Jan Dhan Bank Account: ಈ ಬ್ಯಾಂಕ್ ಅಕೌಂಟ್ ಇರುವವರಿಗೆ 10,000 ರೂಪಾಯಿ ಜೊತೆಗೆ 2 ಲಕ್ಷ ರೂಪಾಯಿಯ ವಿಮೆ ಸೌಲಭ್ಯ ಸಿಗಲಿದೆ!
ಸರ್ಕಾರ ನೀಡುವ ಅನೇಕ ಕಲ್ಯಾಣ ಯೋಜನೆಗಳು ನೇರವಾಗಿ ಅದರ ನಿಜವಾದ ಪ್ರಯೋಜನ ಸಿಗಬೇಕಾದವರ ಕೈಗೆ ತಲುಪಬೇಕು ಎನ್ನುವ ಕಾರಣಕ್ಕಾಗಿ ಜನಧನ್ ಯೋಜನೆ (Jan Dhan Yojana) ಯನ್ನು ಆರಂಭಿಸಲಾಯಿತು. ಈ ಯೋಜನೆಯ ಪ್ರಕಾರ ದೇಶದ ಪ್ರತಿಯೊಬ್ಬ ನಾಗರಿಕನ ಹೆಸರಲ್ಲಿ Bank Account ಅನ್ನು ಹೊಂದುವುದು ಬಹಳ ಸುಲಭವಾಯಿತು. ಸರ್ಕಾರಿ ಬ್ಯಾಂಕುಗಳಲ್ಲಿ ಯಾವುದೇ Minimum Balance ಇಲ್ಲದೆ ಈ ಅಕೌಂಟನ್ನು ತೆರೆಯಬಹುದಾಗಿತ್ತು ಇದರಿಂದ ಎಲ್ಲರ ಬಳಿಯೂ ಅಕೌಂಟ ಇದ್ದಂತಾಯಿತು.
ಸರ್ಕಾರದ ಸಾಮಾನ್ಯ ಯೋಜನೆಗಳು ಅಥವಾ ವಿಶೇಷ ಯೋಜನೆಗಳನ್ನು ಆರಂಭಿಸಿದಾಗ ಸರ್ಕಾರ ಇದೆ ಅಕೌಂಟಿಗೆ ಹಣವನ್ನು ವರ್ಗಾವಣೆ ಮಾಡುತ್ತದೆ. ಇದರಿಂದಾಗಿ ಮಧ್ಯವರ್ತಿಗಳ ಅಗತ್ಯ ಕಡಿಮೆಯಾಗಿ ಯಾರಿಗೆ ನಿಜವಾದ ಹಣ ಸೇರಬೇಕೋ ಅವರ ಹೆಸರಿಗೆ ಹಣ ಸೇರುವಂತಾಗುತ್ತಿದೆ.
ಈ ಯೋಜನೆ ಆರಂಭ ಆದಾಗಿನಿಂದ ಕೋಟಿಗಟ್ಟಲೆ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಹಾಗಾದರೆ ಈ ಜನ್ ಧನ್ ಯೋಜನೆ (Jan Dhan Yojana) ಯ ಬಳಕೆ ಕೇವಲ ಸರ್ಕಾರದ ಯೋಜನೆಗಳ ಅನುದಾನ ಪಡೆಯುವುದಕ್ಕಷ್ಟೇ ಇರುತ್ತದೆಯೇ ಅಥವಾ ಇದನ್ನು ಬಿಟ್ಟು ಬೇರೆ ರೀತಿಯಲ್ಲಿ ಈ ಅಕೌಂಟನ್ನು ಬಳಸಿಕೊಳ್ಳಬಹುದೇ ಎಂಬುದರ ಬಗ್ಗೆ ಇಂದು ನೋಡೋಣ. ಈ ಅಕೌಂಟ್ ಮೂಲಕ ನೀವು ಕಿಸಾನ್ ಯೋಜನೆ ಪಿಂಚಣಿ ಯೋಜನೆ ಎಂತಹ ಮೊದಲಿನಿಂದಲೂ ಇದ್ದ ಪ್ರಯೋಜನಗಳನ್ನು ಈ ಅಕೌಂಟಿಗೆ ಪಡೆದುಕೊಳ್ಳಬಹುದು.
Overdraft and Accident Insurance:
ಕೇವಲ ಇದಿಷ್ಟೇ ಅಲ್ಲದೆ ಇಲ್ಲಿ ಠೇವಣಿ ಇಟ್ಟ ಹಣಕ್ಕೆ ನಿಮಗೆ ಬಡ್ಡಿಯೂ ಸಿಗುತ್ತದೆ. ಇದರ ಜೊತೆಗೆ ಇನ್ನೊಂದು ಆಕರ್ಷಕ ಸ್ಕೀಮ್ ಕೂಡ ಈ ಜನ್ ಧನ್ ಯೋಜನೆಯ ಜೊತೆಗೆ ಇದೆ. ಅದೇನೆಂದರೆ ಇದರ ಜೊತೆಗೆ ಮೊದಲಿಗೆ 2,000 ರೂಪಾಯಿಗಳ Over Draft ಅನ್ನು ಹೊಂದಬಹುದು. ಅದೇ ರೀತಿ 2 ಲಕ್ಷ ರೂಪಾಯಿಗಳ Accident Insurance ಕೂಡ ಈ ಜನ್ ಧನ್ ಅಕೌಂಟ್ ನ (Jan Dhan Bank Account) ಜೊತೆಗೆ ಸಿಗಲಿದೆ.
ಓವರ್ ಡ್ರಾಫ್ಟ್ ಸೌಲಭ್ಯ ಎಂದರೆ ನಮ್ಮ ಅಕೌಂಟಲ್ಲಿ ಹಣವೇ ಇಲ್ಲದೆ ನಾವು ಬಹಳವನ್ನು ಬಳಸಿಕೊಳ್ಳಬಹುದು. ಆದರೆ ಇದಕ್ಕೆ ಮಿತಿ ಇರುತ್ತದೆ ಮೊದಲಿಗೆ ಆರಂಭಿಕ ಓವರ್ ಡ್ರಾಫ್ಟನ್ನು ನೀಡಲಾಗಿರುತ್ತದೆ. ಹಾಗೆ ಮುಂದುವರೆದು ನಾವು ತೆಗೆದುಕೊಂಡ ಹಣವನ್ನು ಸರಿಯಾದ ಸಮಯಕ್ಕೆ ವಾಪಸ್ಸು ಕಟ್ಟಿದಾಗ 10,000 ರೂಪಾಯಿಗಳ ತನಕ ಈ ಓವರ್ ಡ್ರಾಫ್ಟ್ ಮೊತ್ತವನ್ನು ವಿಸ್ತರಿಸಲಾಗುತ್ತದೆ. ಪಡೆದುಕೊಂಡ ಹಣಕ್ಕೆ ಪಡೆದುಕೊಂಡ ದಿನಗಳಿಗೆ ಮಾತ್ರ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಹಣವನ್ನು ಬಳಸದೇ ಇದ್ದಾಗ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಅಕೌಂಟ್ ಓಪನ್ ಮಾಡಬೇಕಾದಲ್ಲಿ ಬೇಕಾಗುವ ದಾಖಲೆಗಳು Aadhaar Card, Passport Size Photo, PAN Card ಮತ್ತು Voter ID Card. ನಿಮ್ಮ ಬಳಿ ಅಕೌಂಟ್ ಇಲ್ಲದೆ ಇದ್ದರೆ ಈಗಲೇ ಅಕೌಂಟ್ ಓಪನ್ ಮಾಡಿಸಿ.