Karnataka Times
Trending Stories, Viral News, Gossips & Everything in Kannada

Gruha Jyothi: ಬಾಡಿಗೆ ನಿವಾಸಿಗಳಿಗೆ ಗೃಹಜ್ಯೋತಿ ಯೋಜನೆ ಬಗ್ಗೆ ಅಪ್ಡೇಟ್, ಹೊಸ ನಿಯಮ ಜಾರಿ!

advertisement

ಗೃಹಜ್ಯೋತಿ ಯೋಜನೆಯನ್ಮು ಕರ್ನಾಟಕ ಸರಕಾರದಲ್ಲಿ ಜಾರಿಗೆ ತಂದಾಗ ಗ್ಯಾರೆಂಟಿ ಯೋಜನೆಯ ಮಾನ್ಯತೆ ಅಧಿಕವಾಗಿತ್ತು. ಗೃಹ ಜ್ಯೋತಿ ಯೋಜನೆ (Gruha Jyothi Scheme) ಮೂಲಕ ಕಡಿಮೆ ಯುನಿಟ್ ಬಳಸುವವರು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗುತ್ತಿದ್ದಾರೆ. 200ಯುನಿಟ್ ವರೆಗೆ ಉಚಿತ ವಿದ್ಯುತ್ ಬಳಕೆಗೆ ಅನುಮತಿ ನೀಡಲಾಗಿದ್ದು ಅದಕ್ಕಿಂತ ಅಧಿಕ ಯುನಿಟ್ ಬಳಸಿದರೆ ಹಣ ಪಾವತಿ ಮಾಡಬೇಕಾಗುತ್ತದೆ. ಅದೇ ರೀತಿ ಆಧಾರ್ ಕಾರ್ಡ್ (Aadhaar Card) ಮೂಲಕ ಗೃಹಜ್ಯೋತಿ ಸೌಲಭ್ಯ ಪಡೆದವರು ಕಾಲ ಕ್ರಮೇಣ ಮನೆ ಬಿಟ್ಟು ಬೇರೆ ಕಡೆಗೆ ತೆರಳಿದವರು ಈಗ ಗೃಹಜ್ಯೋತಿ ಸೌಲಭ್ಯ ಪಡೆಯಲಾಗದೇ ಇರುವವರಿಗೆ ಹೊಸ ದಾದ ಒಂದು ಕ್ರಮ ಬಹಳ ಸಹಕಾರಿ ಆಗಲಿದೆ.

ಬಾಡಿಗೆ ಅಥವಾ ಸ್ವಂತ ಮನೆ ಇದ್ದವರು ಗೃಹಜ್ಯೋತಿ ಸೌಲಭ್ಯ ಪಡೆಯಲು ಅವಕಾಶ ನೀಡಿದ್ದು ಕಾರಣಾಂತರದಿಂದ ಮನೆ ಬಿಟ್ಟು ಹೋದವರು ಹಾಗೂ ಮನೆ ಬದಲಾಯಿಸಿದವರಿಗೆ ಗೃಹಜ್ಯೋತಿ ವಂಚನೆ ಆಗ್ತ ಇದೆ ಎಂಬ ಮಾತು ಕೇಳಿ ಬಂದ ಹಿನ್ನೆಲೆ ಇದಕ್ಕೆ ಇದೀಗ ಪರಿಹಾರ ಕಂಡುಕೊಳ್ಳಲಾಗಿದೆ‌. 200 ಯುನಿಟ್ ಒಳಗೆ ಶೂನ್ಯ ಬಿಲ್ ಪಾವತಿಗೆ ಅನುಮತಿಸಲಾಗಿದ್ದು ಬಡವರ್ಗದ ಜನಕ್ಕೆ ಈ ಒಂದು ನಿರ್ಧಾರ ನಿಟ್ಟುಸಿರು ಬಿಡುವಂತಾಗಿದೆ‌.

