Karnataka Times
Trending Stories, Viral News, Gossips & Everything in Kannada

Gold: ಎಷ್ಟು ಗ್ರಾಂ ಚಿನ್ನವನ್ನು 24 ಕ್ಯಾರೆಟ್ ಎಂದು ಕರೆಯಲಾಗುತ್ತದೆ? ಇದು ಶುದ್ಧ ಚಿನ್ನವೇ?

advertisement

ಚಿನ್ನಕ್ಕೂ ಭಾರತೀಯ ಸಂಸ್ಕೃತಿಗೂ ನಂಟು ಇದ್ದೇ ಇದೆ ನೋಡಿ! ಇದೇ ಕಾರಣಕ್ಕೆ ನಮಗೆ ಚಿನ್ನದ ಬಗ್ಗೆ ಸರಿಯಾಗಿ ಗೊತ್ತಿಲ್ಲದೆ ಇದ್ದರೂ ಚಿನ್ನಾಭರಣ ಖರೀದಿ ಮಾಡುವುದನ್ನಂತೂ ಬಿಡುವುದಿಲ್ಲ. ಚಿನ್ನವನ್ನು ಲಕ್ಷ್ಮಿ ಎಂದು ಪೂಜಿಸುತ್ತೇವೆ. ಹಾಗಾಗಿ ಚಿನ್ನಕ್ಕೆ ಹೆಚ್ಚು ಬೆಲೆ ಕೊಡುತ್ತೇವೆ. ಯಾವುದೇ ಸಮಾರಂಭಗಳಲ್ಲಿ ಚಿನ್ನಕ್ಕೆ ಮೊದಲ ಪ್ರಾಧಾನ್ಯತೆ ಇದ್ದೆ ಇರುತ್ತದೆ. ಮಹಿಳೆಯರು ಚಿನ್ನಾಭರಣ ಧರಿಸುವುದನ್ನ ಒಂದು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಪುರುಷರಿಗಂತೂ ಚಿನ್ನ (Gold) ಎನ್ನುವುದು ಹೂಡಿಕೆ ವಸ್ತುವಾಗಿದೆ.

ಚಿನ್ನದ ಬಗ್ಗೆ ಎಲ್ಲಾ ವಿಚಾರಗಳು ತಿಳಿದುಕೊಂಡು ಚಿನ್ನ ಖರೀದಿ (Gold Purchase) ಮಾಡುವುದಕ್ಕೂ ಚಿನ್ನದ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲದೆ, ಚಿನ್ನ ಖರೀದಿ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕೇವಲ ನಿಮಗೆ ಒಂದು ಆಭರಣ ಬೇಕು ಎನ್ನುವ ಕಾರಣಕ್ಕೆ ನೇರವಾಗಿ ಚಿನ್ನದ ಅಂಗಡಿಗೆ ಹೋಗಿ ಅವರು ಹೇಳಿದಷ್ಟು ಬೆಲೆ ಕೊಟ್ಟು ಚಿನ್ನ ಖರೀದಿ ಮಾಡಿದರೆ ನಿಮಗೆ ಸಾಕಷ್ಟು ನಷ್ಟ ಉಂಟಾಗಬಹುದು. ವ್ಯಾಪಾರಿಗಳು ಮೋಸ ಮಾಡಬಹುದು. ಆದರೆ ನಿಜವಾಗಿ ಶುದ್ಧ ಚಿನ್ನ ಯಾವುದು? ಯಾವುದರಿಂದ ಚಿನ್ನದ ಆಭರಣ ತಯಾರಾಗುತ್ತದೆ? ಇವೆಲ್ಲ ಅಂಶಗಳನ್ನು ನೀವು ತಿಳಿದುಕೊಳ್ಳುವುದು ಸೂಕ್ತ.

ಶುದ್ಧ ಚಿನ್ನ ಯಾವುದು?

 

advertisement

 

ನಮಗೆಲ್ಲರಿಗೂ ತಿಳಿದಿರುವಂತೆ 24 ಕ್ಯಾರೆಟ್ ಚಿನ್ನ ಅಂದರೆ ಅದು ಶುದ್ಧ ಚಿನ್ನ. ಆದರೆ ನಿಜವಾಗಿ ಹೇಳಬೇಕು ಅಂದ್ರೆ 24 Carat Gold  ದ್ರವ ರೂಪದಲ್ಲಿ ಇರುತ್ತದೆ. ಬಹಳ ಮೃದುವಾಗಿರುವುದರಿಂದ ಕೇವಲ 24 ಕ್ಯಾರೆಟ್ ಚಿನ್ನದಿಂದ ಯಾವುದೇ ಆಭರಣ ತಯಾರಿಸಲು ಸಾಧ್ಯವಿಲ್ಲ. ಅದಕ್ಕೆ ಸರಿಯಾದ ಆಕಾರ ಕೊಡಲು ಆ ಚಿನ್ನ ಗಟ್ಟು ಮುಟ್ಟಾಗಿ ಇರಲು ಅದಕ್ಕೆ ಬಲ ಕೊಡಬೇಕಾಗುತ್ತದೆ. ಆಭರಣಗಳಲ್ಲಿ 22 ಕ್ಯಾರೆಟ್ ಚಿನ್ನ ಹಾಗೂ 18 ಕ್ಯಾರೆಟ್ ಚಿನ್ನ ಬಳಸಿ ತಯಾರಿಸಲಾಗುತ್ತದೆ. ಆದರೆ ನಾವು ಶುದ್ಧ ಚಿನ್ನ ಎನ್ನುವುದು ಮಾತ್ರ 24 ಕ್ಯಾರೆಟ್ ಚಿನ್ನಕ್ಕೆ.

24 ಕ್ಯಾರೆಟ್ ಚಿನ್ನದ ತೂಕ ಎಷ್ಟು ಗೊತ್ತಾ?

ಸಾಮಾನ್ಯವಾಗಿ 24 Carat Gold ಅಂದ್ರೆ ಕೇವಲ 4.8 ಗ್ರಾಂ ಮಾತ್ರ. ಹೀಗಾಗಿ ಪ್ರಪಂಚದಾದ್ಯಂತ ಶುದ್ಧ ಚಿನ್ನವನ್ನು 24 Carat Gold ದಿಂದಲೇ ಗುರುತಿಸುತ್ತಾರೆ. ಅದೇ ಹೆಚ್ಚಾಗಿ ಚಿನ್ನಾಭರಣಗಳನ್ನು ಮಾತ್ರ 22 ಕ್ಯಾರೆಟ್ ನಿಂದ ತಯಾರಿಸಲಾಗುತ್ತದೆ ಹಾಗೂ ಅದನ್ನು ಜನ ಹೆಚ್ಚಾಗಿ ಖರೀದಿಸುತ್ತಾರೆ. ಅಥವಾ 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಮಿಶ್ರ ಚಿನ್ನವನ್ನು ಬಳಕೆ ಮಾಡಲಾಗುತ್ತದೆ.

advertisement

Leave A Reply

Your email address will not be published.