Karnataka Times
Trending Stories, Viral News, Gossips & Everything in Kannada

Post Office Time Deposit Scheme: ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬಡ್ಡಿ ಹಣದಲ್ಲಿಯೇ ಜೀವನ ಕಳೆಯಬಹುದು ನೋಡಿ!

advertisement

ಎಲ್ಲಿ ನಮ್ಮ ಉಳಿತಾಯದ ಹಣಕ್ಕೆ ಹೆಚ್ಚು ಆದಾಯ ಸಿಗುತ್ತದೆಯೋ, ಎಲ್ಲಿ ಯಾವುದೇ ಅಪಾಯವು ಇಲ್ಲದೆ ಉಳಿತಾಯ ಮಾಡಲು ಸಾಧ್ಯ ಇದೆಯೋ ಅಂತಹ ಸ್ಥಳದಲ್ಲಿ ಹೂಡಿಕೆ ಮಾಡಲು ಜನ ಬಯಸುತ್ತಾರೆ. ಹೀಗೆ ನೀವು ಅಪಾಯ ಮುಕ್ತ ಹೂಡಿಕೆಗಾಗಿ ಉತ್ತಮ ಸ್ಥಳ ಹುಡುಕುತ್ತಿದ್ದರೆ ಪೋಸ್ಟ್ ಆಫೀಸ್ ನಂತಹ ಪ್ಲೇಸ್ ಇನ್ನೊಂದಿಲ್ಲ.

ಹೌದು, ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ (Post Office) ಸಾಕಷ್ಟು ಉತ್ತಮ ಸೇವಿಂಗ್ ಸ್ಕೀಮ್ ಗಳನ್ನು ಪರಿಚಯಿಸುತ್ತಿದೆ. ಈ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದರೆ ಉತ್ತಮ ಆದಾಯ ಪಡೆದುಕೊಳ್ಳಬಹುದು ಅಂತಹ ಯೋಜನೆಗಳಲ್ಲಿ ಪೋಸ್ಟ್ ಆಫೀಸ್ನ ಸಮಯ ಠೇವಣಿ ಯೋಜನೆ, ಕೂಡ ಒಂದು.

Post Office Time Deposit Investment:

 

 

ಅಂಚೆ ಕಚೇರಿಯ ಟೈಮ್ ಠೇವಣಿ (Post Office Time Deposit Scheme) ಯಲ್ಲಿ ಹೂಡಿಕೆ ಮಾಡಿದರೆ, 6.9% ನಿಂದ 7.5% ವರೆಗೆ ಬಡ್ಡಿ ಪಡೆಯಬಹುದು. ಟೈಮ್ ಠೇವಣಿಯಲ್ಲಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಹೂಡಿಕೆಗೆ ಅವಕಾಶ ಇರುತ್ತದೆ ಅಂದರೆ ನೀವು ಒಂದು ವರ್ಷ, ಎರಡು ವರ್ಷ, ಮೂರು ವರ್ಷ, ಐದು ವರ್ಷ ಹೀಗೆ ಬೇರೆ ಬೇರೆ ಅವಧಿವರಿಗೆ ಹೂಡಿಕೆ ಮಾಡಬಹುದು.

advertisement

ಟೈಮ್ ಠೇವಣಿ ಅಲ್ಲಿ ಯಾರು ಹೂಡಿಕೆ ಮಾಡಬಹುದು?

  • ಯಾವುದೇ ಭಾರತೀಯ ಪ್ರಜೆ ಹೂಡಿಕೆ ಮಾಡಬಹುದು
  • ಮೂವರು ವಯಸ್ಕರು ಜಂಟಿಯಾಗಿ ಖಾತೆ ತೆರೆದು ಹೂಡಿಕೆ ಮಾಡಬಹುದು.
  • ಹತ್ತು ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಪಾಲಕರು ಖಾತೆ ತೆರೆಯಬಹುದು.
  • ಕನಿಷ್ಠ ಹೂಡಿಕೆಯ ಮೊತ್ತ 1,000 ರೂ.

ಹೂಡಿಕೆ ಮಾಡಿದರೆ ಸಿಗುವ ಬಡ್ಡಿ ದರ:

ಹೂಡಿಕೆ ಮಾಡಿದ್ರೆ ಒಂದು ವರ್ಷದ ಹೂಡಿಕೆಗೆ 6.9% ನಷ್ಟು ಬಡ್ಡಿ ಸಿಗುತ್ತದೆ. ಎರಡು ವರ್ಷ ಹೂಡಿಕೆ ಮಾಡಿದರೆ 7% ನಷ್ಟು ಬಡ್ಡಿ ಸಿಗುತ್ತದೆ. ಮೂರು ವರ್ಷದ ಹೂಡಿಕೆಗೆ 7.1% ಬಡ್ಡಿ ಹಾಗೂ ಐದು ವರ್ಷದ ಹೂಡಿಕೆಗೆ 7.5% ನಷ್ಟು ಬಡ್ಡಿ ಪಡೆಯಬಹುದು. ಇನ್ನು ಐದು ವರ್ಷಗಳ ಅವಧಿಯ ಹೂಡಿಕೆಗೆ 1961 ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದು. ಇದಕ್ಕಿಂತ ಕಡಿಮೆ ಅವಧಿಯ ಹೂಡಿಕೆಗೆ ತೆರಿಗೆ ಪ್ರಯೋಜನ ಸಿಗುವುದಿಲ್ಲ. ಹಾಗೂ ಪಾಲಿಸಿ ಮುಕ್ತಾಯಕ್ಕಿಂತ ಮೊದಲೇ ಹಣ ಹಿಂಪಡೆಯುವಂತಿಲ್ಲ, ಹಿಂಪಡೆದರೆ ದಂಡ ವಿಧಿಸಲಾಗುತ್ತದೆ.

ಎಷ್ಟು ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ ಗೊತ್ತಾ?

ಟೈಮ್ ಠೇವಣಿಯಲ್ಲಿ ನೀವು ಐದು ಲಕ್ಷ ರೂಪಾಯಿಗಳನ್ನು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿ, ಐದು ವರ್ಷಗಳಿಗೆ 7.5% ಬಡ್ಡಿ ದರದಲ್ಲಿ ನಿಮಗೆ ಸಿಗುವ ಬಡ್ಡಿ ಮೊತ್ತ 2,24,974 ರೂ. ಅಂದರೆ ಐದು ವರ್ಷಗಳಲ್ಲಿ ನಿಮಗೆ ಸಿಗುವ ಒಟ್ಟು ಮೊತ್ತ, 7,24,974 ರೂ. ಗಳು. ಇನ್ನು ಮೂರು ವರ್ಷಗಳಿಗೆ ಐದು ಲಕ್ಷ ಹೂಡಿಕೆ ಮಾಡಿದ್ರೆ, ನಿಮಗೆ ಸಿಗುವ ಒಟ್ಟು ಮೊತ್ತ 6,17,538 ರೂ. ಗಳು. 1,17,538 ರೂ. ಬಡ್ಡಿಯಾಗಿರುತ್ತದೆ.

advertisement

Leave A Reply

Your email address will not be published.