Karnataka Times
Trending Stories, Viral News, Gossips & Everything in Kannada

Mukesh Ambani: ದೇಶದ ಅತಿ ದೊಡ್ಡ ಸಾಲಗಾರ ಮುಕೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್‌ ಮಾಡಿರೋ ಸಾಲದ ಮೊತ್ತವೆಷ್ಟು ಗೊತ್ತಾ?

advertisement

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited) ಅಧ್ಯಕ್ಷ ಮುಕೇಶ್ ಅಂಬಾನಿ. ಅವರು ಬರೋಬ್ಬರಿ 7.6 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ. ಕೋಟಿ ಕೋಟಿ ಕಂಪೆನಿಗಳ ಮಾಲೀಕ. ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮೊದಲಿಗರಾಗಿದ್ದಾರೆ. ರತನ್ ಟಾಟಾ, ಗೌತಮ್ ಅದಾನಿ (Gautam Adani), ಸುನಿಲ್ ಮಿತ್ತಲ್ (Sunil Mittal) ಮೊದಲಾದವರು ನಂತರದ ಸ್ಥಾನದಲ್ಲಿ ನಿಲ್ಲುತ್ತಾರೆ.

ಆದರೆ ಬಿಲಿಯನೇರ್ ಮುಕೇಶ್ ಅಂಬಾನಿ (Mukesh Ambani) ದೇಶದ ಅತಿ ದೊಡ್ಡ ಶ್ರೀಮಂತ ಆಗಿರೋ ಹಾಗೆಯೇ ಭಾರತದ ಅತಿ ದೊಡ್ಡ ಸಾಲಗಾರ ಕೂಡಾ ಹೌದು. ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಪೊರೇಶನ್‌ಗಳಲ್ಲಿ ಅತಿ ಹೆಚ್ಚು ಸಾಲವನ್ನು ಹೊಂದಿದೆ. ಅಚ್ಚರಿ ಎಂದರೆ ಅದಾನಿ ಗ್ರೂಪ್ ಆಫ್ ಕಂಪನಿಗಳು ಈ ಪಟ್ಟಿಯಿಂದ ಹೊರಗುಳಿದಿವೆ.

ರತನ್ ಟಾಟಾ (Ratan Tata) ಕಂಪನಿಯ ಸಾಲವು ರಿಲಯನ್ಸ್‌ಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ವೊಡಾಫೋನ್ ಐಡಿಯಾ (Vodafone Idea) ದ ಸಾಲದ ಕುರಿತು ಆಗಾಗ್ಗೆ ಚರ್ಚೆಯಾಗುತ್ತಲೆ ಇರುತ್ತದೆ. ಅಲ್ಲದೆ ಇದು ರಿಲಯನ್ಸ್‌ಗಿಂತ ಕಡಿಮೆಯಾಗಿದೆ. ಏರ್‌ಟೆಲ್ ಮತ್ತು L&T ಅನ್ನು ಸಹ ಉಲ್ಲೇಖಿಸಲಾಗಿದೆ. ಆದರೆ ಮುಕೇಶ್ ಅಂಬಾನಿಯವರ ರಿಲಯನ್ಸ್‌ಗಿಂತ ಅವು ಗಣನೀಯವಾಗಿ ಕೆಳಗಿದೆ.

advertisement

ರಿಲಯನ್ಸ್‌ಗೆ ಹೋಲಿಸಿದರೆ ಭಾರತೀಯ ಉಳಿದ ಕಂಪನಿಗಳ ಸಾಲದ ವಿವರಗಳನ್ನು ನೋಡುವುದಾದರೆ ಈಕ್ವಿಟಿ ಡೇಟಾ (Equity Data) ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ 3.13 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಹೊಂದಿರುವ ದೇಶದ ಅತ್ಯಂತ ಹೆಚ್ಚು ಸಾಲ ಹೊಂದಿರುವ ಕಂಪನಿಯಾಗಿದೆ. ವಿದ್ಯುತ್ ವಲಯದ ಪ್ರಮುಖ ಸಂಸ್ಥೆಯಾಗಿರುವ ಎನ್‌ಟಿಪಿಸಿ 2.20 ಲಕ್ಷ ಕೋಟಿ ಸಾಲದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಇನ್ನು ವೊಡಾಫೋನ್ ಐಡಿಯಾ, ಸರ್ಕಾರಿ ಸ್ವಾಮ್ಯದ ಹೊರತಾಗಿಯೂ, 2.01 ಲಕ್ಷ ಕೋಟಿ ರೂಪಾಯಿ ಸಾಲವನ್ನು ಹೊಂದಿದೆ. ಭಾರ್ತಿ ಏರ್‌ಟೆಲ್ (Bharti Airtel) 1.65 ಲಕ್ಷ ಕೋಟಿ ಸಾಲವನ್ನು ಹೊಂದಿದೆ. ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ 1.40 ಲಕ್ಷ ಕೋಟಿ ಸಾಲವನ್ನು ಹೊಂದಿದೆ. ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು 1.29 ಲಕ್ಷ ಕೋಟಿ ಸಾಲ ಹೊಂದಿದೆ.

ಪವರ್ ಗ್ರಿಡ್ ಕಾರ್ಪೊರೇಷನ್ 1.26 ಲಕ್ಷ ಕೋಟಿ ಸಾಲದೊಂದಿಗೆ ನಂತರದ ಸ್ಥಾನವನ್ನು ಪಡೆದುಕೊಂಡಿದೆ. ಟಾಟಾ ಮೋಟಾರ್ಸ್ 1.25 ಲಕ್ಷ ಕೋಟಿ ಸಾಲದಲ್ಲಿದೆ. ಚಂದ್ರಯಾನ ಮಿಷನ್‌ನಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಾರ್ಸೆನ್ ಮತ್ತು ಟೂಬ್ರೊ 1.18 ಲಕ್ಷ ಕೋಟಿ ಸಾಲವನ್ನು ಹೊಂದಿದೆ. ಒಂದು ಲಕ್ಷ ಕೋಟಿಗೂ ಅಧಿಕ ಸಾಲ ಹೊಂದಿರುವ ಗ್ರಾಸಿಮ್ ಕಂಪನಿಯ ಪ್ರಸ್ತುತ ಸಾಲ 1.01 ಲಕ್ಷ ಕೋಟಿ ರೂಪಾಯಿ.

advertisement

Leave A Reply

Your email address will not be published.