Karnataka Times
Trending Stories, Viral News, Gossips & Everything in Kannada

Debit and Credit Card: ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಗ್ಗೆಗಿನ ಈ ವಿಷಯ ತಿಳಿದುಕೊಂಡರೆ ನೀವು ಇನ್ನಷ್ಟು ಹಣ ಸೇವ್ ಮಾಡಬಹುದು!

advertisement

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರಿಗೂ ಬ್ಯಾಂಕುಗಳಿಂದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ (Debit Card and Credit Card) ಸೇವೆ ಲಭ್ಯವಿದೆ. ನೀವು ಯಾವುದೇ ನೌಕರಿಯಲ್ಲಿ ಇದ್ದರೂ ಕೂಡ ಕ್ರೆಡಿಟ್ ಕಾರ್ಡ್ (Credit Card) ಪಡೆದುಕೊಳ್ಳಬಹುದು ಹೀಗೆ ಕ್ಯಾಶ್ ಲೆಸ್ ವ್ಯವಹಾರವನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರೋತ್ಸಾಹಿಸಲಾಗುತ್ತಿದೆ.

ಇನ್ನು ನೀವು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ (Debit and Credit Card) ಬಳಸುತ್ತಿದ್ದರೆ ಅದರ ಬಗ್ಗೆ ಹಾಗೂ ಅದರಲ್ಲಿ ಇರುವ ಬೆನಿಫಿಟ್ ಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ಒಂದು ವೇಳೆ ನೀವು ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡಿದ್ದರೆ ಹೆಚ್ಚಿನ ಹಣಕಾಸಿನ ವ್ಯವಹಾರ ಮಾಡಲು ಹಾಗೂ ಹೆಚ್ಚು ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಬಹುತೇಕ ಎಲ್ಲರಿಗೂ ಗೊತ್ತಿರದೇ ಇರುವ ಕೆಲವು ವಿಚಾರಗಳನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ.

ಇಂದು ಸಣ್ಣಪುಟ್ಟ ಉದ್ಯೋಗ ಮಾಡುವುದರಿಂದ ಹಿಡಿದು ದೊಡ್ಡ ವ್ಯವಹಾರ ಮಾಡುವವರು ಕೂಡ ಹಾಗೂ ಕ್ರೆಡಿಟ್ ಕಾರ್ಡ್ (Credit Card) ಬಳಕೆ ಮಾಡಬಹುದು. ಆದರೆ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ (Debit Card and Credit Card) ಬಳಕೆ ಮಾಡಿ ಶಾಪಿಂಗ್ ಮಾಡಬಹುದಾಗಿದ್ದರೂ ಕೂಡ ಎರಡು ಕಾರ್ಡಿನಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಹಾಗಾಗಿ ಯಾವ ಸಂದರ್ಭದಲ್ಲಿ ಯಾವ ಕಾರ್ಡ್ ಬಳಸಿದರೆ ಹೆಚ್ಚು ಉಪಯುಕ್ತ ಎಂಬುದನ್ನು ತಿಳಿದುಕೊಳ್ಳಬೇಕು.

 

advertisement

 

ಡೆಬಿಟ್ ಕಾರ್ಡ್ (Debit Card) ಬಗ್ಗೆ ಹೇಳುವುದಾದರೆ, ಇದು ನಿಮ್ಮ ಉಳಿತಾಯ ಖಾತೆ ಅಥವಾ ಸಂಬಳ ಖಾತೆಗೆ ಕನೆಕ್ಟ್ ಆಗಿರುತ್ತದೆ. ನೀವು ಎಲ್ಲೇ ಶಾಪಿಂಗ್ ಮಾಡಿದರು ಡೆಬಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿದರೆ ನಿಮ್ಮ ಬ್ಯಾಂಕ್ನಿಂದ ನೇರವಾಗಿ ಹಣ ಕಡಿತಗೊಳ್ಳುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಹಾಗಲ್ಲ ನಿಮ್ಮ ಖಾತೆಯಲ್ಲಿ ಒಂದು ರೂಪಾಯಿ ಇಲ್ಲದೆ ಇದ್ದರೂ ಕೂಡ ನೀವು ಶಾಪಿಂಗ್ ಮಾಡಬಹುದು ಇದು ನಿಮ್ಮ ಖಾತೆಯಿಂದ ನೇರವಾಗಿ ಹಣ ಕಡಿತಗೊಳಿಸುವುದಿಲ್ಲ ಬದಲಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಲು ತಿಂಗಳಿನ ಕೆಲವು ದಿನಗಳನ್ನು ಮೀಸಲಿಡಲಾಗುತ್ತೆ ಆ ದಿನಗಳಲ್ಲಿ ಮಾತ್ರ ನೀವು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಬೇಕು ಒಂದು ವೇಳೆ ಸರಿಯಾದ ಸಮಯಕ್ಕೆ ಪಾವತಿ ಮಾಡದೆ ಇದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.

ಡೆಬಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಿದ್ರೆ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆಯೋ ಅಷ್ಟು ಹಣವನ್ನು ನೀವು ಬಳಸಿಕೊಳ್ಳಬಹುದು ಹಾಗೂ ಇದಕ್ಕೆ ಯಾವುದೇ ರೀತಿಯ ಶುಲ್ಕ ಅಥವಾ ಬಡ್ಡಿ ವಿಧಿಸಲಾಗುವುದಿಲ್ಲ. ಆದರೆ ಕ್ರೆಡಿಟ್ ಕಾರ್ಡ್ ಹಾಗಲ್ಲ, ನೀವು ಒಮ್ಮೆ ಕ್ರೆಡಿಟ್ ಕಾರ್ಡ್ ಬಳಸಿ ಹಣ ಹಿಂಪಡೆದರೆ ನಂತರ ಅದಕ್ಕೆ ಬಡ್ಡಿ ಕೂಡ ಪಾವತಿಸಬೇಕು. ಕ್ರೆಡಿಟ್ ಕಾರ್ಡ್ ನಲ್ಲಿ ಒಂದು ಅಥವಾ ಎರಡು ಲಕ್ಷ ಮಿತಿ ಇರುತ್ತದೆ. ಇದಕ್ಕಿಂತ ಹೆಚ್ಚಿಗೆ ನೀವು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. 50 ದಿನಗಳ ಒಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದೇ ಇದ್ದಲ್ಲಿ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ.

ಡೆಬಿಟ್ ಕಾರ್ಡ್ ಬಳಕೆಗೆ ಯಾವುದೇ ರೀತಿಯ ವಾರ್ಷಿಕ ಶುಲ್ಕ ಇಲ್ಲ. ಆದರೆ ಕ್ರೆಡಿಟ್ ಕಾರ್ಡ್ ಬಳಕೆಗೆ ಬ್ಯಾಂಕ್ ವಾರ್ಷಿಕ ಶುಲ್ಕವನ್ನು ಕೂಡ ವಿಧಿಸುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಗೆ ಸಂಬಂಧಪಟ್ಟ ಈ ಎಲ್ಲಾ ವಿಚಾರಗಳನ್ನು ತಿಳಿದುಕೊಂಡು ಬಳಕೆ ಮಾಡಿದರೆ ನೀವು ಹಣ ಉಳಿತಾಯ ಮಾಡಬಹುದು.

advertisement

Leave A Reply

Your email address will not be published.