Karnataka Times
Trending Stories, Viral News, Gossips & Everything in Kannada

Ram Mandir: ಕಬ್ಬಿಣ ಮತ್ತು ಉಕ್ಕು ಬಳಸದೆ ಶ್ರೀರಾಮ ಮಂದಿರವನ್ನು ನಿರ್ಮಿಸಿರುವುದಕ್ಕೆ ಕಾರಣ ಏನು ಗೊತ್ತಾ?

advertisement

ಅಯೋಧ್ಯೆ ಮಹಾ ನಗರಿಯಲ್ಲಿ ಇಂದು ರಾಮಲಲ್ಲ (Ram Lala) ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಬಹಳ ಅದ್ದೂರಿಯಿಂದ ನೆರವೇರಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi) ಅವರ ಅಮೃತ ಹಸ್ತದಿಂದ ಶ್ರೀ ರಾಮ ಮಂದಿರ ಉದ್ಘಾಟನೆ ನಡೆದಿದೆ. ದೇಶಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಮನೆ ಮನೆಯಲ್ಲಿ ಶ್ರೀ ರಾಮನನ್ನು ಪೂಜಿಸಿ, ಶ್ರೀ ರಾಮನನ್ನು ಭಕ್ತಿಯಿಂದ ಬರಮಾಡಿಕೊಳ್ಳಲಾಗುತ್ತಿದೆ. ಪ್ರತಿ ಗ್ರಾಮವು ಶ್ರೀರಾಮ ಮಂದಿರವಾಗಿ ಪರಿವರ್ತನೆಗೊಂಡಿದೆ.

ಎನ್ನುವುದು ಪ್ರತಿಯೊಬ್ಬ ಭಾರತೀಯನ ಪ್ರತಿಯೊಬ್ಬ ಹಿಂದುಗಳ ಭಾವನೆಗೆ ಸಂಬಂಧಪಟ್ಟದ್ದು, ಶ್ರೀರಾಮನ ದೇವರು ಎಂದು ಪೂಜಿಸುವ ನಾವು ಆತನನ್ನು ಮರ್ಯಾದ ಪುರುಷೋತ್ತಮ ಎಂದೆ ಪೂಜಿಸುತ್ತೇವೆ ಪ್ರಾರ್ಥಿಸುತ್ತೇವೆ. ಈ ಭಾವನಾತ್ಮಕ ವಿಚಾರ ಒಂದು ಕಡೆಯಾದರೆ ಶ್ರೀರಾಮ ಮಂದಿರ (Ram Mandir) ನಿರ್ಮಾಣದಲ್ಲಿ ತಂತ್ರಜ್ಞಾನವನ್ನು ಬಳಸಲಾಗಿದೆ ಅದರಲ್ಲೂ ಹಿಂದೆಂದೂ ಕೇಳರಿಯದ ಅದ್ಭುತ ತಂತ್ರಜ್ಞಾನವನ್ನು ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಕಾಣಬಹುದು.

ಸಾಂಪ್ರದಾಯಿಕ ಭಾರತೀಯ ವಾಸ್ತು ಶಿಲ್ಪ ಪರಂಪರೆಗೆ ಶ್ರೀರಾಮ ಮಂದಿರ ಒಂದು ಉದಾಹರಣೆ. ಇಲ್ಲಿ ಎಲ್ಲರನ್ನೂ ಆಕರ್ಷಿಸಲಿರುವ ಅಂಶ ಅಂದ್ರೆ ಇಷ್ಟು ದೊಡ್ಡ ಶ್ರೀರಾಮ ಮಂದಿರವನ್ನು, ಉಕ್ಕು ಮತ್ತು ಕಬ್ಬಿಣವನ್ನು ಕಿಂಚಿತ್ತು ಬಳಸದೆ ನಿರ್ಮಾಣ ಮಾಡಲಾಗಿದೆ.

ನಾಗರ ಶೈಲಿಯಲ್ಲಿ ರಾಮಮಂದಿರ ನಿರ್ಮಾಣ:

ಶ್ರೀರಾಮ ಮಂದಿರವನ್ನು ನಾಗರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು 15 ತಲೆಮಾರುಗಳು ನೂರಕ್ಕೂ ಹೆಚ್ಚು ದೇವಾಲಯಗಳನ್ನು ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಿದ್ದು ಕಂಡುಬಂದಿದೆ. ಉತ್ತರ ಭಾರತದ ಮಂದಿರ ನಿರ್ಮಾಣದ ಶೈಲಿಯನ್ನೇ ಇದು ಹೋಲುತ್ತದೆ.

