Karnataka Times
Trending Stories, Viral News, Gossips & Everything in Kannada

BHIM UPI: UPI ಪೇಮೆಂಟ್ ಬಿಗ್ ಆಫರ್; ಪ್ರತಿ ಪಾವತಿ ಮೇಲೆ ಪಡೆಯಿರಿ 750 ಕ್ಯಾಶ್ ಬ್ಯಾಕ್!

advertisement

ಅದು ಒಂದು ರೂಪಾಯಿ ಪೇಮೆಂಟ್ ಇರಬಹುದು ಅಥವಾ ಲಕ್ಷ ರೂಪಾಯಿಗಳ ಪೇಮೆಂಟ್ ಆಗಿರಬಹುದು, ಯಾವ ಪೇಮೆಂಟ್ ಆದ್ರೂ ಸರಿ.. ಈಗ ಹಣ ಪಾವತಿ ಮಾಡುವುದು ಎಷ್ಟು ಸುಲಭ ಅಂದ್ರೆ ಕುಳಿತಲೇ ಈ ಕೆಲಸವನ್ನು ಕ್ಷಣಮಾತ್ರದಲ್ಲಿ ಮಾಡಬಹುದು.

ಹೌದು, ಇಂದು ಪ್ರತಿಯೊಂದು ಪೇಮೆಂಟ್ ಗೂ ಕೂಡ ನಾವು ಯಾವುದೇ ಬ್ಯಾಂಕ್ ಅಥವಾ ಏಜೆಂಟ್ ಗಳನ್ನ ಅವಲಂಬಿಸಿಲ್ಲ ಯುಪಿಐ ಮೂಲಕ ಯಾವುದೇ ರೀತಿಯ ಪೇಮೆಂಟ್ ಆದ್ರು ಸರಿ ಅದನ್ನ ತಕ್ಷಣ ಮಾಡಿ ಮುಗಿಸಿಕೊಳ್ಳಬಹುದು. ಸಣ್ಣ ಸಣ್ಣ ವ್ಯಾಪಾರಿಗಳಿಂದ ಹಿಡಿದು ಮಾರುಕಟ್ಟೆಯಲ್ಲಿ ಹೇಳಿರುವ ದೊಡ್ಡ ಅಂಗಡಿಯವರೆಗೆ ಎಲ್ಲಾ ಕಡೆ ಇಂದು UPI Payment ವ್ಯವಸ್ಥೆ ಇಡಲಾಗಿದೆ. ಯುಪಿಐ ಮೂಲಕ ಪಾವತಿ ಮಾಡುವುದರಿಂದ ಸಮಯ ಉಳಿತಾಯ ಆಗುವುದು ಮಾತ್ರವಲ್ಲದೆ ಹಣ ಕೂಡ ಉಳಿತಾಯ ಆಗಬಹುದು.

ಯುಪಿಐನಿಂದ ಸಿಗುತ್ತೆ ಕ್ಯಾಶ್ ಬ್ಯಾಕ್?

UPI Payment ಗಾಗಿ ನಾವು ಥರ್ಡ್ ಪಾರ್ಟಿ ಪೇಮೆಂಟ್ ಅಪ್ಲಿಕೇಶನ್ ಗಳಾಗಿರುವ PhonePe ಅಥವಾ Google Pay, Paytm ಹೀಗೆ ಮೊದಲಾದ ಅಪ್ಲಿಕೇಶನ್ ಗಳನ್ನು ಬಳಸುತ್ತೇವೆ. ಅದರಲ್ಲೂ ಭಾರತೀಯ ಸರ್ಕಾರದ ಅಧಿಕೃತ ಪೇಮೆಂಟ್ ಸೇವೆ ಆಗಿರುವ BHIM ಅಪ್ಲಿಕೇಶನ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಸಲ್ಪಡುತ್ತಿದೆ.

BHIM ಪೇಮೆಂಟ್ ಅಪ್ಲಿಕೇಶನ್ ನಲ್ಲಿ ಕ್ಯಾಶ್ ಬ್ಯಾಕ್ ಪಡೆಯಿರಿ:

 

advertisement

 

BHIM UPI ಪೇಮೆಂಟ್ ಮಾಡಿದ್ರೆ ನೀವು ಪ್ರತಿ ಪೇಮೆಂಟ್ ಗೆ 750ಗಳವರೆಗೆ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಲು ಸಾಧ್ಯವಿದೆ. ಇದು ಸೀಮಿತ ಅವಧಿಯ ಕೊಡುಗೆ ಆಗಿದ್ದು, ನೀವು ಬೇರೆಯವರಿಗೆ ಪೇಮೆಂಟ್ ಮಾಡಿದರೆ ಅಥವಾ ಈ ಅಪ್ಲಿಕೇಶನ್ ಮೂಲಕ ಇಂಧನ ಖರೀದಿ ಮಾಡಿ ಪೇಮೆಂಟ್ ಮಾಡಿದರೆ 1% ನಷ್ಟು ಕ್ಯಾಶ್ಬ್ಯಾಕ್ ಸಿಗುತ್ತದೆ.

