Karnataka Times
Trending Stories, Viral News, Gossips & Everything in Kannada

Ayodhya Bala Rama: ಅಯೋಧ್ಯೆಯ ಬಾಲರಾಮನ ವಿಗ್ರಹ ಕಪ್ಪು ಬಣ್ಣದಲ್ಲಿ ಇರುವುದೇಕೇ? ರಹಸ್ಯ ಬಯಲು!

advertisement

ಇಂದು ದೇಶ ದೆಲ್ಲೆಡೆ ಸಂಭ್ರಮ ಜೋರಾಗಿದೆ. ವಿವಿಧೆಡೆ ರಾಮನ ಪೂಜೆ ಸಲ್ಲಿಸಿ ಭಕ್ತಿ ಮೆರೆದಿದ್ದಾರೆ. ಈಗಾಗಲೇ‌ ಇಂದು ಹಲವು ರಾಜ್ಯಗಳಲ್ಲಿ ಸರ್ಕಾರಿ ಕಚೇರಿಗಳು, ಮಂಡಳಿಗಳು ಮತ್ತು ನಿಗಮಗಳು ಅರ್ಧ ದಿನ ಅಥವಾ ರಜೆ ಘೋಷಿಸಿ ಸಂಭ್ರಮ ಆಚರಣೆ ಮಾಡಿದೆ. 500 ವರ್ಷಗಳ ರಾಮ ಭಕ್ತರ ಕನಸು ಇಂದು ನನಸಾಗಿದ್ದು, ರಾಮ ಅಜರಮರವಾಗಿ ನಿಂತಿದ್ದಾನೆ. ಸದ್ಯ ಎಲ್ಲೆಡೆ ಭಗವಾನ್​ ರಾಮನ ಅತ್ಯಂತ ಆಕರ್ಷಕ ವಿಗ್ರಹದ ಫೋಟೋ ಗಳು ವೈರಲ್ ಆಗುತ್ತಿದ್ದು ಎಲ್ಲಡೆ ಮೆಚ್ಚುಗೆ ಗಳಿಸಿದೆ.

 

 

ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನ (Ayodhya Bala Rama) ಮೂರ್ತಿಯು ಕಡುಕಪ್ಪು ಬಣ್ಣದಲ್ಲಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಆದ್ರೆ ಶ್ರೀರಾಮನ‌ ಬಣ್ಣ ಕಪ್ಪು ಬಣ್ಣದಲ್ಲಿ ಕೆತ್ತಲು ಕಾರಣವೇನು ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಹೌದು ಮಹರ್ಷಿ ವಾಲ್ಮೀಕಿ (Maharishi Valmiki) ಯವರ ರಾಮಾಯಣದಲ್ಲಿ ರಾಮನ ಬಣ್ಣವನ್ನು ಕಪ್ಪು ಬಣ್ಣ ಎಂದು ತಿಳಿಸಲಾಗಿದೆ. ಅದಕ್ಕಾಗಿ ರಾಮಮಂದಿರದಲ್ಲಿ ರಾಮನನ್ನ ಕಪ್ಪು ಬಣ್ಣದಲ್ಲಿ ರಚಿಸಲಾಗಿದೆ. ಅದೇ ರೀತಿ ಮೃದು ಮತ್ತು ಆಕರ್ಷಕ ಮೈಬಣ್ಣ ಇರುವುದರಿಂದ ಕಾಂತಿಯುತ ಕಪ್ಪು ಶಿಲೆಯಲ್ಲಿ ಶ್ರೀರಾಮ ಅದ್ಭುತವಾಗಿ ಮೂಡಿಬಂದಿದ್ದಾನೆ.

advertisement

ಯಾರು ಕೆತ್ತನೆ ಮಾಡಿದ್ದಾರೆ:

ಕಪ್ಪು ಶಿಲೆಯ ಮೂರ್ತಿ ಮನಮೋಹಕವಾಗಿ ಕಂಗೊಳಿಸುತ್ತಿದ್ದು ಮೈಸೂರಿನ ಅರುಣ್ ಯೋಗಿರಾಜ್ (Arun Yogiraj) ಕೆತ್ತನೆ ಮಾಡಿರುವ 51 ಇಂಚಿನ ರಾಮಲಲ್ಲಾ ವಿಗ್ರಹ ಈಗಾಗಲೇ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆ ಮಾಡಲಾಗಿದೆ. ಮೂರ್ತಿಯ ಕೈಗಳಿಗೆ ಬಿಲ್ಲು ಹಾಗೂ ಬಾಣಗಳನ್ನು ಅಳವಡಿಸಲಾಗಿದೆ. ಕಪ್ಪು ಶಿಲೆಯ ಮೂರ್ತಿಯ ಕೈಗಳಿಗೆ ಚಿನ್ನದ ಬಿಲ್ಲು ಹಾಗೂ ಬಾಣಗಳನ್ನ ಅಳವಡಿಸಲಾಗಿದೆ.

ಇನ್ನೊಂದು ವಿಗ್ರಹ ಕೆತ್ತನೆ:

ಬಾಲರಾಮ‌ನ ಮೂರ್ತಿಯ ಮೇಲ್ಬಾಗ ಸೂರ್ಯ ವಂಶದ ಶ್ರೀರಾಮಚಂದ್ರನನ್ನು ಬಿಂಬಿಸುವಂತಹ ಸೂರ್ಯದೇವರ ಕೆತ್ತನೆ ಸಹ ಮಾಡಲಾಗಿದೆ. ಇನ್ನೊಂದು ರಾಮ ಲಲ್ಲಾ ವಿಗ್ರಹವನ್ನು ರಾಜಸ್ಥಾನದ ಪರಿಶುದ್ಧ ಬಿಳಿ ಬಣ್ಣದ ಮಕ್ರಾನಾ ಮಾರ್ಬಲ್‌ನಲ್ಲಿ ಕೆತ್ತಲಾಗಿದೆ. ಒಟ್ಟಿನಲ್ಲಿ ರಾಮನ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತಿದೆ.

advertisement

Leave A Reply

Your email address will not be published.