ಯಾವುದು ಆ ಹೊಸ ನಿರ್ಣಯ:

 

 

advertisement

ಈಗಾಗಲೇ ಒಂದು ಮನೆಯಲ್ಲಿ ಬಾಡಿಗೆ ಇದ್ದು ಬಾಡಿಗೆ ಮನೆ ಬದಲಾಯಿಸಿದ್ದಾಗ ನೀವು ಗೃಹಜ್ಯೋತಿ (Gruha Jyothi) ಸೌಪಭ್ಯವನ್ನು ಹೊಸ ಮನೆಯಲ್ಲಿ ಪಡೆಯಬೇಕೆಂದಾದರೆ ಕೆಲ ಅಗತ್ಯ ಕ್ರಮ ನೀವು ಅನುಸರಿಸಬೇಕು. ಹಳೆಯ ಮನೆಗೆ RR ನೋಂದಾಯಿಸಿಕೊಂಡಿದ್ದರೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇಷ್ಟು ಸಮಯದ ವರೆಗೆ ಅವಕಾಶ ಇದ್ದಿರಲಿಲ್ಲ ಆದರೆ ಈಗ ಅದಕ್ಕೆ ಅವಕಾಶ ನೀಡಲು ಆದೇಶ ಹೊರಡಿಸಲಾಗಿದೆ.

ಆದೇಶದಲ್ಲಿ ಏನಿದೆ?

ಗೃಹಜ್ಯೋತಿ ಸೌಲಭ್ಯದಿಂದ ಬಾಡಿಗೆ ಮನೆ ವಾಸಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಬಹುತೇಕರು ಇಂಧನ ಇಲಾಖೆಗೆ ಪರ್ಯಾಯ ವ್ಯವಸ್ಥೆ ಜಾರಿ ಮಾಡಲು ತಿಳಿಸಲಾಗಿದೆ. ಹಾಗಾಗಿ ಇಂಧನ ಇಲಾಖೆಯ ಕಾರ್ಯದರ್ಶಿಗಳಿಗೆ ಇಲಾಖೆ ವತಿಯಿಂದ ಆದೇಶ ನೀಡಲಾಗಿದೆ. ಆ ಆದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಡಿ ಲಿಂಕ್ ಮಾಡಲು ಅವಕಾಶ ನೀಡಬೇಕು ಅದರ ವ್ಯವಸ್ಥೆಯೊಂದು ಅಗತ್ಯ ಇದೆ ಎಂದು ಹೇಳಲಾಗುತ್ತದೆ.

ನಿಯಮ ಜಾರಿ:

ಗೃಹಜ್ಯೋತಿ ಯೋಜನೆ (Gruha Jyothi Scheme) ಫಲಾನುಭವಿಗಳು ಬಾಡಿಗೆ ಮನೆ ಬದಲಾಯಿಸಿದರೆ ಹಳೆ ಮನೆ ವಿಳಾಸದ ಗೃಹಜ್ಯೋತಿ ಸೌಲಭ್ಯ ರದ್ದು ಮಾಡಿ ಹೊಸ ಮನೆ ವಿಳಾಸಕ್ಕೆ ಗೃಹಜ್ಯೋತಿ ಸೌಲಭ್ಯ ಪಡೆಯಬಹುದು. ಬಾಡಿಗೆ ಮನೆ ಆರ್ ಆರ್ ಸಂಖ್ಯೆ ಆಧಾರ್ ಜೊಡಣೆ ಹೊಸದಾಗಿ ನೋಂದಣಿ ಮಾಡುವ ಮೂಲಕ ಸೌಲಭ್ಯ ಪಡೆಯಬಹುದು. ಇದು ಹೆಚ್ಚಾಗಿ ನಗರ ವಾಸಿಗಳಿಗೆ ಬಹಳ ಉಪಯೋಗ ಆಗಲಿದೆ.

advertisement

Leave A Reply

Your email address will not be published.