Karnataka Times
Trending Stories, Viral News, Gossips & Everything in Kannada

7th Pay Commission: ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, ನಾಳೆಯ ಬಜೆಟ್ ನಲ್ಲಿ ಸಿಗಲಿದೆ 3 ಬಂಪರ್ ಗಿಫ್ಟ್!

advertisement

ದೇಶದ ಎಲ್ಲರ ದೃಷ್ಟಿ ಈಗ ಕೇಂದ್ರ ಬಜೆಟ್ ಮೇಲಿದೆ. ನಾಳೆ ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Minister Nirmala Sitharaman), ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಇದರಲ್ಲಿ ಯಾರಿಗೆಲ್ಲ ಹೆಚ್ಚು ಪ್ರಯೋಜನ ಆಗಲಿದೆ ಎನ್ನುವುದರ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ.

ಫೆಬ್ರವರಿ ಒಂದು, 2024 ಮಧ್ಯಂತರ ಬಜೆಟ್ ಘೋಷಣೆ ಆಗಲಿದೆ. ಸದ್ಯದಲ್ಲಿಯೇ ಲೋಕಸಭಾ ಚುನಾವಣೆ ಕೂಡ ನಡೆಯಲಿದ್ದು, ಬಜೆಟ್ ನಲ್ಲಿ ಸರ್ಕಾರಿ ನೌಕರರಿಗೆ ಪ್ರಯೋಜನ ಆಗುವಂತಹ ಕೆಲವು ನಿರ್ಣಯಗಳನ್ನು ಸರ್ಕಾರ ತೆಗೆದುಕೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರು ತಮ್ಮ ಸಂಬಳ ಹೆಚ್ಚಿಸಬೇಕು ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ ಇದೀಗ ಕೇಂದ್ರ ಬಜೆಟ್ ನತ್ತ ಎಲ್ಲರ ಚಿತ್ತ ಎನ್ನುವಂತಾಗಿದೆ.

 

ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ ಈ ಮೂರು ಬಂಪರ್ ಗಿಫ್ಟ್:

  • ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವುದು (Increasing the Fitment Factor)
  • 8th Pay Commission
  • 18 ತಿಂಗಳ ಡಿಎ ಬಾಕಿ ಕೊಡುವುದು (Payment of 18 Months DA Arrears)

advertisement

ಫಿಟ್ ಮೆಂಟ್ ಅಂಶವನ್ನು ಹೆಚ್ಚಿಸುವುದು:

ಕೇಂದ್ರ ಬಜೆಟ್ 2024ರಲ್ಲಿ Fitment ಅಂಶವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದನ್ನು ಹೆಚ್ಚಿಸಿದರೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 18,000 ಗಳಿಂದ 26,000ಗಳಿಗೆ ಏರಿಕೆ ಆಗಬಹುದು. ಈ ರೀತಿ ಆದರೆ ನೌಕರರ ಬಹುದಿನದ ವೇತನ (7th Pay Commission) ಪರಿಷ್ಕರಣೆ ಬೇಡಿಕೆ ಈಡೇರಬಹುದು.

ಎಂಟನೇ ವೇತನ ಆಯೋಗದ ಕುರಿತು:

ನಾಳೆ ಅಂದರೆ ಫೆಬ್ರವರಿ ಒಂದು 2024 ಕೇಂದ್ರ ಬಜೆಟ್ ಮಂಡನೆ ಆಗದಿದ್ದು, ಇದರಲ್ಲಿ 8ನೇ ವೇತನ ಆಯೋಗ (8th Pay Commission) ದ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಎಂಟನೇ ಆಯೋಗ ಜಾರಿಗೆ ಬಂದರೆ ಸಣ್ಣ ಪುಟ್ಟ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ವೇತನ ಜಾಸ್ತಿಯಾಗಲಿದೆ. ಆದರೆ ಈ ಹಿಂದೆ 8ನೇ ವೇತನ ಆಯೋಗ ಜಾರಿಗೆ ತರುವ ಬಗ್ಗೆ ಸದ್ಯ ಸರ್ಕಾರ ತೀರ್ಮಾನಿಸಿಲ್ಲ ಎಂದು ಮಾಹಿತಿ ಲಭ್ಯವಾಗಿತ್ತು. ಆದರೂ ಚುನಾವಣಾ ವರ್ಷ ಆಗಿರುವುದರಿಂದ ಸ್ವಲ್ಪಮಟ್ಟಿಗೆ ನಿರೀಕ್ಷೆ ಇದೆ.

18 ತಿಂಗಳ ಬಾಕಿ ಇರುವ ಡಿಎ ವಿತರಣೆ:

ವರ್ಷದಲ್ಲಿ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈ ತಿಂಗಳಿನಲ್ಲಿ ನೌಕರರ ಡಿಎ ಯನ್ನು ಸರ್ಕಾರ ಹೆಚ್ಚಿಸುತ್ತದೆ. ಆದರೆ 2020 ಜನವರಿ ಹಾಗೂ 2021 ಜೂನ್ ತಿಂಗಳಿನವರೆಗೆ ಕೋವಿಡ್ ಸಮಯ ಆಗಿದ್ದರಿಂದ ತುಟ್ಟಿ ಭತ್ಯೆ ಹೆಚ್ಚಳ ಮಾಡಿಲ್ಲ. ಆದರೆ ಜುಲೈ 2021ಕ್ಕೆ 11% ನಷ್ಟು ತುಟ್ಟಿ ಭತ್ಯೆ ಹೆಚ್ಚಿಸಲಾಗಿತ್ತು. ಅಲ್ಲಿಗೆ 17% ನಷ್ಟು ಇದ್ದ ತುಟ್ಟಿ ಭತ್ಯೆ 11% ಹೆಚ್ಚಳವಾಗಿ, 28% ನಷ್ಟು ತುಟ್ಟಿ ಭತ್ಯೆ ನೀಡಲಾಗಿದೆ. ಆದರೆ ಈಗ ಬಾಕಿ ಇರುವ 18 ಡಿಎ ವಿತರಣೆ ಮಾಡಲಾಗುವುದೇ ಎನ್ನುವ ನಿರೀಕ್ಷೆ ನೌಕರರಲ್ಲಿ ಇದೆ.

ಸರ್ಕಾರಿ ನೌಕರರ ಎಲ್ಲ ನಿರೀಕ್ಷೆಗಳು ಈಡೇರಲಿವೆಯೇ ಎನ್ನುವುದನ್ನು ತಿಳಿಯಲು ನಾಳೆಯ ಬಜೆಟ್ ಮಂಡನೆವರೆಗೂ ಕಾಯಬೇಕಿದೆ.

advertisement

Leave A Reply

Your email address will not be published.