Karnataka Times
Trending Stories, Viral News, Gossips & Everything in Kannada

Post Office Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬಡ್ಡಿಯಿಂದಲೇ ಗಳಿಸಬಹುದು ಲಕ್ಷಗಟ್ಟಲೆ ಹಣ!

advertisement

ದಿನದಿಂದ ದಿನಕ್ಕೆ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗುತ್ತಿದೆ. ಇತ್ತೀಚಿನ ದಿನದ ವಿದ್ಯಮಾನಗಳನ್ನು ನೋಡಿದರೆ ಮುಂಬರುವ ದಿನಗಳಲ್ಲಿಯೂ ಕೂಡ ಹಣದುಬ್ಬರದ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ. ಇದಕ್ಕಾಗಿ ಈಗಿಂದಲೇ ಸಣ್ಣ ಉಳಿತಾಯ ಯೋಜನೆ (Samll Saving Scheme) ಯಲ್ಲಿ ಹೂಡಿಕೆ ಮಾಡಿ ಆರ್ಥಿಕವಾಗಿ ಸಮಸ್ಯೆ ಆಗದಂತೆ ಭವಿಷ್ಯವನ್ನು ರೂಪಿಸಿಕೊಳ್ಳುವುದು ಒಳ್ಳೆಯದು.

ಹಾಗಾದ್ರೆ ನೀವು ಕೂಡ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದ್ದೀರಾ ಅಪಾಯ ಮುಕ್ತ ಹೂಡಿಕೆಗೆ ನಾವು ಒಂದು ಸೂಕ್ತವಾಗಿರುವ ಯೋಜನೆಯ ನಿಮಗೆ ಪರಿಚಯಿಸುತ್ತಿದ್ದೇವೆ. ಅದುವೇ ಅಂಚೆ ಕಚೇರಿಯ ಸಮಯ ಠೇವಣಿ ಯೋಜನೆ.

Post Office Time Deposit Scheme:

ಟೈಮ್ ಡೆಪಾಸಿಟ್ ಅಥವಾ ಸಮಯ ಠೇವಣಿ ಹೂಡಿಕೆ ಅತ್ಯುತ್ತಮ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ (Post Office Scheme) ಯಲ್ಲಿ ಹೂಡಿಕೆ ಮಾಡಿದರೆ, ವೃದ್ಧಾಪ್ಯದ ಸಮಯದಲ್ಲಿ ಕೇವಲ ಬಡ್ಡಿಯಿಂದ ಬರುವ ಹಣದಿಂದಲೇ ಜೀವನ ನಡೆಸಬಹುದು.

ಸಮಯ ಠೇವಣಿಯಿಂದ ಭಾರಿ ಲಾಭ:

 

 

advertisement

ಅಂಚೆ ಕಚರಿಯ ಸಮಯ ಠೇವಣಿ (Post Office Time Deposit Scheme) ಯಲ್ಲಿ ಒಂದು ವರ್ಷಗಳಿಂದ ಐದು ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಇಲ್ಲಿ ತಿಂಗಳಿಗೆ, ಮೂರು ತಿಂಗಳಿಗೆ, ಅರ್ಧವಾರ್ಷಿಕಕ್ಕೆ ಹಾಗೂ ವಾರ್ಷಿಕ ಪ್ರೀಮಿಯಂ ಪಾವತಿ ಮಾಡಲು ಅವಕಾಶ ಇದ್ದು ನಿಮಗೆ ಅನುಕೂಲವಾದ ಪ್ರೀಮಿಯಂ ಅವಧಿಯನ್ನು ಆಯ್ದುಕೊಳ್ಳಬಹುದು.

ಟೈಮ್ ಠೇವಣಿ ಹೂಡಿಕೆಗೆ ಸಿಗುವ ಬಡ್ಡಿ:

  • ಒಂದು ವರ್ಷದ ಹೂಡಿಕೆಗೆ 6.8% ಬಡ್ಡಿ
  • ಎರಡು ವರ್ಷದ ಹೂಡಿಕೆಗೆ 6.9% ಬಡ್ಡಿ
  • ಐದು ವರ್ಷಗಳ ಹೂಡಿಕೆಗೆ 7.5% ಬಡ್ಡಿ

ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಎಷ್ಟು ಹಣ ಹಿಂಪಡೆಯಬಹುದು ಗೊತ್ತಾ?

ಐದು ವರ್ಷಗಳ ಅವಧಿಗೆ 5 ಲಕ್ಷ ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿ. 7.5% ಬಡ್ಡಿ ದರದಲ್ಲಿ, ಐದು ವರ್ಷಗಳ ನಂತರ ನೀವು ಪಡೆಯಬಹುದಾದ ಹಣ 7,24,149 ರೂಪಾಯಿಗಳು. ಇಲ್ಲಿ 5 ಲಕ್ಷ ರೂಪಾಯಿಗಳು ನಿಮ್ಮ ಹೂಡಿಕೆ ಹಾಗೂ ಉಳಿದ ಹಣ ಬಡ್ಡಿಯಿಂದ ಸಿಗುವಂತದ್ದು.

ನೀವು ಮೆಚುರಿಟಿಯ ನಂತರವೂ ಮತ್ತೆ ಐದು ವರ್ಷಗಳ ಅವಧಿಗೆ ಈ ಹಣವನ್ನು ಠೇವಣಿ ಇಟ್ಟರೆ 10,00,799 ರೂಪಾಯಿಗಳನ್ನು ಹಿಂಪಡೆಯುತ್ತೀರಿ. ಅಂದರೆ ಕೇವಲ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ 10 ಲಕ್ಷ ರೂಪಾಯಿಗಳನ್ನು ಕೆಲವೇ ವರ್ಷಗಳಲ್ಲಿ ಹಿಂಪಡೆಯಲು ಸಾಧ್ಯವಿದೆ.

advertisement

Leave A Reply

Your email address will not be published.