್ವರ್ಕ್ ನೊಂದಿಗೆ ಪ್ರತಿದಿನ 2.5 GB ಡಾಟಾ ಪಡೆಯಬಹುದು. ಇದರ ಜೊತೆಗೆ ಅನಿಯಮಿತ ಕರೆ ಸೌಲಭ್ಯ ಹಾಗೂ ಪ್ರತಿದಿನ 100 ಉಚಿತ ಎಸ್ಎಂಎಸ್ ಗಳನ್ನು ನೀಡಲಾಗುತ್ತದೆ. ಇಷ್ಟಕ್ಕೆ ಆಫರ್ ಮುಗೀತು ಅನ್ಕೋಬೇಡಿ, ಏರ್ಟೆಲ್ ಎಕ್ಸ್ಟ್ರೀಮ್ ಪ್ಲೇ ಗೆ ಉಚಿತ ಚಂದಾದಾರಿಕೆ ಪಡೆದುಕೊಳ್ಳುತ್ತೀರಿ. ಸೋನಿ ಲೀವ್ ಹಾಗೂ ಏರೋಸ್ ನೌ ಸೇರಿದಂತೆ 15ಕ್ಕೂ ಹೆಚ್ಚು ಓಟಿಟಿ ಅಪ್ಲಿಕೇಶನ್ ಗಳಿಗೆ ಪ್ರವೇಶ ಪಡೆಯಬಹುದು. ಇನ್ನೊಂದು ಪ್ರಮುಖ ಆಫರ್ ಅಂದ್ರೆ ಅಮೆಜಾನ್ ಪ್ರೈಮ್ ವಿಡಿಯೋಗೆ 84 ದಿನಗಳವರೆಗೆ ಉಚಿತ ಸದಸ್ಯತ್ವ ಪಡೆದುಕೊಳ್ಳಬಹುದು.
ರಿಲಯನ್ಸ್ ಜಿಯೋದ 999 ರೂಪಾಯಿಗಳ ರಿಚಾರ್ಜ್ ಪ್ಲಾನ್ ಗೆ ಹೋಲಿಕೆ ಮಾಡಿದರೆ ಏರ್ಟೆಲ್ 999 ರೂಪಾಯಿಗಳ ರಿಚಾರ್ಜ್ ಯೋಜನೆ ಹೆಚ್ಚು ಸೂಕ್ತ ಹಾಗೂ ಪ್ರಯೋಜನಕಾರಿ ಎನಿಸುತ್ತದೆ.

advertisement

Leave A Reply

Your email address will not be published.