 

 

ರಾಮ ಜನ್ಮ ಭೂಮಿ ಅಯೋಧ್ಯ ರಾಮಮಂದಿರದ ಬಗ್ಗೆ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾಹಿತಿಯನ್ನು ನೀಡಿದ್ದು, ಎಕರೆ ವಿಸ್ತೀರ್ಣ ಹೊಂದಿರುವ ಮೂರು ಅಂತಸ್ತಿನ ದೇವಾಲಯ ಇದು. 57,000 ಚದರ ಅಡಿ ವಿಸ್ತೀರ್ಣದಲ್ಲಿ ರಾಮಮಂದಿರ ನಿರ್ಮಾಣಗೊಂಡಿದೆ.

advertisement

ಈ ದೇವಾಲಯ ಕುತುಬ್ ಮಿನಾರ್ ನ ಶೇಕಡ 70ರಷ್ಟು ಎತ್ತರದಲ್ಲಿದೆ. ಶ್ರೀ ರಾಮ ಮಂದಿರವನ್ನು (Ram Mandir) ಗ್ರಾನೆಟ್ ಮರಳುಗಲ್ಲು ಆಯ್ತಾ ಅಮೃತಶಿಲೆಯಿಂದ ನಿರ್ಮಿಸಲಾಗಿದೆ ಕಬ್ಬಿಣದ ವಯಸ್ಸು ಕೇವಲ 70ರಿಂದ 80 ವರ್ಷಗಳು. ಹಾಗಾಗಿ ಇನ್ನು ಶತಶತಮಾನಗಳ ಹೊರಗೆ ಶ್ರೀರಾಮ ಮಂದಿರ ಶಾಶ್ವತವಾಗಿ ನೆಲೆಸಿರಬೇಕು ಎನ್ನುವ ಕಾರಣಕ್ಕೆ, ಬಹಳ ಮುತುವರ್ಜಿಯಿಂದ ಶಿಲೆಗಳನ್ನು ಆಯ್ಕೆ ಮಾಡಿ ರಾಮಮಂದಿರ ನಿರ್ಮಾಣ ಮಾಡಲಾಗಿದೆ.

ಲಾಕಿಂಗ್ ಸಿಸ್ಟಮ್ ನಲ್ಲಿ ರಾಮ ಮಂದಿರ ನಿರ್ಮಾಣ:

ರಾಮ ಮಂದಿರ (Ram Mandir) ನಿರ್ಮಾಣದಲ್ಲಿ ಒಂದಕ್ಕೊಂದು ಸಂಪರ್ಕ ಕಲ್ಪಿಸಲು ಸಿಮೆಂಟ್ ಅಥವಾ ಸುಣ್ಣ ಬಳಸಿಲ್ಲ. ಮರಗಳನ್ನು ಬಳಸಿಕೊಂಡು ಸಂಪೂರ್ಣ ರಚನೆಯನ್ನು ಇನ್ನು ಸಿಸ್ಟಮ್ ನಲ್ಲಿ ರೂಪಿಸಲಾಗಿದೆ. ಅಂದ್ರೆ ಇಲ್ಲಿನ ಪ್ರತಿಯೊಂದು ವಿನ್ಯಾಸವು ಒಂದಕ್ಕೊಂದು ಕೊಂಡಿಯಂತೆ ಹೆಣೆದುಕೊಂಡಿದೆ.

ಸರಯು ನದಿ ತೀರದಲ್ಲಿ ತಲೆಯೆತ್ತಿದ ಶ್ರೀರಾಮ ಮಂದಿರ:

ಶ್ರೀ ರಾಮ ಮಂದಿರದ ಟ್ರಸ್ಟಿಗಳಲ್ಲಿ ಒಬ್ಬರಾಗಿರುವ ನೃಪೇಂದ್ರ ಮಿಶ್ರಾ ಹೇಳುವಂತೆ ಸರಯು ನದಿ ತಟದಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸುವುದು ಒಂದು ದೊಡ್ಡ ಸವಾಲು. ನದಿ ತೀರದಲ್ಲಿ, ಭೂಲಿಯಲ್ಲಿ ಕೆಳಗೆ ಮರಳು ಹಾಗೂ ಅಸ್ಥಿರ ವಿನ್ಯಾಸ ಇರುತ್ತದೆ. ಇಂತಹ ನೆಲದಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು.

ಕಂಬಗಳಲ್ಲಿಯೂ ಅದ್ಭುತ ವಿನ್ಯಾಸ:

ರಾಜಸ್ಥಾನದ ಗುಲಾಬಿ ಮರಳುಗಲ್ಲು ಬಳಸಿಕೊಂಡು ಕಂಬ ನಿರ್ಮಾಣ ಮಾಡಲಾಗಿದ್ದು, ತಳ ಭಾಗದಲ್ಲಿ 160 ಕಂಬಗಳನ್ನು ನಿರ್ಮಿಸಲಾಗಿದೆ. ಮೊದಲನೇ ಮಹಡಿಯಲ್ಲಿ 132 ಹಾಗೂ ಎರಡನೇ ಮಹಡಿಯಲ್ಲಿ ಈ 74 ಕಂಬಗಳ ನಿರ್ಮಾಣ ಮಾಡಲಾಗಿದೆ. ಗರ್ಭಗುಡಿಯನ್ನು ರಾಜಸ್ಥಾನದ ಮಕ್ರಾನ್ ಅಮೃತಶಿಲೆಯಿಂದ ಕೆತ್ತನೆ ಮಾಡಲಾಗಿದೆ.

ಒಟ್ಟಿನಲ್ಲಿ ಶ್ರೀರಾಮ ಮಂದಿರ ವಿಶ್ವದಲ್ಲಿ ಅತ್ಯಂತ ಅದ್ಭುತವಾಗಿರುವ ವಿನ್ಯಾಸ ಹೊಂದಿರುವ ಮಂದಿರ ಎನಿಸಿಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ.

advertisement

Leave A Reply

Your email address will not be published.