Karnataka Times
Trending Stories, Viral News, Gossips & Everything in Kannada

Krishna Byre Gowda: ಸರ್ಕಾರಿ ಜಾಗದಲ್ಲಿ ಮನೆ ಹಾಗೂ ದಾರಿ ಮಾಡಿಕೊಂಡವರಿಗೆ ಮಹತ್ವದ ಆದೇಶ!

advertisement

ರಾಜ್ಯ ಕಂದಾಯ ಸಚಿವ ಶ್ರೀ ಕೃಷ್ಣ ಬೈರೇಗೌಡ (Krishna Byre Gowda) ಅವರು, ಸರ್ಕಾರಿ ಜಮೀನಿನಲ್ಲಿ ಹೇಳದೆ ಕೇಳದೆ ದಾರಿ ಮಾಡಿಕೊಂಡು ಬಳಕೆ ಮಾಡುತ್ತಿರುವ ಜನರಿಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ಈಗಾಗಲೇ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅಂತಹ ಜಮೀನನ್ನು ಹಿಂಪಡೆಯಲು ಸರ್ಕಾರ ಬೀಟ್ ವ್ಯವಸ್ಥೆ ಜಾರಿಗೆ ತಂದಿದೆ. ಇದರ ಜೊತೆಗೆ ಈಗ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ದಾರಿ ನಿರ್ಮಾಣ ಮಾಡಿಕೊಂಡಿದ್ದರೆ ಆ ದಾರಿಯನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಮಾಹಿತಿ ನೀಡಿದ್ದಾರೆ.

ಸರ್ಕಾರಿ ದಾರಿ ತೆರವು ಕೆಲಸ ಆರಂಭ:

 

 

ಸರ್ಕಾರಿ ದಾರಿ ಒತ್ತುವರಿ ಆಗಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಇದರ ಹಿನ್ನೆಲೆಯಲ್ಲಿ ನಕ್ಷೆಯಲ್ಲಿ ದಾರಿ ಒತ್ತುವರಿ ಆಗಿದ್ದು ಕಂಡು ಬಂದರೆ ಅಂತವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಕೂಡಲೇ ದಾರಿ ತೆರವು ಕಾರ್ಯ ನಡೆಸಲಾಗುತ್ತದೆ. ಈ ತೆರವು ಕಾರ್ಯದಲ್ಲಿ ಯಾವುದೇ ಅಧಿಕಾರಿಗಳು ಹಸ್ತಕ್ಷೇಪ ಮಾಡುವಂತಿಲ್ಲ. ಯಾವುದೇ ನೆಪ ಒಡ್ಡಿ ತೆರವು ಕಾರ್ಯವನ್ನ ಮುಂದೂಡುವಂತಿಲ್ಲ.

advertisement

ಕೃಷಿ ಚಟುವಟಿಕೆಗೆ ದಾರಿ ಬಳಸಿಕೊಂಡಿದ್ದರೆ ತೆರವುಗೊಳಿಸುವುದಿಲ್ಲ:

ದಾರಿ ಮಾತ್ರವಲ್ಲದೆ ರೂಢಿಗತ ರಸ್ತೆಯನ್ನು ಮಾಡಿಕೊಂಡು ಕೃಷಿ ಚಟುವಟಿಕೆಗೆ ತಮ್ಮ ಜಮೀನಿಗೆ ಹೋಗಿ ಬರುತ್ತಿದ್ದರೆ ಅಂತಹ ರೈತರಿಗೆ ದಾರಿ ತೆರವು ಕಾರ್ಯದಿಂದ ಯಾವುದೇ ಸಮಸ್ಯೆ ಇಲ್ಲ ಅಂತಹ ದಾರಿಯನ್ನ ತೆರವುಗೊಳಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಒಂದು ವೇಳೆ ರೈತರಿಗೆ ಅಡ್ಡಿ ಮಾಡಿದಲ್ಲಿ ಅಂತವರ ವಿರುದ್ಧ ಪೊಲೀಸ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸಾಗುವಳಿ, ಮನೆ ಕಟ್ಟಿಕೊಂಡಿದ್ದರೆ ತೆರವು ಇಲ್ಲ:

ಸರ್ಕಾರಿ ಜಮೀನಿನಲ್ಲಿ ಸಾಕಷ್ಟು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿರುವ ರೈತರು ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರೆ, ಅಂತಹ ಭೂಮಿಯನ್ನು ತೆರವುಗೊಳಿಸಲಾಗುವುದಿಲ್ಲ. ಈ ಭೂಮಿಯಲ್ಲಿ ಮನೆ ಕಟ್ಟಿಕೊಂಡಿದ್ದರೆ ಅದನ್ನು ತೆರವುಗೊಳಿಸುವುದಿಲ್ಲ. ಹಾಗಾಗಿ ರೈತರು ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ. ಇದನ್ನ ಹೊರತುಪಡಿಸಿ ಉಳಿದ ಜಮೀನು ಹಾಗೂ ದಾರಿ ಸರ್ಕಾರಕ್ಕೆ ಸೇರಿದ್ದರೆ ಅದನ್ನು ತಕ್ಷಣವೇ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

advertisement

Leave A Reply

Your email address will not be published.