Karnataka Times
Trending Stories, Viral News, Gossips & Everything in Kannada

Mukesh Ambani: ಅಯೋಧ್ಯಾ ರಾಮಮಂದಿರಕ್ಕೆ ಕೋಟ್ಯಧಿಪತಿ ಮುಕೇಶ್ ಅಂಬಾನಿ ಮಾಡಿದ ದಾನವೆಷ್ಟು?

advertisement

ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಅಯೋಧ್ಯೆಯಲ್ಲಿ ಹೊಸಪರ್ವವೊಂದು ಶುರುವಾಗಿದೆ. ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್ ಅಂಬಾನಿ (Mukesh Ambani) ನೀತಾ ಅಂಬಾನಿ (Nita Ambani) ದಂಪತಿ ಕೂಡ ಅಯೋಧ್ಯೆಗೆ ಮರಳಿದ ರಾಮನಿಗೆ ಬಹುಕೋಟಿ ಮೊತ್ತದ ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿಯೊಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಯ ಆಚರಣೆಯ ನಡುವೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಎಂಡಿ ಮುಕೇಶ್ ಅಂಬಾನಿ (Mukesh Ambani) ಮತ್ತು ಅವರ ಪತ್ನಿ ನೀತಾ ಅಂಬಾನಿ (Nita Ambani) ರಾಮನಿಗೆ 33 ಕೆಜಿ ಚಿನ್ನ ಮತ್ತು ಮೂರು ಚಿನ್ನದ ಕಿರೀಟಗಳನ್ನು ದಾನ ಮಾಡಿದ್ದಾರೆ ಎಂಬ ವರದಿಗಳಿವೆ. ಆದರೆ ನಿಜವಾಗಿಯೂ ದಾನ ಮಾಡಿದ್ದಾರೆಯೇ? ಎಂಬ ಮಾತು ಕೇಳಿಬರುತ್ತಿದೆ.

 

ಅಂಬಾನಿ ಕುಟುಂಬ 33 ಕೆಜಿ ಚಿನ್ನ ದಾನ ಮಾಡಿದ್ಯ?

advertisement

ಮೊದಲೇ ಹೇಳಿದಂತೆ, ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಎಂಡಿ ಮತ್ತು ಅಧ್ಯಕ್ಷರಾದ ಮುಕೇಶ್ ಅಂಬಾನಿ (Mukesh Ambani) ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರು ಅಯೋಧ್ಯೆಯ ರಾಮಮಂದಿರಕ್ಕೆ ಒಟ್ಟು 33 ಕಿಲೋಗ್ರಾಂಗಳಷ್ಟು ಚಿನ್ನವನ್ನು ದಾನ ಮಾಡಿದ್ದಾರೆ ಎಂದು ಹಲವಾರು ವರದಿಗಳಿವೆ. ರಾಮಮಂದಿರ ಪ್ರಾಣ ಪ್ರತಿಷ್ಠೆಯ ಮುನ್ನವೇ ಹರಿದಾಡುತ್ತಿವೆ. ಅಂಬಾನಿ ಕುಟುಂಬ 33 ಕೆಜಿ ಚಿನ್ನದ ಜೊತೆಗೆ ಮೂರು ಚಿನ್ನದ ಕಿರೀಟಗಳನ್ನು ದೇವಸ್ಥಾನಕ್ಕೆ ದಾನ ಮಾಡಿದ್ದಾರೆ ಎಂದು ಈ ಸಾಮಾಜಿಕ ಮಾಧ್ಯಮದ ಹೇಳಿಕೆಗಳು ಹೇಳಿವೆ.

ಫಾಕ್ಟ್ ಚೆಕ್ ವಿವರ:

ಮುಕೇಶ್ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ಅವರು ಅಯೋಧ್ಯೆ ರಾಮಮಂದಿರಕ್ಕೆ ಮೂರು ಚಿನ್ನದ ಕಿರೀಟಗಳು ಮತ್ತು 33 ಕೆಜಿ ಚಿನ್ನವನ್ನು ದಾನ ಮಾಡಿದ್ದಾರೆ ಎಂಬ ಈ ವರದಿಗಳು ನಿಜವಲ್ಲ. ನ್ಯೂಸ್‌ಚೆಕರ್ ವೆಬ್‌ಸೈಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರೊಂದಿಗೆ ಮಾತನಾಡಿದ್ದು, ಇದೇ ರೀತಿಯ ದೇಣಿಗೆಯನ್ನು ನೀತಾ ಅಂಬಾನಿ, ಮುಕೇಶ್ ಅಂಬಾನಿ ಅಥವಾ ಕುಟುಂಬದ ಯಾವುದೇ ಸದಸ್ಯರು ಉಲ್ಲೇಖಿಸಿಲ್ಲ ಅಥವಾ ನೀಡಿಲ್ಲ ಎಂದು ಖಚಿತಪಡಿಸಿದ್ದಾರೆ. ಇದುವರೆಗೂ ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡಿದವರ ಪಟ್ಟಿಯಲ್ಲಿ ಮುಕೇಶ್ ಮತ್ತು ನೀತಾ ಅಂಬಾನಿ ಹೆಸರು ಸೇರ್ಪಡೆಯಾಗಿಲ್ಲ.

ಅತಿ ಹೆಚ್ಚು ದಾನ ನೀಡಿದವರು:

ರಾಮಮಂದಿರಕ್ಕೆ ಅನೇಕ ವ್ಯಕ್ತಿಗಳು ದೇಣಿಗೆ ಕೊಟ್ಟಿದ್ದರೂ ಅವರಲ್ಲಿ ಮೊದಲಿಗ ಸ್ಥಾನದಲ್ಲಿರುವುದು ದಿಲೀಪ್ ಕುಮಾರ್ ವಿ ಲಖಿ ಮತ್ತು ಅವರ ಕುಟುಂಬ. ಇವರು ಸೂರತ್‌ನ ಪ್ರಮುಖ ವಜ್ರ ವ್ಯಾಪಾರಿಗಳು. ಅವರು ರಾಮಮಂದಿರಕ್ಕೆ 101 ಕೆಜಿ ಚಿನ್ನವನ್ನು ದಾನ ಮಾಡಿದ್ದಾರೆ. ಇದು ಸುಮಾರು 68 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಕೊಡುಗೆಯಾಗಿದೆ. ಈ ಚಿನ್ನವನ್ನು ರಾಮಮಂದಿರದ ಬಾಗಿಲುಗಳು, ಗರ್ಭಗುಡಿ, ತ್ರಿಶೂಲ, ಡಮರು ಮತ್ತು ಕಂಬಗಳನ್ನು ಅಲಂಕರಿಸಲು ಬಳಸಲಾಗಿದೆ. ಇದು ರಾಮಮಂದಿರ ರಚನೆಗೆ ಉತ್ತಮ ಸ್ಪರ್ಶವನ್ನು ನೀಡಿದೆ

advertisement

Leave A Reply

Your email address will not be published.