ಈ ಸೀಮಿತ ಅವಧಿಯ ಕೊಡುಗೆ ಮಾರ್ಚ್ 31, 2024ರ ವರೆಗೆ ಲಭ್ಯ ಇದೆ ಎಂದು ಕಂಪನಿ ತಿಳಿಸಿದೆ. ಈ ಅಪ್ಲಿಕೇಶನ್ ಬಳಸಿ ನೀವು ನೂರು ರೂಪಾಯಿಗಳ ಪಾವತಿ ಮಾಡಿದರೆ 30 ರೂಪಾಯಿಗಳ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು. ಯಾವುದೇ ರೀತಿಯ ಆಹಾರ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಹಣ ಪಾವತಿ ಮಾಡಿದರೆ ಅಂದರೆ ರೈಲ್ವೆ ಟಿಕೆಟ್ ಬುಕಿಂಗ್, ಟ್ಯಾಕ್ಸಿ, ಬಸ್ ಟಿಕೆಟ್ ಬುಕಿಂಗ್ ಮೊದಲಾದ ಬುಕಿಂಗ್ ಪೇಮೆಂಟ್ ಗೆ ಕ್ಯಾಶ್ ಬ್ಯಾಕ್ ಕೊಡಲಾಗುವುದು.

ಇನ್ನು BHIM UPI ಬಳಕೆಯ ಇತರ ಪ್ರಯೋಜನ ನೋಡುವುದಾದರೆ ನೀವು ಕ್ಯೂಆರ್ ಕೋಡ್ ಬಳಸಿ ಯಾವುದೇ ರೆಸ್ಟೋರೆಂಟ್ ನಲ್ಲಿ ಹಣ ಪಾವತಿ ಮಾಡಿದರೆ ಅದರಿಂದಲೂ ಕೂಡ ಗರಿಷ್ಟ 150 ರೂಪಾಯಿಗಳವರೆಗಿನ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಕೇವಲ ನೂರು ರೂಪಾಯಿಗಳ ಪಾವತಿ ಮಾಡಿ 150 ರೂಪಾಯಿಗಳ ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದಾದ ಅಪರೂಪದ ಆಫರ್ BHIM ಅಪ್ಲಿಕೇಶನ್ ನಲ್ಲಿ ನೀಡಲಾಗಿದೆ. ಇದಕ್ಕಾಗಿ ನೀವು BHIM 3.7 ಲೇಟೆಸ್ಟ್ ವರ್ಷನ್ ಹೊಂದಿರಬೇಕು.

ರೂಪೇ ಕ್ರೆಡಿಟ್ ಕಾರ್ಡ್ ನಲ್ಲಿಯೂ ಸಿಗಲಿದೆ ಕ್ಯಾಶ್ ಬ್ಯಾಕ್:

ರೂಪೆ Credit Card ಬಳಸಿದರೆ 600 ರೂಪಾಯಿಗಳವರೆಗಿನ ಕ್ಯಾಶ್ ಬ್ಯಾಕ್ ನೀಡಲಾಗುವುದು. ಇದಕ್ಕಾಗಿ ನೀವು ರೂಪೇ ಕ್ರೆಡಿಟ್ ಕಾರ್ಡ್ ಅನ್ನು BHIM UPI Payment Application ಜೊತೆಗೆ ಲಿಂಕ್ ಮಾಡಿಕೊಂಡಿರಬೇಕು. ಸೀಮಿತ ಅವಧಿಯ ಈ ಆಫರ್ ಪ್ರಯೋಜನ ಪಡೆದುಕೊಳ್ಳಲು ಈಗಲೇ BHIM ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಕೊಳ್ಳಿ ಹಾಗೂ ಉತ್ತಮ ಕ್ಯಾಶ್ ಬ್ಯಾಕ್ ಪ್ರಯೋಜನ ಪಡೆದುಕೊಳ್ಳಿ.

advertisement

Leave A Reply

Your email address will not be published.